SHIVAMOGGA | Jan 26, 2024 | ಶಿವಮೊಗ್ಗದ ಆಯನೂರು ಸಮೀಪ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಡವಾಗಿ ವರದಿಯಾಗಿದೆ. ಇಲ್ಲಿನ ಗ್ರಾಮವೊಂದರ ನಿವಾಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಂಸಿ ಪೊಲೀಸ್ ಸ್ಟೇಷನ್
20 ವರ್ಷದ ಯುವತಿಗೆ ನಿಶ್ಚಿತಾರ್ಥವಾಗಿತ್ತು. ಮದುವೆಗೆ ದಿನಾಂಕ ನಿಗದಿಯಾಗಿ, ಕೆಲವೇ ದಿನಗಳಲ್ಲಿ ಮದುವೆ ಸಹ ನಡೆಯುವುದರಲ್ಲಿತ್ತು. ಈ ನಡುವೆ ಮದುವೆ ಕ್ಯಾನ್ಸಲ್ ಆಗಿತ್ತು. ಹುಡುಗನಿಗೆ ಇಷ್ಟವಾಗದ ಕಾರಣಕ್ಕೆ ಮದುವೆ ಕ್ಯಾನ್ಸಲ್ ಆಗಿತ್ತು. ಇದೇ ಕಾರಣಕ್ಕೆ ಬೇಸರಗೊಂಡಿದ್ದ ಯುವತಿ ಈ ರೀತಿ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ.
ನಿಶ್ಚಿತಾರ್ಥ ಮುರಿದು ಬಿದ್ದ ಕಾರಣಕ್ಕೆ ಮನನೊಂದ ಯುವತಿ ಮಲಗುತ್ತೇನೆ ಎಂದು ಹೇಳಿ, ಮಲಗುವ ಕೋಣೆಗೆ ಹೋಗಿದ್ದಾಳೆ. ಅಲ್ಲಿ ನೇಣಿಗೆ ಶರಣಾಗಿದ್ದಾಳೆ.ಇನ್ನೂ ಘಟನೆ ಸಂಬಂಧ ಕುಂಸಿ ಪೊಲೀಸ್ ಸ್ಟೇಷನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸ್ತಿದ್ದಾರೆ.
