Youth risks life to rescue boy : ಜೀವನದಲ್ಲಿ ಇನ್ನೊಬ್ಬರಿಗೆ ಸಹಾಯ ಆಗಬೇಕು, ಆಗಲೇ ಮನುಷ್ಯ ಜನ್ಮ ಸಾರ್ಥಕ ಅನ್ನಿಸಿಕೊಳ್ಳುವುದು ಎನ್ನುತ್ತಾರೆ ಹಿರಿಯರು. ಇದಕ್ಕೆ ಪೂರಕ ಎಂಬಂತೆ ಯುವಕನೊಬ್ಬ, ಪುಟ್ಟ ಬಾಲಕನ ಜೀವ ಉಳಿಸುವ ಸಲುವಾಗಿ ತನ್ನ ಜೀವವನ್ನೆ ಪಣಕ್ಕಿಟ್ಟ ಘಟನೆಯ ದೃಶ್ಯವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭರಪೂರ ಮೆಚ್ಚುಗೆ ಪಡೆಯುತ್ತಿದೆ.
ತಮಿಳುನಾಡಲ್ಲಿ ನಡೆದ ಘಟನೆ
ಒಂದು ನಿಮಿಷ ಮುವತ್ತು ಸೆಕೆಂಡ್ಗಳ ವಿಡಿಯೋ ಈಗಾಗಲೇ ರಾಷ್ಟ್ರದೆಲ್ಲೆಡೆ ವೈರಲ್ ಆಗುತ್ತಿದ್ದು, ಯುವಕನ ಸಾಹಸವನ್ನು ನೋಡುತ್ತಾ, ಜನರು ಕಣ್ತುಂಬಿಕೊಳ್ಳುತ್ತಿದ್ದಾರೆ.

ಏನಿದು ಘಟನೆ?!
ಇದೊಂದು ಸಿನಿಮಾ ರೀತಿಯ ಘಟನೆ. ಈ ಘಟನೆ ತಮಿಳುನಾಡಿನ ಆರುಂಬಕ್ಕಂನಲ್ಲಿ ನಡೆದಿದೆ. ಕಳೆದ ಏಪ್ರಿಲ್ ಆರರಂದು ನಡೆದ ಘಟನೆಯ ಪೂರ್ಣ ಚಿತ್ರಣವನ್ನು ಸಿಸಿ ಕ್ಯಾಮರಾವೊಂದು ಸೆರೆಹಿಡಿದಿದೆ. ಇಲ್ಲಿನ ರಸ್ತೆಯೊಂದರಲ್ಲಿ ಮಳೆ ಬಂದು ನೀರು ತುಂಬಿತ್ತು. ಮಳೆಗಾಳಿಗೆ ಭೂಗತ ವಿದ್ಯುತ್ ಲೈನ್ವೊಂದು ಆ ನೀರಿಗೆ ತಾಗಿ ಕರೆಂಟ್ ಪ್ರವಹಿಸಿತ್ತು.. ಅದೇ ಸಂದರ್ಭದಲ್ಲಿ ಅಲ್ಲಿಗೆ ಮೂರನೇ ತರಗತಿ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಕಾಲು ನೆನೆಸಿಕೊಂಡು ಆಟವಾಡಿಕೊಂಡು ಬರುತ್ತಿದ್ದ. ಆದರೆ ಆತನಿಗೆ ಮುಂದಿನ ಅಪಾಯದ ಅರಿವು ಬರಲಿಲ್ಲ.
ಭದ್ರಾವತಿಯಲ್ಲಿ ಹಾರಿತು ಪೊಲೀಸ್ ಗುಂಡು | ಗುಂಡನ ಕಾಲಿಗೆ ಬುಲೆಟ್ ಫೈರ್ |
Youth risks life to rescue boy : ಜೀವಕ್ಕೆ ಜೀವ ಪಣವಿಟ್ಟ ಹೀರೋ
ಒಬ್ಬ ವ್ಯಕ್ತಿ ಹೀರೋ ಆಗೋದಕ್ಕೆ ಯಾವುದೇ ವಿಶೇಷ ಪವರ್ ಬೇಕಿಲ್ಲ. ಅನಿವಾರ್ಯತೆ ಸಂದರ್ಭದಲ್ಲಿ ಸಹಾಯದ ಕೈ ಚಾಚಿದರೆ ಸಾಕು ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮೂರನೇ ತರಗತಿಯ ವಿದ್ಯಾರ್ಥಿ ಮಳೆ ನೀರಿನಲ್ಲಿ ನಡೆದು ಬರುತ್ತಿದ್ದಾಗ, ಆತನಿಗೆ ಕರೆಂಟ್ ಶಾಕ್ ಹೊಡೆದಿದೆ. ಪರಿಣಾಮ ಆತ ಅಲ್ಲಿಯೇ ಕುಸಿದು ಬಿದ್ದಿದ್ದಾನೆ.

ಬೈಕ್ ಸವಾರ 24 ವರ್ಷದ ಕಣ್ಣನ್ ತಮಿಳ್ಸೆಲ್ವನ್
ಆತ ಬಿದ್ದು ಒದ್ದಾಡುತ್ತಿರುವಾಗಲೇ ಟರ್ನಿಗ್ನಿಂದ ಬಂದ ಬೈಕ್ ಸವಾರ 24 ವರ್ಷದ ಕಣ್ಣನ್ ತಮಿಳ್ಸೆಲ್ವನ್ ಬೈಕ್ನಿಂದ ತಕ್ಷಣವೇ ಇಳಿಯುತ್ತಾನೆ. ಕಾಲಿನ ಶೂ ತೆಗೆದು ಹೆಲ್ಮೆಟ್ ಅಲ್ಲಿಯೇ ಬಿಸಾಡಿ ಬಾಲಕನ ಬಳಿ ಓಡುತ್ತಾನೆ. ಆದರೆ ಕರೆಂಟ್ ಹರಿಯುತ್ತಿರುವಾಗ ಮಗುವನ್ನ ರಕ್ಷಿಸಲು ಏನು ಮಾಡಬೇಕು ಎನ್ನುವುದು ಅವನಿಗೂ ಗೊತ್ತಾಗಲ್ಲ. ಅಕ್ಕಪಕ್ಕದವರನ್ನ ಕೂಗುತ್ತಾನೆ. ಮನುಷ್ಯರಲ್ಲಿಯೇ ಇರುವ ವತ್ಯಾಸ ನೋಡಿ. ಅಪರಿಚಿತನೊಬ್ಬ ಇನ್ನೊಬ್ಬ ಬಾಲಕನ ರಕ್ಷಣೆಗೆ ಎದ್ದುಬಿದ್ದು ಓಡಿ ಬಂದರೆ, ಇದೇ ವೇಳೆ ಅಲ್ಲಿಗೆ ಬಂದ ಬೈಕ್ ಸವಾರ ಬೈಕ್ನಿಂದ ಕೆಳಕ್ಕೂ ಇಳಿಯದೇ ಸುಮ್ಮನೆ ನೋಡುತ್ತಿದ್ದ.
Youth risks life to rescue boy : ಬಾಲಕನ ಕೈ ಹಿಡಿದು ಎಳೆದು ಎತ್ತಿಕೊಂಡ ಕಣ್ಣನ್
ಆದರೆ ಕಣ್ಣನ್ ಹಾಗೆ ಮಾಡಲಿಲ್ಲ. ಕ್ಷಣಕಾಲ ಗೊಂದಲಕ್ಕೆ ಒಳಗಾಗಿ ಏನು ಮಾಡುವುದು ಎಂದು ಯೋಚಿಸಿದ ಆತ, ಕೊನೆಗೆ ರಸ್ತೆಯ ಬದಿ ನೀರಿಲ್ಲದ ಜಾಗದಲ್ಲಿ ನಿಂತು ನಿಧಾನಕ್ಕೆ ಬಾಲಕನ ಕೈ ಹಿಡಿದು ಎಳೆಯಲು ಮುಂದಾದ, ಅಷ್ಟೊತ್ತಿಗೆ ಆತನಿಗೆ ಕರೆಂಟ್ ಶಾಕ್ ಹೊಡೆಯುತ್ತಿಲ್ಲ ಎಂದು ಗೊತ್ತಾಗಿದೆ. ಹಾಗಾಗಿ ರಬಕ್ಕನ್ನೆ ಬಾಲಕನ ಕೈ ಹಿಡಿದು ಎಳೆದು ಎತ್ತಿಕೊಂಡ ಕಣ್ಣನ್, ಅಲ್ಲಿಂದ ಇನ್ನೊಂದು ಬದಿಗೆ ತೆರಳಿದ.

Youth risks life to rescue boy : ಬಾಲಕನಿಗೆ ಸಿಪಿಆರ್ ಮಾಡಿದ
ಆದರೆ ವಿದ್ಯುತ್ ಆಘಾತದಿಂದ ಮೂರನೇ ತರಗತಿಯ ಬಾಲಕ ಪ್ರಜ್ಞೆ ತಪ್ಪಿದ್ದ. ಅಲ್ಲದೆ ಆತನಿಗೆ ಉಸಿರಾಟ ಕಷ್ಟವಾಗಿತ್ತು. ಕಣ್ಣನ್ಗೆ ಅದೇನು ಅನಿಸಿತ್ತೋ ಏನೋ ತಾನು ಅಲ್ಲಿ ನೋಡಿ ತಿಳಿದಿದ್ದಂತೆ ಬಾಲಕನಿಗೆ ಸಿಪಿಆರ್ ಮಾಡಿದ್ದ. ಕೆಲವು ಸೆಕೆಂಡ್ಗಳ ನಂತರ ಬಾಲಕ ನಾರ್ಮಲ್ ಆಗಿದ್ದ. ಅಷ್ಟರಲ್ಲಿ ಅಲ್ಲಿಗೆ ಓಡಿ ಬಂದ ಸ್ಥಳೀಯರು ಬಾಲಕನನ್ನು ಆಸ್ಪತ್ರೆಗೆ ರವಾನಿಸಿದರು. ಆತ 9 ವರ್ಷದ ಜೇಡೆನ್ ರಯಾನ್ ಎಂದು ಗೊತ್ತಾಗಿದೆ.
ಸದ್ಯ ಯುವಕನ ಸಾಹಸ ಕಂಡು ಸೋಶಿಯಲ್ ಮೀಡಿಯಾ ಮಂದಿಯ ಕಣ್ತುಂಬಿ ಬರುತ್ತಿದೆ. ಹೀರೋ ಆಗಲು ಅತಿಶಯದ ಶಕ್ತಿಯ ಅಗತ್ಯವಿಲ್ಲ. ಇಷ್ಟೆ ನೋಡಿ ಜೀವನ ಸಾರ್ಥಕತೆಯ ಶ್ರಮ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

In Arumbakkam, Chennai, a 9-year-old boy got an electric shock while walking through rainwater. While others were scared, Kannan stepped in, pulled him out, gave CPR, and saved his life. Hats off to Kannan for his kind and brave act! 🙌#Arumbakkam #Chennai #TamilNadu #TN pic.twitter.com/fkECrYHFua
— Karl Marx2.O (@Marx2PointO) April 20, 2025
