x&y kannada movie : ಕ್ರೋಮೋಸೋಮ್ಸ್ಗಳ ವಿಭಿನ್ನ ಕಥೆಯ x&y ಚಿತ್ರ | ರಿಲೀಸ್ ಯಾವಾಗ
x&y movie release date : ರಾಮಾ ರಾಮಾ ರೇ ಚಿತ್ರದ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ನಟಿಸಿ ನಿರ್ಮಿಸಿ ನಿರ್ದೇಶಿಸಿರುವ ಇದೇ ಜೂನ್ 26 ರಂದು ರಾಜ್ಯಾಧ್ಯಂತ ಬಿಡುಗಡೆಯಾಗುತ್ತಿದೆ.
x&y kannada movie ಈ ಕುರಿತು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸತ್ಯಪ್ರಕಾಶ್ ಹುಟ್ಟದೇ ಇರುವ ಆತ್ಮಕ್ಕೆ ಬದುಕಬೇಕೆನ್ನುವ ಆಸೆ ಬಂದರೆ ಹೇಗಿರುತ್ತೆ ಎಂಬುದನ್ನು ವಿಭಿನ್ನವಾಗಿ ತೋರಿಸುವ ಕ್ರೋಮೋಸೋಮ್ಸ್ ಕಥೆಯನ್ನು ಮಾಡುತ್ತಿದ್ದೇವೆ. ತನ್ನ ತಂದೆ ತಾಯಿ ಯಾರು ಎಂದು ಹುಡುಕಾಟದಲ್ಲಿರುವ ಕ್ರೋಮೋಸೋಮ್ಸ್ ಸತ್ತಿರುವ ವ್ಯಕ್ತಿಯ ದೇಹಕ್ಕೆ ಸೇರಿ ಭೂಮಿಗೆ ಬಂದ ಮೇಲೆ ಏನೇನಾಗುತ್ತದೆ ಎಂಬ ಅಂಶಗಳನ್ನು ನಾವು ಸಿನಿಮಾ ಮೂಲಕ ತೋರಿಸಿದ್ದೇವೆ. ಮನೆಗೆ ಗೆಸ್ಟ್ ಬಂದರೆ ಅವರು ಬಂದು ಹೋಗುವ ವರೆಗೆ ಕಂಫರ್ಟಬಲ್ ಆಗಿರಲಿ ಎಂದು ನೋಡಿಕೊಳ್ಳುತ್ತೇವೆ. ಹಾಗೆ ಮಗು ಭೂಮಿಗೆ ಬಂದರೆ ಕಂಫರ್ಟಬಲ್ ಆಗಿರಲಿ ಎಂದು ನೋಡಿಕೊಂಡಿದ್ದೇವಾ ಎಂಬ ಪ್ರಶ್ನೆಗೆ ಈ ಸಿನಿಮಾದಲ್ಲಿ ಉತ್ತರ ಸಿಗಲಿದೆ. ಇಂತಹ ಕಥೆ ದೇಶದಲ್ಲಿಯೇ ಮೊದಲಾಗಿದ್ದು, ಇದರಲ್ಲಿ ಹಿರಿಯ ಕಲಾವಿದರಾದ ದೊಡ್ಡಣ್ಣ, ವೀಣಾ ಸುಂದರ್ ಸೇರಿದಂತೆ ಇನ್ನತರೇ ಕಲಾವಿದರು ನಟಿಸಿದ್ದಾರೆ ಎಂದರು.
ಈ ಸಿನಿಮಾದಲ್ಲಿ ಐದು ಹಾಡುಗಳಿದ್ದು, ಚಿತ್ರಕ್ಕೆ ಕೌಶಿಕ್ ಹರ್ಷ ಸಂಗೀತ ನಿರದೇಶನ ಮಾಡಿದ್ದಾರೆ. ಹಾಗೆಯೇ ಚಿತ್ರಕ್ಕೆ ಲವಿತ್ ಛಾಯಾಗ್ರಹಣ ಮಾಡಿದ್ದಾರೆ.



