SHIVAMOGGA| MALENADUTODAY NEWS | ಮಲೆನಾಡು ಟುಡೆ Mar 16, 2025  
ಕರಾವಳಿಯ ಧಾರ್ಮಿಕ ಕ್ಷೇತ್ರಗಳಲ್ಲಿ ಚಿತ್ರನಟರು ಸೇರಿದಂತೆ ಸೆಲೆಬ್ರಿಟಿಗಳ ದಂಡೆ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸುತ್ತಿದೆ. ಇತ್ತೀಚೆಗೆ ಅಂದರೆ ಕಳೆದ ಮಾರ್ಚ್ 13 ರಂದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿಕೊಟ್ಟಿದ್ದ ಬಾಲಿವುಡ್ ತಾರೆ ಕತ್ರಿನಾ ಕೈಫ್ ಸರ್ಪ ಸಂಸ್ಕಾರ ಸೇವೆ ಕೈಗೊಂಡಿದ್ದರು.
ಇದರ ಬೆನ್ನಲ್ಲೆ ನಿನ್ನೆ ದಿನ ಖ್ಯಾತ ನಟ ಪ್ರಭುದೇವ ಕುಟುಂಬ ಸಮೇತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ. ತಮ್ಮ ಪತ್ನಿ ಹಾಗೂ ಕುಟುಂಬ ವರ್ಗದವರ ಜೊತೆಗೆ ದೇವಾಲಯಕ್ಕೆ ಬಂದಿದ್ದ ಪ್ರಭುದೇವ ಮುಖ್ಯ ದೇವರ ದರುಶನದ ಬಳಿಕ, ಸಂಪುಟ ನರಸಿಂಹಸ್ವಾಮಿ ಮಠಕ್ಕೆ ಭೇಟಿ ನೀಡಿದರು.
ಇನ್ನೊಂದೆಡೆ ನಿನ್ನೆ ದಿನ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಲವ್ಲಿ ಸ್ಟಾರ್ ಪ್ರೇಮ್ ಹಾಗೂ ನಟಿ ಶರಣ್ಯ ಶೆಟ್ಟಿ ಭೇಟಿಕೊಟ್ಟು ವಿಶೇಷ ಪೂಜೆ ಸಲ್ಲಿಸಿದರು. ಪ್ರಾತ:ಕಾಲದಲ್ಲಿಯೇ ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ಇಬ್ಬರು ಬಳಿಕ ಕೋಟಿಗೀತಾಲೇಖನ ಯಜ್ಞ ದೀಕ್ಷೆಯನ್ನು ಸ್ವೀಕರಿಸಿದರು.
 
 
 
  
  
  
 