ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 19 2025 : ಸಾಮಾನ್ಯವಾಗಿ ಪಾನಿಪುರಿ ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲಿಯು ಹೆಣ್ಣುಮಕ್ಕಳಿಗೆ ಗೋಲ್ಗಪ್ಪ ಅಂದರೆ ಪಂಚಪ್ರಾಣವೇ ಆಗಿರುತ್ತೆ. ಆದರೆ ಇವತ್ತಿನ ಸುದ್ದಿಯಲ್ಲಿ ಪಾನಿಪುರಿ ಮೇಲಿನ ಮಹಿಳೆಯೊಬ್ಬಳನ್ನು ರೊಚ್ಚಿಗೆಬ್ಬಿಸಿದ್ದಷ್ಟೆ ಅಲ್ಲದೆ ಆಕೆ ಪಾನಿಪುರಿಗಾಗಿ ಎಕ್ಸ್ಟ್ರೀಮ್ ಸ್ಟೆಪ್ ಇಡುವಂತೆ ಮಾಡಿತ್ತು. ಅಂದಹಾಗೆ ಇಂತಹದ್ದೊಂದು ಘಟನೆ ನಡೆದಿದ್ದು ಗುಜರಾತ್ನ ವಡೋದರಾದಲ್ಲಿ.
ಇಲ್ಲಿನ ನಿವಾಸಿಯೊಬ್ಬರು ಇವತ್ತು ಏಕಾಂಗಿಯಾಗಿ ನಡುರಸ್ತೆಯಲ್ಲಿ ಕುಳಿತುಕೊಂಡು ಪ್ರತಿಭಟನೆ ನಡೆಸ್ತಿದ್ದರು. ಆಕೆ ಯಾರು ಏಷ್ಟೆ ಹೇಳಿದರೂ ಕೇಳದೆ ಸಿಟ್ಟಿನಲ್ಲಿ ನಡುರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ ಇಳಿದಿದ್ದಳು. ಆ ಬಳಿಕ ಸ್ಥಳಕ್ಕೆ ಪೊಲೀಸರು ಬಂದು ವಿಚಾರಿಸಿದಾಗ ಆಕೆ ಹೇಳಿದ ವಿಷಯ ಕೇಳಿ ಪೊಲೀಸರಿಗೂ ನಗು ಬಂದಿದೆ.
ಇಷ್ಟಕ್ಕೂ ಮಹಿಳೆ ನಡುರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದು ಪಾನಿಪುರಿಗಾಗಿ..ಹೌದು ಪಾನಿಪುರಿ ಭಯ್ಯ 20 ರೂಪಾಯಿಗೆ ನೀಡಬೇಕಾದ 6 ಗೋಲ್ಗಪ್ಪ ಕೊಡುವ ಬದಲಿಗೆ ನಾಲ್ಕೆ ಗೋಲ್ಗಪ್ಪ ಕೊಟ್ಟಿದ್ದನ್ನಂತೆ. ಪರಿಣಾಮ ಮಹಿಳೆಯ ಹೃದಯ ಒಡದಿದೆ. ಹೀಗಾಗಿ ಪಾನಿಪುರಿ ಭಯ್ಯ ತನಗೆ ಅನ್ಯಾಯ ಮಾಡಿದ ಅಂತಾ ಮಹಿಳೆ ನಡುರಸ್ತೆಯಲ್ಲಿ ನ್ಯಾಯ ಕೇಳಿ ಧರಣಿ ಕುಳಿತು ಬಿಟ್ಟಿದ್ದಾಳೆ. ಅಂತಿಮವಾಗಿ ಸ್ಥಳಕ್ಕೆ ಬಂದ ಪೊಲೀಸರು ಮಹಿಳೆಯನ್ನು ಸಮಾಧಾನ ಪಡಿಸಿ, ಆಕೆಯ ಪ್ರತಿಭಟನೆಯನ್ನು ಸಮಾಪ್ತಿಗೊಳಿಸಿದ್ದಾರೆ.
ಈ ನಡುವೆ ಮಂದಿ ಮಹಿಳೆಯ ಧರಣಿಯ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಟ್ರೆಂಡಿಂಗ್ನಲ್ಲಿದೆ.

Woman Sits on Road Crying After Pani Puri Seller Gives Only 4 Golgappas for 20
20 रुपये में 6 पानीपुरी की जगह खिलाए चार गोलगप्पे, गुजरात के वडोदरा में सड़क पर बैठी महिला। DIAL 112 टीम ने स्थिति को संभाला। pic.twitter.com/gxCl0DGYxR
— NBT Hindi News (@NavbharatTimes) September 19, 2025
ಪಾನಿಪುರಿ ಘಟನೆ, ವಡೋದರಾ ಸುದ್ದಿ, ಗೋಲ್ಗಪ್ಪ, ರಸ್ತೆಯಲ್ಲಿ ಕುಳಿತ ಮಹಿಳೆ, ವೈರಲ್ ವಿಡಿಯೋ, ಪಾನಿಪುರಿ ಮಾರಾಟಗಾರ, ಗುಜರಾತ್, Pani Puri, Golgappa, Vadodara, viral video, woman crying, street food, Gujarat news.

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!