ಮತ್ತೆ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ತಿರುವ ವೈ.ಹೆಚ್. ನಾಗರಾಜ್​! ಕುತೂಹಲ ಮೂಡಿಸಿದ ಉಚ್ಚಾಟಣೆ ಪ್ರಶ್ನೆ!

YH Nagaraj, who has been expelled from the party, is seen with Congress leaders.

ಮತ್ತೆ ಕಾಂಗ್ರೆಸ್ ನಾಯಕರ ಜೊತೆ ಕಾಣಿಸಿಕೊಳ್ತಿರುವ ವೈ.ಹೆಚ್. ನಾಗರಾಜ್​! ಕುತೂಹಲ ಮೂಡಿಸಿದ ಉಚ್ಚಾಟಣೆ ಪ್ರಶ್ನೆ!

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS  

ಅಗತ್ಯ ಸಮಯದಲ್ಲಿ ಕೈಕೊಟ್ಟವರನ್ನ ಕ್ಷಮಿಸುವ ಮಾತೇ ಇಲ್ಲ ಎಂದು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಹೇಳುತ್ತಿದೆ. ಅಂತವರನ್ನ ಪಕ್ಷಕ್ಕೆ ಕರೆದುಕೊಳ್ಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳುತ್ತಿರುವ ಬೆನ್ನಲ್ಲಿಯು, ಕಾಂಗ್ರೆಸ್​ನಿಂದ ಹೊರಕ್ಕೆ ಹೋದವರು ಪಕ್ಷಕ್ಕೆ ವಾಪಸ್ ಆಗುತ್ತಿದ್ಧಾರೆ ಎಂಬುದುಕ್ಕೆ ಮತ್ತೊಮ್ಮೆ ಸಾಕ್ಷಿ ಸಿಕ್ಕಿದೆ. 

ಕಾಂಗ್ರೆಸ್​ನಿಂದ ಜೆಡಿಎಸ್​ಗೆ ಹೋಗಿ ಆಯನೂರು ಮಂಜುನಾಥ್​ರಿಗೆ ಸಪೋರ್ಟ್​ ಮಾಡಿದ್ದ ವೈ.ಹೆಚ್​.ನಾಗರಾಜ್​ ಇದೀಗ ಮತ್ತೆ ಕಾಂಗ್ರೆಸ್ ವಲಯದಲ್ಲಿ ಕಾಣಿಸಿಕೊಳ್ತಿದ್ದಾರೆ. ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್​ರವರ ಜೊತೆಗೆ ಕಾಣಿಸಿಕೊಂಡಿದ್ದ ಅವರು ಇದೀಗ ನಿನ್ನೆ ಭದ್ರಾವತಿಯಲ್ಲಿ ನಡೆದ ಲಕ್ಷ್ಮೀ ಹೆಬ್ಬಾಳ್ಕರ್​ರವರ ಕಾರ್ಯಕ್ರಮದಲ್ಲಿಯು ಕಾಣಿಸಿಕೊಂಡಿದ್ದಾರೆ.  

ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಪರ ಕೆಲಸ ಮಾಡಿದ್ದಕ್ಕೆ , ಅವರನ್ನ ಆರು ವರ್ಷಗಳ ಕಾಲ ಉಚ್ಚಾಟಣೆ ಮಾಡಲಾಗಿತ್ತು. ಆದರೆ ಇದೀಗ  ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಸನ್ಮಾನ ಮತ್ತು ಅಭಿನಂದನೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಖಾಸಗಿ ಕಾರ್ಯಕ್ರಮವಾಗಿದ್ದರೂ, ನಾಗರಾಜ್​ರವರ ಕಾಂಗ್ರೆಸ್​ ವಲಯದಲ್ಲಿನ ಉಪಸ್ಥಿತಿ ಮತ್ತೆ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಯ್ತಾ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.ಇನ್ನೂ ಜಿಲ್ಲೆಯ ವೈ.ಹೆಚ್​.ನಾಗರಾಜ್​ ರವರು ತಮ್ಮದೆ ಆದ ವಿಶಿಷ್ಟ ವ್ಯಕ್ತಿತ್ವ ಹಾಗೂ ಸ್ವಭಾವದಿಂದಲೆ ಗುರುತಿಸಿಕೊಂಡವರು, ಅದೇ ರೀತಿಯಲ್ಲಿಯೇ ಇದೀಗ ಮತ್ತೆ ಕಾಂಗ್ರೆಸ್​ ನಾಯಕರನ್ನು ಟಚ್ ಮಾಡುತ್ತಿದ್ದಾರೆ. 

ರಾಷ್ಟ್ರೀಯ ಹೆದ್ದಾರಿಯಲ್ಲಿ ಇನ್ನೋವ್ಹಾ ಕಾರಿಗೆ ಜಿಂಕೆ ಡಿಕ್ಕಿ! ರಸ್ತೆಯಲ್ಲಿಯೇ ಸಾವನ್ನಪ್ಪಿದ ವನ್ಯಜೀವಿ!

ಶಿವಮೊಗ್ಗ ತಾಲೂಕಿನ ಚೋರಡಿ ಸಮೀಪ, ನಿನ್ನೆ  ಭಾನುವಾರ ಸಂಜೆ ವಾಹನಕ್ಕೆ ಡಿಕ್ಕಿಯಾಗಿ ಜಿಂಕೆಯೊಂದು ಸಾವಿಗೀಡಾಗಿದೆ.  

ಬಿ.ಹೆಚ್.ರಸ್ತೆಯ ಕುಮದ್ವತಿ ಸೇತುವೆಗೆ ಅನತಿದೂರದಲ್ಲಿಯೇ ಈ ಘಟನೆ ಸಂಭವಿಸಿದೆ. 

ಹೇಗಾಯ್ತು ಘಟನೆ ?

ಸಾಗರದಿಂದ ಶಿವಮೊಗ್ಗ ಕಡೆ ಬರುತಿದ್ದ ಇನ್ನೋವಾಃ ಕಾರಿಗೆ, ಅದೇ ಸಂದರ್ಭದಲ್ಲಿ ವೇಗವಾಗಿ ರಸ್ತೆ ದಾಟುತಿದ್ದ ಗಂಡು ಜಿಂಕೆಯೊಂದು ಡಿಕ್ಕಿ ಹೊಡೆದಿದೆ. ಜಿಂಕೆ ರಸ್ತೆ ದಾಟುತ್ತಿರುವುದು,  ಚಾಲಕನ ಗಮನಕ್ಕೆ ಬಾರದೆ ಹೋಗಿದ್ದರಿಂದ ಜಿಂಕೆ ಕಾರಿಗೆ ಡಿಕ್ಕಿಯಾಗಿದೆ. 

ಇನ್ನೂ ಜಿಂಕೆ ಡಿಕ್ಕಿ ಹೊಡೆದ ರಬಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂ ಆಗಿದ್ದು, ಅದರ. ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಜಿಂಕೆ ಸಠಾವನ್ನಪ್ಪಿದೆ. ಇನ್ನೂ ಘಟನೆ ಸಂಬಂಧ ಸ್ಥಳ ಮಹಜರು ನಡೆಸಿರುವ ಅರಣ್ಯ ಇಲಾಖೆ ಸಿಬ್ಬಂದಿ ದೂರು ದಾಖಲಿಸಿಕೊಂಡಿದ್ದಾರೆ.