woman arrested in meggan hospital child case ಶಿವಮೊಗ್ಗ, malenadu today news : August 24 2025, ಮಗುವನ್ನೆ ಬೇಡವೆಂದು ಆಗತಾನೆ ಹುಟ್ಟಿದ ಮಗುವಿನ ಕತ್ತು ಕೊಯ್ದು ಸಾಯಿಸಿದ ತಾಯಿಯನ್ನು ಶಿವಮೊಗ್ಗದ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದ್ದ ಘಟನೆ ಸಂಬಂಧ ಇದೀಗ ಪೊಲೀಸರು ಆರೋಪಿ ಮಹಿಳೆಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
ನಡೆದಿದ್ದೇನು ಅನ್ನುವುದನ್ನು ನೋಡುವುದಾದರೆ, ಕಳೆದ ಆಗಸ್ಟ್ 16 ರಂದು ಶಿವಮೊಗ್ಗದ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯ ಹೆರಿಗೆ ವಾರ್ಡ್‌ನ ಶೌಚಾಲಯದಲ್ಲಿ ನವಜಾತ ಗಂಡು ಮಗುವಿನ ಶವ ಪತ್ತೆಯಾಗಿತ್ತು. ಅಷ್ಟೆಅಲ್ಲದೆ ಮಗುವಿನ ಕುತ್ತಿಗೆ ಬಳಿ ಕೊಯ್ದಿರುವ ಗುರುತು ಕಂಡುಬಂದಿತ್ತು. ಆ ದೃಶ್ಯವನ್ನು ನೋಡಿದವರು ಹಿಡಿಶಾಪ ಹಾಕಿದ್ದಷ್ಟೆ ಅಲ್ಲದೆ ಪ್ರಕರಣದ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದರು. ಆನಂತರ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸ್ ಆಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಇದೀಗ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನ ತಿಮ್ಲಾಪುರ ಗ್ರಾಮದ ಶೈಲಾ ಎಂಬ ಮಹಿಳೆಯನ್ನ ಅರೆಸ್ಟ್ ಮಾಡಿದ್ದಾರೆ.
Shivamogga case: ಮಿನಿಸ್ಟರ್ ಹೆಸರು ಬಳಸಿದ ತಹಶೀಲ್ದಾರ್ ಪುತ್ರ ಅರೆಸ್ಟ್! ನಡೆದಿದ್ದೆನು? ಎಸ್ಪಿ ಹೇಳಿದ್ದೇನು?
ಆರಂಭದಲ್ಲಿ ಶೈಲಾ ತನ್ನ ಮಗುವಲ್ಲ ಎಂದಿದ್ದರು. ಆನಂತರ ಪೊಲೀಸರು ಹೆರಿಗೆ ವಾರ್ಡ್ನಲ್ಲಿದ್ದವರ ವಿಚಾರಣೆ ನಡೆಸಿದ್ದು, ಎಲ್ಲರ ಮಗು ಸುರಕ್ಷಿತವಾಗಿರುವುದು ಗೊತ್ತಾಗಿದೆ. ಹಾಗಾಗಿ ಮತ್ತೊಮ್ಮೆ ಶೈಲಾರನ್ನ ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬಯಲಿಗೆ ಬಂದಿದೆ.
woman arrested in meggan hospital child case
ಮಹಿಳೆಗೆ ಈಗಾಗಲೇ ಎರಡು ಮಕ್ಕಳಿದ್ದು ಸಂತಾನ ಹರಣ ಚಿಕಿತ್ಸೆ ಮಾಡಿಕೊಂಡಿದ್ದಳಂತೆ. ಆನಂತರವೂ ಆಕೆ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಅದನ್ನು ಮುಚ್ಚಿಟ್ಟು ಥೈರಾಡ್ ಎಂದು ಸುಳ್ಳು ಹೇಳಿದ್ದಳು. ಈ ನಡುವೆ ತನ್ನ ಸಹೋದರಿಯನ್ನು ನೋಡಲು ಆಸ್ಪತ್ರೆಗೆ ಬಂದಿದ್ದ ವೇಳೆ ಆಕೆಗೆ ಹೆರಿಗೆ ನೋವು ಕಾಣಿಸಿದ್ದು, ತಾನೇ ಶೌಚಾಲಯಕ್ಕೆ ತೆರಳಿ ಹೆರಿಗೆ ಮಾಡಿಕೊಂಡಿದ್ದಾಳೆ. ಆನಂತರ ಬ್ಲೇಡ್ನಿಂದ ಮಗುವಿನ ಕತ್ತುಕೊಯ್ದು ಸಾಯಿಸಿದ್ದಾಳೆ ಎಂದು ವಿಚಾರಣೆಯಲ್ಲಿ ಗೊತ್ತಾಗಿದೆ. ನಮ್ಮ ಮಲೆನಾಡು ಟುಡೆಯ ಪ್ರತಿ ಸುದ್ದಿಗಳನ್ನು ಓದಲು ನಮ್ಮ ವಾಟ್ಸಾಪ್ ಚಾನಲ್ ಗೆ ಕ್ಲಿಕ್ ಮಾಡಿ ಜಾಯಿನ್ ಆಗಿ..
