wild elephant : ಮಲೆನಾಡಲ್ಲಿ ಮತ್ತೆ ಕಾಣಿಸಿಕೊಂಡ ಬೀಟಮ್ಮ ಗ್ಯಾಂಗ್ ಆತಂಕದಲ್ಲಿ ಜನತೆ

prathapa thirthahalli
Prathapa thirthahalli - content producer

wild elephant :  ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚುತ್ತಿದೆ. ಒಂದೆಡೆ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಕೆಲಸ ನಡೆಯುತ್ತಿದ್ದರೆ ಮತ್ತೊಂದೆಡೆ  ಕಾಡಾನೆಗಳನ್ನು ಸೆರೆಹಿಡಿಯಲಾಗುತ್ತಿದೆ. ಇಷ್ಟಿದ್ದರೂ..ಕಾಡಾನೆಗಳ ಉಪಟಳ ತಪ್ಪಿಲ್ಲ. ಅರಣ್ಯ ಇಲಾಖೆಗೆ ಹಿಡಿಶಾಪ ಹಾಕುವುದು ನಿಂತಿಲ್ಲ. ಈಗ ಮತ್ತೆ ಕಾಡಾನೆ ಬೀಟಮ್ಮಳ ಗ್ಯಾಂಗ್ ಸ್ಥಳೀಯರನ್ನ ಆತಂಕಕ್ಕೆ ದೂಡಿದೆ. ಮೂಡಿಗೆರೆ ತಾಲೂಕಿನ ಮುಡುಸಸಿ, ಕನ್ನಾಪುರ ಗ್ರಾಮದಂಚಿನ ಅರಣ್ಯ ಪ್ರದೇಶದಲ್ಲಿ ಭೀಟಮ್ಮ, ಭುವನೇಶ್ವರಿ ತಂಡದ 15ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡುಬಿಚ್ಚಿವೆ. 

wild elephant : ರೈತರಲ್ಲಿ ಆತಂಕ

ಈ ಹಿನ್ನಲೆ ರೈತರು ಹೊಲ ಗದ್ದೆ ತೋಟಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಮಳೆ ಬಂದು ನೆಲ ಹದವಾಗಿರುವ ಹೊತ್ತಿನಲ್ಲಿ ಕೃಷಿ ಚಟುವಟಿಕೆಗಳು ಬಿರುಸುಗೊಂಡಿರುವ ಸಂದರ್ಭದಲ್ಲಿ ಕಾಡಾನೆ ಹಿಂಡು ರೈತರನ್ನು ಕಂಗಾಲಾಗಿಸಿದೆ. 15 ಆನೆಗಳ 2 ತಂಡವಾಗಿ ಕಾಡಾನೆಗಳು ಮಲೆನಾಡಲ್ಲಿ ದಾಂದಲೆ ಮಾಡುತ್ತಿವೆ. ಆನೆಗಳನ್ನು ಶಾಶ್ವತವಾಗಿ ಕಾಡಿಗಟ್ಟುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Share This Article