waqf : ವಿದ್ಯುತ್​ ದೀಪ ಆರಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ | ಕಾರಣವೇನು

prathapa thirthahalli
Prathapa thirthahalli - content producer

waqf : ಸಾಗರ | ಮುಸ್ಲಿಂ ಸಮುದಾಯದಿಂದ ವಕ್ಫ್​ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ವಿದ್ಯುತ್​​ ದೀಪ ಆರಿಸುವುದರ ಮೂಲಕ ನಗರದ ಹಲವು ಬಡಾವಣೆಗಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. 

waqf : ಪ್ರತಿಭಟನೆ ನಡೆಸಲು ಕಾರಣವೇನು 

ರಾತ್ರಿ 09 ಗಂಟೆಯಿಂದ 9:15 ರ ವರಗೆ  ಏಕ ಕಾಲದಲ್ಲಿ  ಮನೆಯಲ್ಲಿ ‘ಬತ್ತಿ ಗುಲ್’ ಎಂಬ ಹೆಸರಿನಲ್ಲಿ ಲೈಟ್ ಅನ್ನು ಆರಿಸಿ, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರತಿಭಟನೆ ನಡೆಸಿತು. ಹಾಗೆಯೇ ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ವಕ್ಫ್​  ತಿದ್ದುಪಡಿ ಕಾಯ್ದೆಯನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿತು.  ಈ ಪ್ರತಿಭಟನೆಗೆ  ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಕರೆ ನೀಡಿತ್ತು. 

- Advertisement -

ನಗರದ ಎಸ್ ಎನ್ ನಗರ,ಜನ್ನತ್ ನಗರ , ನೆಹರೂ ನಗರ , ರಾಮನಗರ, ಗಾಂಧಿ ನಗರ ಸೇರಿದಂತೆ  ಹಲವು ಕಡೆಗಳಲ್ಲಿ 15 ನಿಮಿಷಗಳ ಕಾಲ ಲೈಟ್ ಅನ್ನು ಆರಿಸುವುದರ ಮೂಲಕ  ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನೀಡಿದ ಕರೆಯ ಮೇರೆಗೆ ವಕ್ಫ್ ತಿದ್ದುಪಡಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು.

 

TAGGED:
Share This Article