ನರ್ಸ್‌ ಸ್ವಾತಿಯನ್ನು ಕೊಂದಿದ್ದೇಕೆ ನಯಾಜ್‌ & ಟೀಂ!? ನಡೆದಿದ್ದೇನು?

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Mar 15, 2025 ‌‌ ‌‌

ರಾಜ್ಯದಲ್ಲಿ ಮತ್ತೊಮ್ಮೆ ಲವ್‌ ಜಿಹಾದ್‌ ಎಂದು ಬಿಜೆಪಿ ಹಾಗೂ ಹಿಂದೂ ಪರ ಮುಖಂಡರಿಂದ ಟೀಕೆಗೆ ಗ್ರಾಸವಾಗುತ್ತಿರುವ ಹಾವೇರಿ ಜಿಲ್ಲೆಯ ಸ್ವಾತಿ ಬ್ಯಾಡಗಿ ಪ್ರಕರಣದಲ್ಲಿ ನಿಜವಾಗಿ ನಡೆದಿದ್ದೇನು? ಇಲ್ಲಿದೆ ಅದರ ವರದಿ. 

ಕಳೆದ ಮಾರ್ಚ್‌ ಆರರಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಪತ್ತೇಪುರ ಬಳಿ ತುಂಗಭದ್ರಾ ನದಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆಯಾಗಿತ್ತು. ಈ ಸಂಬಂಧ ಸ್ಥಳೀಯರು, ಹಲಗೇರಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೃತದೇಹ ಶವಾಗಾರಕ್ಕೆ ಶಿಫ್ಟ್‌ ಮಾಡಿದ್ದ ಪೊಲೀಸರು ಮಾರ್ಚ್‌ ಏಳರಂದು ಅಂತ್ಯಕ್ರಿಯೆ ಮುಗಿಸಿದ್ದರು. ಈ ನಡುವೆ ಕಾಣೆಯಾದವರ ಪಟ್ಟಿಯಲ್ಲಿ ಪರಿಶೀಲಿಸಿದಾಗ, ಹಿರೇಕರೂರು ಪೊಲೀಸ್‌ ಠಾಣೆಯಲ್ಲಿ ದಾಖಲಾದ ಪ್ರಕರಣದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪೊಲೀಸರು ಮೃತದೇಹದ ಚಿತ್ರವನ್ನು ಪ್ರಕರಣ ದಾಖಲಿಸಿದ ತಾಯಿಗೆ ತೋರಿಸಿದಾಗ, ಮೃತಳು ಸ್ವಾತಿ ಬ್ಯಾಡಗಿ 22 ವರುಷ ಎಂದು ಗೊತ್ತಾಗಿತ್ತು. ಆನಂತರ ಪ್ರಕರಣ ತೀವ್ರ ಗಂಭೀರ ಸ್ವರೂಪ ಪಡೆದುಕೊಂಡಿತ್ತಷ್ಟೆ ಅಲ್ಲದೆ ಮರಣೋತ್ತರ ಪರೀಕ್ಷೆಯಲ್ಲಿ ಇದೊಂದು ಕೊಲೆ ಎಂಬ ಸಂಶಯ ಬಲವಾಗಿತ್ತು. 

ಸ್ವಾತಿ ಬ್ಯಾಡಗಿ ರಾಣೆಬೆನ್ನೂರಿನ ಆಸ್ಪತ್ರೆಯೊಂದರಲ್ಲಿ ನರ್ಸ್‌ ಆಗಿದ್ದರು. ಕಳೆದ ಮಾರ್ಚ್‌ ಮೂರರಂದೇ ಇವರ ಕೊಲೆ ನಡೆದಿತ್ತು. ಈ ಸಂಬಂಧ ಪ್ರಕರಣ ಬೇಧಿಸಿದ ಹಲಗೇರಿ ಪೊಲೀಸರು ನಯಾಜ್‌ ಇಮಾಮ್‌ ಸಾಬ್‌ ಬೆಣ್ಣಿಗೇರಿ ಎಂಬಾತನನ್ನು ಬಂಧಿಸಿದ್ದು, ಇನ್ನಿಬ್ಬರು ಆರೋಪಿ ಮಾಸೂರಿನ ದುರ್ಗಾಚಾರಿ ಬಡಿಗೇರ ಮತ್ತು ವಿನಾಯಕ ಪೂಜಾರನಿಗಾಗಿ ಹುಡುಕಾಟ ನಡೆಸ್ತಿದ್ದಾರೆ. 

ನಡೆದಿದ್ದೇನು? 

ಸ್ವಾತಿ ಬ್ಯಾಡಗಿ ಹಾಗೂ ನಯಾಜ್, ದುರ್ಗಾಚಾರಿ ಮತ್ತು ವಿನಾಯಕ ನಡುವೆ ಹೋರಿ ಹಬ್ಬದ ಸಂದರ್ಭದಲ್ಲಿ ಪರಸ್ಪರ ಪರಿಚಯ ಆಗಿತ್ತು. ಆನಂತರ ನಯಾಜ್‌ ನಡುವೆ ಸ್ನೇಹ ಬೆಳದು ಪರಸ್ಪರ ಸಲುಗೆ ಬೆಳದಿತ್ತು. ಇಬ್ಬರು ಆತ್ಮೀಯರಾಗಿದ್ದರು. ಈ ನಡುವೆ ನಯಾಜ್‌ಗೆ ಬೇರೊಂದು ಯುವತಿ ಜೊತೆ ನಿಶ್ಚಯವಾಗಿದೆ. ಇದರಿಂದ ಕೆರಳಿದ ಸ್ವಾತಿ ನಯಾಜ್‌ ಮನೆಗೆ ಹೋಗಿ ಗಲಾಟೆ ಮಾಡಿದ್ದಳು. ಮನೆಗೆ ಬಂದು ಗಲಾಟೆ ಮಾಡಿದ್ದರಿಂದ ಕೆರಳಿದ್ದ ನಯಾಜ್‌, ಸ್ವಾತಿಯನ್ನು ಮರ್ಡರ್‌ ಮಾಡಲು ಸ್ಕೆಚ್‌ ರೂಚಿಸಿ ಮಾರ್ಚ್‌ ಮೂರರಂದು ಆಕೆಯನ್ನು ರಟ್ಟೆಹಳ್ಳಿಗೆ ಕರೆಸಿಕೊಂಡಿದ್ದ. ಅಲ್ಲಿಂದ ರಾಣೆಬೆನ್ನೂರು ಸುರ್ವಣ ಉದ್ಯಾನಕ್ಕೆ ಹೋಗಿ, ಅಲ್ಲಿ ದುರ್ಗಾಚಾರಿ ಹಾಗೂ ವಿನಾಯಕ್‌ನ ಜೊತೆಗೆ ಪುನಃ ರಟ್ಟೆಹಳ್ಳಿಯ ಕಬ್ಬಿಣಕಂತಿ ಮಠದ  ಬಳಿ ಇರುವ ಪಾಳು ಬಿದ್ದ ಶಾಲೆಯ ಆವರಣಕ್ಕೆ ಹೋಗಿ ಮಾತುಕತೆ ಆರಂಭಿಸಿದ್ದಾರೆ. ಈ ವೇಳೆ ನಯಾಜ್‌ ಜೊತೆ ಸ್ವಾತಿ ಜಗಳವಾಡಿದ್ದಾಳೆ. ಅಂತಿಮವಾಗಿ ನಯಾಜ್‌ , ವಿನಾಯಕ್‌ , ದುರ್ಗಾಚಾರಿ, ಸ್ವಾತಿ ಕುತ್ತಿಗೆಗೆ ಟವಲ್‌ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದು, ಆನಂತರ ಮೃತದೇಹವನ್ನು ನಂದಿಗುಂಡಿ ಬಳಿಯಲ್ಲಿ ಸಿಗುವ ತುಂಗಭದ್ರಾ ನದಿಗೆ ಎಸೆದಿದ್ದರು. ಇದೀಗ ಪ್ರಕರಣ ಬೇಧಿಸಿರುವ ಪೊಲೀಸರು ಇನ್ನಿಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Share This Article