ತೇಜಸ್ವಿ ಕಥೆ ನೆನಪಿಸಿದ ಬೈರಾಪುದ ಹುಲಿಯ ಸಾವು | ನಡೆಯಿತೆ ಶಿಕಾರಿ? | ಅರಣ್ಯ ಸಚಿವರ ಆದೇಶದಲ್ಲಿ ಏನಿದೆ

13

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 18, 2025 ‌‌ 

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು  ಬೈರಾಪುರದ ಸಮೀಪದ ಅರಣ್ಯ ಪ್ರದೇಶದಲ್ಲಿ ಸಿಗುವ ಅಂಬ್ಲಿಗೋಳದ ಡ್ಯಾಂ ಬ್ಯಾಕ್‌ ವಾಟರ್‌ ಬಳಿ ಪತ್ತೆಯಾದ ಹುಲಿ ಮೃತದೇಹ ವಿಚಾರವನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಹುಲಿ ಕಳೆಬರಹ ಸಿಕ್ಕ ಬೆನ್ನಲ್ಲೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ, ಪ್ರಕರಣದ ತನಿಖೆಗೆ ಮಹತ್ವದ ಆದೇಶ ಹೊರಡಿಸಿದ್ದಾರೆ. ಆದೇಶದ ವಿವರ ಹೀಗಿದೆ. 

- Advertisement -

ಬೈರಾಪುರದ ಹುಲಿ ಸಾವು | ಅಂಬ್ಲಿಗೋಳ ಹಿನ್ನೀರಿನಲ್ಲಿ ತೇಲಿದ ವ್ಯಾ‍ಘ್ರನ ಮೃತದೇಹ! ಏನಿದು ಘಟನೆ

ಅರಣ್ಯ ಸಚಿವ ಈಶ್ವರ್‌ ಖಂಡ್ರೆಯವರ ಆದೇಶ

ಶಿವಮೊಗ್ಗ ಜಿಲ್ಲೆ ಸಾಗರ ಅರಣ್ಯ ವಿಭಾಗದ, ಬೈರಾಪುರ ಗ್ರಾಮದ ಅಂಬಲಿಗೋಳ ಜಲಾಶಯದ ಹಿನ್ನೀರಿನಲ್ಲಿ ಸೋಮವಾರ ದಿ. 17 02 2025ರ ಸಂಜೆ 7-8 ವರ್ಷದ ಗಂಡು ಹುಲಿಯ ಮೃತದೇಹ ಪತ್ತೆಯಾಗಿದ್ದು, ಗುಂಡು ಹೊಡೆದ ಗಾಯವೂ ಇರುವುದಾಗಿ ಮಾಧ್ಯಮಗಳಲ್ಲಿ ಸಚಿತ್ರ ವರದಿಗಳು ಪ್ರಕಟವಾಗಿದ್ದು, ಈ ಪ್ರದೇಶದಲ್ಲಿ ಯಾವತ್ತೂ ಹುಲಿಯ ದರ್ಶನವೇ ಆಗಿಲ್ಲ. ಹೀಗಾಗಿ ಬೇರೆ ಕಡೆ ಹುಲಿ ಕೊಂದು ಇಲ್ಲಿ ಹಾಕಿರಬಹುದು ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿರುವುದಾಗಿಯೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದರಿ ಪ್ರಕರಣದ ಬಗ್ಗೆ ಕೂಲಂಕಷ ತನಿಖೆ ನಡೆಸಿ 10 ದಿನಗಳ ಒಳಗಾಗಿ ವಾಸ್ತವ ವರದಿಯನ್ನು ಕಡತದಲ್ಲಿ ಈ ಕಚೇರಿಗೆ ಮಂಡಿಸಲು ಸೂಚಿಸಿದೆ.

ಘಟನೆಯ ಅನುಮಾನ

ಮಲೆನಾಡು ಟುಡೆ ಗಂಡು ಹುಲಿಯ ಸಾವಿನ ಬಗ್ಗೆ ಮಾಹಿತಿ ಸಂಗ್ರಹಿಸುವ ಸಲುವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ಮಾಡಿತ್ತು. ಆದರೆ ಶಿವಮೊಗ್ಗ ಅರಣ್ಯ ಇಲಾಖೆಯಲ್ಲಿ ಈ ಬಗ್ಗೆ ಸಮರ್ಪಕ ಮಾಹಿತಿ ಲಭ್ಯವಾಗಿಲ್ಲ. ಆದಾಗ್ಯು ಮೂಲಗಳ ಪ್ರಕಾರ, ಹುಲಿಯನ್ನು ಬೇರೆ ಕಡೆಯಲ್ಲಿ ಕೊಂದು ಇಲ್ಲಿಗೆ ತಂದು ಹಾಕಿರುವ ಸಾಧ್ಯತೆಗಳು ಹೆಚ್ಚಿವೆ ಎನ್ನಲಾಗುತ್ತಿದೆ. ಈ ಹಿಂದೆ ಪೂರ್ಣ ಚಂದ್ರ ತೇಜಸ್ವಿಯವರ ಕಥೆಗಳಲ್ಲಿ ಈ ಭಾಗದ ನರಭಕ್ಷಕ ಹುಲಿಗಳ ಬೇಟೆ ಬಗ್ಗೆ ಪ್ರಸ್ತಾಪವಿತ್ತು. ತೇಜಸ್ವಿಯವರ ಕಥೆಗಳಿಗೆ ಸಂಬಂಧಿಸಿದ ಜಾಗಗಳು ಇವತ್ತಿಗೂ ಇದೇ ಪ್ರದೇಶಗಳಲ್ಲಿ ಕಾಣಲು ಸಿಗುತ್ತದೆ.  ಇದೀಗ ಬೈರಾಪುರದ ಹುಲಿಯ ಸಾವು ಪೂರ್ಣಚಂದ್ರೆ ತೇಜಸ್ವಿಯವರ ಕಥೆಯನ್ನು ನೆನಪಿಸ್ತಿದೆ. 

SUMMARY | shivamogga tiger death case forest minister order to probe mater

KEY WORDS |  shivamogga tiger death case, forest minister order to probe mater

Share This Article
Leave a Comment

Leave a Reply

Your email address will not be published. Required fields are marked *