ಮಲೆನಾಡು ಟುಡೆ ನ್ಯೂಸ್ : ದೇಶದಲ್ಲಿ ಆನ್‌ಲೈನ್ ವಂಚನೆ ಮತ್ತು ಸೈಬರ್ ಕ್ರೈಂ ಪ್ರಕರಣ ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಮೆಟಾ ಮಾಲೀಕತ್ವದ ವಾಟ್ಸಾಪ್ (WhatsApp) ಸಂಸ್ಥೆಯ ಜೊತೆ ಕೆಲವೊಂದು ಮಾಹಿತಿ ಹಂಚಿಕೊಳ್ಳುವ ಸಲುವಾಗಿ ಗಂಭೀರವಾಗಿ ಮಾತುಕತೆ ನಡೆಸ್ತಿದೆ. ಪ್ರತಿ ತಿಂಗಳು ಲಕ್ಷಾಂತರ ಭಾರತೀಯ ಖಾತೆಗಳನ್ನು ವಾಟ್ಸಾಪ್ ನಿಷೇಧಿಸುತ್ತಿದ್ದರೂ, ಆ ಸಂಖ್ಯೆಗಳ ವಿವರವನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲು ನಿರಾಕರಿಸುತ್ತಿರುವುದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ

ಟ್ರೇಡಿಂಗ್ ಹೆಸರಿನಲ್ಲಿ ಶಿವಮೊಗ್ಗದ ವ್ಯಕ್ತಿಗೆ 4 ಲಕ್ಷ ವಂಚನೆ : ಹೀಗೂ ಯಾಮಾರಿಸ್ತಾರೆ ಹುಷಾರ್
ರಾಷ್ಟ್ಟಮಟ್ಟದ ಮಾಧ್ಯಮ ಸಂಸ್ಥೆ ಎಕಾನಿಮಕ್ ಟೈಮ್ಸ್ ವರದಿಯ ಪ್ರಕಾರ, ಈ ವರ್ಷದ ಅಕ್ಟೋಬರ್ ವರೆಗೆ ವಾಟ್ಸಾಪ್ ತನ್ನ ನೀತಿ ಉಲ್ಲಂಘನೆಗಾಗಿ ಪ್ರತಿ ತಿಂಗಳು ಸರಾಸರಿ 9.8 ಮಿಲಿಯನ್ (98 ಲಕ್ಷ) ಭಾರತೀಯ ಖಾತೆಗಳನ್ನು ನಿರ್ಬಂಧಿಸಿದೆ. ಆದರೆ, ಈ ನಿಷೇಧಿತ ಖಾತೆಗಳ ಮೊಬೈಲ್ ಸಂಖ್ಯೆಗಳ ವಿವರ ಲಭ್ಯವಿಲ್ಲದ ಕಾರಣ, ವಂಚಕರನ್ನು ಪತ್ತೆಹಚ್ಚುವುದು ಸೈಬರ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
WhatsApp Ban ವಾಟ್ಸಾಪ್ ನಿಷೇಧಿಸಿದ ಖಾತೆಗಳ ಅಂಕಿಅಂಶ
- ಜನವರಿ: 9.9 ಮಿಲಿಯನ್
- ಫೆಬ್ರವರಿ: 9.7 ಮಿಲಿಯನ್
- ಮಾರ್ಚ್: 11.1 ಮಿಲಿಯನ್
- ಏಪ್ರಿಲ್: 9.7 ಮಿಲಿಯನ್
- ಮೇ: 11.2 ಮಿಲಿಯನ್
- ಜೂನ್: 9.8 ಮಿಲಿಯನ್
- ಜುಲೈ: 8.9 ಮಿಲಿಯನ್
- ಆಗಸ್ಟ್: 8.2 ಮಿಲಿಯನ್
- ಸೆಪ್ಟೆಂಬರ್: 10.0 ಮಿಲಿಯನ್
- ಅಕ್ಟೋಬರ್: 9.1 ಮಿಲಿಯನ್.
ಸರ್ಕಾರಿ ಅಧಿಕಾರಿಗಳ ಪ್ರಕಾರ, ದೇಶದಲ್ಲಿ ನಡೆಯುತ್ತಿರುವ ‘ಡಿಜಿಟಲ್ ಅರೆಸ್ಟ್’ ಮತ್ತು ನಕಲಿ ವಂಚನೆ ಪ್ರಕರಣಗಳಲ್ಲಿ ಶೇ. 95 ರಷ್ಟು ವಾಟ್ಸಾಪ್ ಮೂಲಕವೇ ನಡೆಯುತ್ತಿವೆ. ಒಮ್ಮೆ ವಾಟ್ಸಾಪ್‌ನಲ್ಲಿ ನಿಷೇಧಕ್ಕೊಳಗಾದ ಸಂಖ್ಯೆಗಳು ಟೆಲಿಗ್ರಾಮ್‌ನಂತಹ ಇತರ ವೇದಿಕೆಗಳಲ್ಲಿ ಸಕ್ರಿಯವಾಗುತ್ತಿವೆ. ಒಮ್ಮೆ ಲಾಗಿನ್ ಆದ ಬಳಿಕ, ಸಿಮ್ ಕಾರ್ಡ್ ಇಲ್ಲದೆಯೂ ಈ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುವುದರಿಂದ ಅಪರಾಧಿಗಳನ್ನು ಪತ್ತೆಹಚ್ಚುವುದು ಜಾರಿ ಸಂಸ್ಥೆಗಳಿಗೆ ಕಷ್ಟವಾಗುತ್ತಿದೆ.
ವಾಟ್ಸಾಪ್ ತನ್ನ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ನೀತಿಯನ್ನು ಮುಂದಿಟ್ಟುಕೊಂಡು ವಿವರಗಳನ್ನು ಹಂಚಿಕೊಳ್ಳಲು ಹಿಂಜರಿಯುತ್ತಿದೆ. ಆದರೆ, ನಮಗೆ ವ್ಯಕ್ತಿಯ ಖಾಸಗಿ ವಿವರಗಳು ಬೇಡ, ಕೇವಲ ನಿಷೇಧಿತ ಸಂಖ್ಯೆಗಳ ವಿವರ ನೀಡಿದರೆ ಸಾಕು, ಅವು ನೈಜವೋ ಅಥವಾ ನಕಲಿಯೋ ಎಂದು ಪರಿಶೀಲಿಸಬಹುದು ಎಂಬುದು ಸರ್ಕಾರದ ವಾದವಾಗಿದೆ. ವಂಚನೆ ತಡೆಯಲು ಕೆವೈಸಿ (KYC) ವಿವರಗಳ ಮರುಪರಿಶೀಲನೆ ಅಗತ್ಯ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ವಾಟ್ಸಾಪ್ ತಾನು ಕೇವಲ ವಾಟ್ಸಾಪ್ ಪಾಲಿಸಿಯನ್ನು ಉಲ್ಲಂಘಿಸಿದ ಖಾತೆಗಳನ್ನ ಬ್ಯಾನ್ ಮಾಡಿದ್ದಾಗಿ ಹೇಳುತ್ತಿದೆ.
ಸದ್ಯ ದೂರಸಂಪರ್ಕ ಇಲಾಖೆಯ ದತ್ತಾಂಶದಂತೆ, ಸರ್ಕಾರದ ಸೂಚನೆಯ ಮೇರೆಗೆ ಈ ವರ್ಷ ನವೆಂಬರ್ ವರೆಗೆ 2.9 ಮಿಲಿಯನ್ ವಾಟ್ಸಾಪ್ ಪ್ರೊಫೈಲ್ ಮತ್ತು ಗ್ರೂಪ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಆದರೆ ವಾಟ್ಸಾಪ್ ಸ್ವಯಂಪ್ರೇರಿತವಾಗಿ ನಿಷೇಧಿಸುವ ಖಾತೆಗಳ ಬಗ್ಗೆ ಪಾರದರ್ಶಕತೆ ಇಲ್ಲದಿರುವುದು ಸೈಬರ್ ಅಪರಾಧ ಪತ್ತೆ ಹಚ್ಚುವ ಸವಾಲನ್ನು ಇನ್ನಷ್ಟು ಹೆಚ್ಚಿಸಿದೆ . ಸದ್ಯ ಈ ಕುರಿತು ಸರ್ಕಾರ ಮತ್ತು ವಾಟ್ಸಾಪ್ ನಡುವೆ ಮಾತುಕತೆ ಮುಂದುವರಿದಿದೆ.
WhatsApp Ban Govt Raises Privacy & Fraud Concern
