ಶಿವಮೊಗ್ಗ ಜಿಲ್ಲೆ ಸಾಗರ ಟೌನ್ನಲ್ಲಿ ಇವತ್ತು ಬೆಳಗ್ಗೆ ನಡೆದ ಘಟನೆಯೊಂದು ಸಾಕಷ್ಟು ಸನ್ನಿವೇಶಗಳನ್ನು ಸೃಷ್ಟಿಸುತ್ತಿದೆ. ಟೌನ್ ಸ್ಟೇಷನ್ ಎದುರು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಆರೋಪಿಯನ್ನು ತಕ್ಷಣವೇ ಹಿಡಿದು ಮಟ್ಟಹಾಕಬೇಕು. ಇಲ್ಲವೇ ಸಾಗರ ಪೇಟೆಯಲ್ಲಿ ಉಗ್ರ ಪ್ರತಿಭಟನೆ ನಡೆಸಿ ಬಂದ್ ನಡೆಸುವುದಾಗಿ ಎಚ್ಚರಿಸಿವೆ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆಗೆ ಯತ್ನ / ಸಂಘಟನೆಗಳ ಪ್ರತಿಭಟನೆ
ಇನ್ನೊಂದೆಡೆ ಪೊಲೀಸ್ ಇಲಾಖೆ ಘಟನೆ ಸಂಬಂಧ ಮೂರು ತಂಡಗಳನ್ನು ರಚಿಸಿದ್ದೇವೆ. ಆರೋಪಿಯನ್ನು ಪತ್ತೆ ಹಚ್ಚುತ್ತೇವೆ ಎನ್ನುತ್ತಿದೆ. ಅಲ್ಲದೆ ಇದೇ ಕಾರಣಕ್ಕೆ ಘಟನೆ ನಡೆದಿದೆ ಎಂಬುದರ ಬಗ್ಗೆ ಸದ್ಯದಲ್ಲಿಯೇ ವಿವರವನ್ನು ನೀಡುತ್ತೇವೆ ಎಂದಿದೆ. ಈ ಸಂಬಂಧ ಸ್ವತಃ ಎಸ್ಪಿ ಮಿಥುನ್ ಕುಮಾರ್ ಘಟನೆಯ ವಿವರವನ್ನು ಮಾಧ್ಯಮಗಳಿಗೆ ಸಂದೇಶದ ಮೂಲಕ ರವಾನಿಸಿದ್ದಾರೆ.
ಚಾಕೋಲೆಟ್ ಎಂದು ತಿಳಿದು ಇಲಿ ಪಾಷಾಣ ತಿಂದ ಮಗು/ ಪೋಷಕರೇ ಎಚ್ಚರವಹಿಸಿ / ತೀರ್ಥಹಳ್ಳಿಯಲ್ಲಿ ಪುಟ್ಟ ಮಗು ಸಾವು
ಈ ಮಧ್ಯೆ ಸಾಗರದಲ್ಲಿ ನಡೆದ ಘಟನೆಯಲ್ಲಿ ದಾಳಿಗೊಳಗಾದ ಹಾಗೂ ದಾಳಿ ಮಾಡಿದ ಇಬ್ಬರು ಸಹ ಸ್ನೇಹಿತರು ಎಂಬ ಮಾಹಿತಿ ಲಭ್ಯವಾಗಿದೆ. ಇಬ್ಬರು ಸಹ ಉಪ್ಪಾರ ಕೇರಿ ನಿವಾಸಿಗಳಾಗಿದ್ದಾರೆ. ಇವರಿಬ್ಬರ ನಡುವೆ ಈ ಮೊದಲು ಸ್ನೇಹವಿತ್ತು ಎನ್ನಲಾಗುತ್ತಿದೆ. ಆದರೆ ಹಿಜಾಬ್ ಗಲಾಟೆಯಿಂದ ಇಬ್ಬರ ನಡುವ ವೈಷಮ್ಯ ಉಂಟಾಗಿ ಸ್ನೇಹ ಮುರಿದು ಬಿದ್ದಿತ್ತು, ಇದೇ ಹಗೆತನ ಹಿನ್ನಲೆಯಲ್ಲಿ ಇವತ್ತು ಹಲ್ಲೆ ನಡೆಸಲಾಗಿದೆ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸುತ್ತಿವೆ. ಈ ನಿಟ್ಟಿನಲ್ಲಿ ಸಮೀರ್ ಸುನೀಲ್ಗೆ ಧಮ್ಕಿ ಕೂಡ ಹಾಕಿದ್ದ ಎಂದು, ಸಂಘಟನೆಗಳು ಆಕ್ರೋಶ ಹೊರಹಾಕಿವೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com