why gold price is rising | ಸಾಮಾನ್ಯರಿಂದ ಹಿಡಿದು ಶ್ರೀಮಂತರವರೆಗೂ ಎಲ್ಲರಿಗೂ ಸಹ ಚಿನ್ನದ ಮೇಲೆ ಮೋಹ ಇದ್ದೇ ಇರುತ್ತದೆ. ಸಾಮಾನ್ಯರು ಆಪತ್ತು ಕಾಲದಲ್ಲಿ ಸಹಾಯ ಆಗಬಹುದೆಂದು ಅಲ್ಪ ಸ್ವಲ್ಪ ಹಣವನ್ನು ಕೂಡಿಟ್ಟು ಚಿನ್ನವನ್ನು ಖರೀದಿಸುತ್ತಾರೆ. ಇತ್ತ ಶ್ರೀಮಂತರು ಸಹ ಹೆಚ್ಚಾಗಿ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಇದರ ನಡುವೆ ಆಭರಣ ಪ್ರಿಯರಿಗೆ ದೊಡ್ಡದೊಂದು ಶಾಕ್ ಎದುರಾಗಿದೆ ಅದೇನೆಂದರೆ 24 ಕ್ಯಾರೆಟ್ ಚಿನ್ನದ ಬೆಲೆ 1 ಲಕ್ಷ ರೂಪಾಯಿ ದಾಟಿದೆ.
ಕಳೆದ 5-6 ವರ್ಷಗಳಿಂದ ಈಚೆಗೆ ಭಾರತದಲ್ಲಿ ಚಿನ್ನದ ಬೆಲೆ ವಿಪರೀತ ಹೆಚ್ಚಾಗುತ್ತಿದೆ. ಇದೀಗ ಬೆಂಗಳೂರು ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿ ಶುದ್ದ 24 ಕ್ಯಾರೆಟ್ ಚಿನ್ನದ ಬೆಲೆ 1.ಲಕ್ಷ ರೂಪಾಯಿ ದಾಟಿದೆ. ಇದರಿಂದಾಗಿ ಚಿನ್ನ ಕೊಳ್ಳಬೇಕು ಎಂದು ಕೊಂಡಿರುವ ಮದ್ಯಮವರ್ಗದ ಜನತೆಯ ಕನಸಿನ ಮೇಲೆ ತಣ್ಣಿರು ಎರಚಿಂತಾಗಿದೆ.
why gold price is rising ಬೆಂಗಳೂರಿನಲ್ಲಿ ಎಷ್ಟಿದೆ ರೇಟು
ಬೆಂಗಳೂರು ಚೆನ್ನೈ ಕೇರಳ ಸೇರಿದಂತೆ 7 ರಾಜ್ಯಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ 9.290 ರೂಪಾಯಿಗಳಿದ್ದರೆ. 24 ಕ್ಯಾರೆಟ್ ಚಿನ್ನದ ಬೆಲೆ 10 ಸಾವಿರ ರೂಪಾಯಿಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ ಹಿಂದಿನ ಬೆಲೆಗಿಂತ ಈಗ 2750 ರೂಪಾಯಿ ಹೆಚ್ಚಾಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ 1649 ರೂಪಾಯಿಗಳಷ್ಟು ಏರಿಕೆ ಯಾಗಿದೆ.
why gold price is rising ಚಿನ್ನದ ಬೆಲೆ ಹೆಚ್ಚಾಗಲು ಕಾರಣವೇನು
ಚಿನ್ನದ ಬೆಲೆ ಹೆಚ್ಚಳವಾಗಲು ಯು ಎಸ್ ಡಾಲರ್ ಮೌಲ್ಯ ಕಡಿಮೆ ಆಗಿರುವುದೇ ಕಾರಣ ಎಂದು ಹೇಳಲಾಗುತ್ತಿದೆ. ಯುಎಸ್ ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಸಂಘರ್ಷವು ಮಾರುಕಟ್ಟೆಯ ಅನಿಶ್ಚಿತತೆಯನ್ನು ಹೆಚ್ಚಿಸುತ್ತಿದೆ. ಚಿನ್ನವನ್ನು ಸ್ಥಿರ ಹೂಡಿಕೆ ಎಂದು ಪರಿಗಣಿಸಲಾಗಿದ್ದು, ವಿಶ್ವದಲ್ಲಿ ಆರ್ಥಿಕ ಪರಿಸ್ಥಿತಿಯ ಮೇಲೆ ನಕರಾತ್ಮಕ ಪರಿಣಾಮ ಉಂಟಾದಾಗ ಶ್ರೀಮಂತರು ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಈ ರೀತಿಯ ಹೂಡಿಕೆಯಿಂದ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಚಿನ್ನದ ಬೆಲೆ ಹೆಚ್ಚಳ ಚಿನ ್ನದ ಮೇಲೆ ಹೂಡಿಕೆ ಮಾಡಿದ ಶ್ರೀಮಂತರಿಗೆ ಸಂತೋಷವನ್ನು ನೀಡಿದರೆ. ಇತ್ತ ಮದ್ಯಮ ವರ್ಗದ ಜನತೆಗೆ ಬೇಸರವನ್ನು ಮೂಡಿಸಿದೆ. ಹೆಣ್ಣು ಹೆತ್ತ ಒಬ್ಬ ತಂದೆಗೆ ಮಗಳ ಮದುವೆಯನ್ನು ಹೆಚ್ಚು ಚಿನ್ನಾಭರಣಗಳನ್ನು ಹಾಕಿ ವಿಜೃಂಭಣೆಯಿಂದ ಮಾಡಬೇಕೆಂಬ ಕನಸಿರುತ್ತದೆ. ಅದಕ್ಕಾಗಿ ಅವರು ತಾನು ದುಡಿದ ಹಣವನ್ನೆಲ್ಲ ಕೂಡಿ ಹಾಕಿ ಸಾಲ ಮಾಡಿ ಚಿನ್ನವನ್ನು ಮಾಡಿಸಲು ಮುಂದಾಗುತ್ತಾರೆ. ಆದರೆ ಈಗಿನ ಚಿನ್ನದ ಬೆಲೆ ಏರಿಕೆಯಿಂದಾಗಿ ಆತ ದುಡಿದ ಹೆಚ್ಚಿನ ಹಣವನ್ನು ಚಿನ್ನ ಮಾಡಿಸಲೆಂದೇ ವ್ಯಯ ಮಾಡಬೇಕಾಗುತ್ತದೆ.