ಯೂಟ್ಯೂಬ್​ ನಲ್ಲಿ ಸದ್ಯದಲ್ಲಿಯೇ ಟ್ರೆಂಡಿಗ್​ ಬದಲಾವಣೆ! ಏನದು ಗೊತ್ತಾ?

ajjimane ganesh

YouTube Trending missing from July 21 ಯೂಟ್ಯೂಬ್‌ನಲ್ಲಿ [YouTube] ‘ಟ್ರೆಂಡಿಂಗ್’ ವಿಭಾಗ ಇನ್ನು ಇರಲ್ಲ: ಜುಲೈ 21 ರಿಂದ ಹೊಸ ಬದಲಾವಣೆ!

YouTube Trending missing from July 21 ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್​ಫಾರ್ಮ್​ ಯೂಟ್ಯೂಬ್ [YouTube] ತನ್ನ  “ಟ್ರೆಂಡಿಂಗ್” (ಪ್ರಚಲಿತ) ವಿಭಾಗವನ್ನು ಜುಲೈ 21, 2025 ರಿಂದ ತೆಗೆದುಹಾಕಲು ನಿರ್ಧರಿಸಿದೆ. ಈ ಬದಲಾವಣೆಯು ವೀಡಿಯೊಗಳನ್ನು ಹುಡುಕುವಾಗ ಮಹತ್ವದ ಪರಿಣಾಮಗಳನ್ನು ಬೀರಲಿದೆ ಎನ್ನಲಾಗಿದೆ. 

ಯೂಟ್ಯೂಬ್​ನಲ್ಲಿ ಸಾಮಾನ್ಯವಾಗಿಯೇ Trending page ಮತ್ತು  Trending Now ಟ್ಯಾಗ್​ ಅನ್ನು ಯೂಟ್ಯೂಬ್​ ತೆಗೆದುಹಾಕಲು ಮುಂದಾಗಿದೆ.  ಇದಕ್ಕೆ ಬದಲಾಗಿ ಯೂಟ್ಯೂಬ್ ಚಾರ್ಟ್‌ಗಳು/ YouTube Charts ಎಂಬ ಆಪ್ಶನ್​ ಬರಲಿದೆ.  ಅದರಲ್ಲಿ ವಿವಿಧ ವಿಭಾಗಗಳಿಗೆ ಸಂಬಂಧಿಸಿದಂತೆ ಟ್ರೆಂಡ್ ಆಗಿರುವ ವಿಡಿಯೋಗಳನ್ನು ತೋರಿಸಲಿದೆ. ಅಂದರೆ,  ಸಂ ಪಾಡ್‌ಕಾಸ್ಟ್‌ಗಳು podcasts , ಟ್ರೈಲರ್‌ಗಳು trailers, ಗೇಮಿಂಗ್ ಮುಂತಾದ ವಿವಿಧ ವಿಭಾಗಗಳಲ್ಲಿ ಟ್ರೆಂಡಿಂಗ್‌ನಲ್ಲಿರುವ ವೀಡಿಯೊಗಳನ್ನು ಯೂಟ್ಯೂಬ್​ ಚಾರ್ಟ್​ನಲ್ಲಿ ನೋಡಬಹುದು ಎನ್ನಲಾಗಿದೆ. 

ವಿಶೇಷ ಅಂದರೆ ಯೂಟ್ಯೂಬ್​ ವೈಯಕ್ತಿಕವಾಗಿ ಹೆಚ್ಚು ಆಸಕ್ತಿ ಹೊಂದಿದ ವಿಷಯಗಳಿಗೆ ತಕ್ಕಂತೆ ವಿಡಿಯೋಗಳನ್ನು ಹೆಚ್ಚೆಚ್ಚು ಪ್ರದರ್ಶನ ಮಾಡಲಿದೆ. ಈ ನಿಟ್ಟಿನಲ್ಲಿ Personalized Recommendations ಹೆಚ್ಚು ಒತ್ತು ನೀಡುತ್ತಿದೆಯಂತೆ. ಇಷ್ಟೆ ಅಲ್ಲದೆ  ಟ್ರೆಂಡಿಂಗ್ ಪುಟಕ್ಕೆ ಜನರು ಜಾಸ್ತಿ ಕ್ಲಿಕ್ ಮಾಡುತ್ತಿಲ್ಲ ಎಂಬ ಕಾರಣ ಕೂಡ ಟ್ರೆಂಡಿಂಗ್​ ವಿಭಾಗಕ್ಕೆ ಬದಲಾವಣೆ ತರಲು ಕಾರಣ ಎನ್ನಲಾಗಿದೆ.  ಜುಲೈ 21 ರಿಂದ ಈ ಬದಲಾವಣೆಗಳು ಅನ್ವಯವಾಗಲಿದ್ದು, ಬಳಕೆದಾರರು ಇದಕ್ಕೆ ಹೇಗೆ ಪ್ರತಿಕ್ರಿಯಿಸ್ತಾರೆ ಎಂಬುದು ಇನ್ನಷ್ಟೆ ಗೊತ್ತಾಗಬೇಕು. 

YouTube Trending
YouTube Trending

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ https://chat.whatsapp.com/CTxKdbjEu0zLLQD5RTVkRt

TODAY ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ https://whatsapp.com/channel/0029Va9I91s3LdQVrdq7yl1h

ಶಿವಮೊಗ್ಗದ ವಿಶೇಷ ಸುದ್ದಿಗಳಿಗಾಗಿ ಈ ಲಿಂಕ್​ ಕ್ಲಿಕ್ ಮಾಡಿ : https://malenadutoday.com/category/shivamogga/

YouTube is removing its Trending page and Trending Now list from July 21, 2025.

ಯೂಟ್ಯೂಬ್, ಟ್ರೆಂಡಿಂಗ್, ಬದಲಾವಣೆ, ಯೂಟ್ಯೂಬ್ ಚಾರ್ಟ್‌ಗಳು, ವೈಯಕ್ತೀಕರಿಸಿದ ಶಿಫಾರಸುಗಳು, ಹೋಮ್‌ಪೇಜ್, ವೀಡಿಯೊ ಸ್ಟ್ರೀಮಿಂಗ್, ಜುಲೈ 21, 2025, ಹೊಸ ವೈಶಿಷ್ಟ್ಯ, YouTube, Trending, changes, YouTube Charts, personalized recommendations, homepage, video streaming, July 21 2025, new feature, content discovery, Hashtags: #YouTubeTrending #YouTubeUpdates #PersonalizedRecommendations #YouTubeCharts #VideoStreaming #DigitalNews #TechNews #ContentDiscovery

YouTube Trending missing from July 21

 

Share This Article