
waqf bill protest : ಶಿವಮೊಗ್ಗದಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ವತಿಯಿಂದ ಪ್ರತಿಭಟನಾ ನಡೆಸಲಾಯಿತು. ಶಿವಮೊಗ್ಗ ನಗರದ ವೀರಭದ್ರೇಶ್ವರ ಚಿತ್ರಮಂದಿರದ ಬಳಿ ಇರುವ ವಕ್ಫ್ ಕಚೇರಿಯಿಂದ ಶುರುವಾದ ಪ್ರತಿಭಟನಾ ವೆರವಣಿಗೆ. ಜಿಲ್ಲಾಧಿಕಾರಿ ಕಚೇರಿವರೆಗೆ ವರೆಗೆ ನಡೆಯಿತು. ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಹಾಗೆಯೇ ಕೈ ಗೆ ಕಪ್ಪು ಪಟ್ಟಿ ಧರಿಸಿ ಆಕ್ರೋಶವನ್ನು ವ್ಯಕ್ತಪಡಿಸಿದರು. ಮೋದಿ ಹಠಾವ್ ದೇಶ್ ಬಚಾವ್, ವಕ್ಫ್ ಕಾಯ್ದೆ ನಮ್ಮ ಹಕ್ಕು ನಮ್ಮ ಗುರುತು, ಎಂಬ ಭಿತ್ತಿ ಪತ್ರ ಹಿಡಿದು ಸಾವಿರಾರೂ ಮುಸ್ಲಿಂ ಭಾಂದವರು ರಸ್ತೆಯಲ್ಲಿ ಸಾಗಿದರು. ಪ್ರತಿಭಟನೆ ವೇಳೆ ತಿರಂಗ ಪ್ಲಾಗ್ ಗಳು ಎಲ್ಲಡೆ ರಾರಾಜಿಸಿದವು. ಮೆರವಣಿಗೆಯ ನಂತರ ಡಿಸಿ ಕಚೇರಿ ಮುಂಭಾಗದ ಸರ್ ಎಂ ವಿಶ್ವೇಶ್ವರಯ್ಯ ರಸ್ತೆಯಲ್ಲಿ ಸಭೆ ನಡೆಸಲಾಯಿತು. ಈ ವೇಳೆ ಮುಸ್ಲಿಂ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
waqf bill protest : ಕೇಂದ್ರ ಸರ್ಕಾರಕ್ಕೆ ಪ್ರತಿಭಟನಾಕಾರರ ಆಗ್ರಹಗಳೇನು
- ವಕ್ಫ್ ತಿದ್ದುಪಡಿ ಕಾಯ್ದೆ 2025 ನ್ನು ತಕ್ಷಣ ರದ್ದುಗೊಳಿಸಬೇಕು.
- 1995 ರ ವಕ್ಫ್ ಕಾಯ್ದೆಯ ರಕ್ಷಣೆಯನ್ನು ಮರು ಸ್ಥಾಪಿಸಬೇಕು
- ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ಸಮಾನ ನೀತಿಯನ್ನು ಖಾತರಿಪಡಿಸಬೇಕು.
- ಭಾರತದ ಜಾತ್ಯಾತೀತ ಚೈತನ್ಯವನ್ನು ರಕ್ಷಿಸಬೇಕು
- ಕೇಂದ್ರ ಸರ್ಕಾರ ಮುಸ್ಲಿಂ ಸಮುದಾಯದ ಭಾವನೆಗಳನ್ನು ಗೌರವಿಸಬೇಕು.
- ರಾಜ್ಯ ಮತ್ತು ಕೇಂದ್ರ ವಕ್ಫ್ ಮಂಡಳಿಗಳಲ್ಲಿ ಕಡ್ಡಾಯವಾಗಿ ಮುಸ್ಲಿಮರೇತರರನ್ನು ಕಡ್ಡಾಯವಾಗಿ ಸೇರಿಸುವುದು, ಸಂವಿಧಾನದ 26 ನೇ ವಿಧಿಯನ್ನು ಉಲ್ಲಂಘಿಸುತ್ತದೆ
- ಜಿಲ್ಲಾಧಿಕಾರಿಗಳೇ ನಿರ್ಧರಿಸುವ ಅಧಿಕಾರ ನೀಡುವುದು ವಕ್ಫ್ ಮಂಡಳಿ ಸ್ವಾಯತ್ತತೆಗೆ ಧಕ್ಕೆ ತರುತ್ತದೆ.
- ವಕ್ಫ್ ರಚನೆಗೆ ನೊಂದಾಯಿತ ದಾಖಲೆ ಕಡ್ಡಾಯಗೊಳಿಸಬೇಕು
- ವಕ್ಫ್ ಬೈ ಯೂಸರ್ ಪದ್ಧತಿ ರದ್ಧತಿಗೆ ಆಗ್ರಹ
- ವಕ್ಫ್ ಸೃಷ್ಟಿಸಲು 5 ವರ್ಷಗಳ ಕಾಲ ಇಸ್ಲಾಂ ಅನುಸರಿಸಬೇಕೆಂಬ ನಿಯಮ ತೆಗೆಯಬೇಕು
- ಪರಿಶಿಷ್ಟ ಮುಸಲ್ಮಾನರಿಗೆ ವಕ್ಫ್ ರಚಿಸಲು ನಿರಾಕರಿಸಬಾರದು ಎಂದು ಮುಸ್ಲಿಂ ಸಮುದಾಯದವರು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಸಾವಿರಾರು ಮುಸ್ಲಿಂ ಭಾಂದವರು ಭಾಗವಹಿಸಿದ್ದರು. ಮುನ್ನೆಚ್ಚರಿಗೆ ಕ್ರಮವಾಗಿ ನಗರದಲ್ಲಿ ಬೀಗಿ ಪೊಲೀಸ್ ಬಂಧೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನಗರದ ಹಲವು ರಸ್ತೆಗಳಲ್ಲಿ ಬ್ಯಾರಿಗೇಡ್ ಹಾಕಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಪ್ರತಿಭಟನೆ ಕಾರಣದಿಂದ ಶಿವಮೊಗ್ಗದೆ ನಗರದ ಕೆಲ ರಸ್ತೆಗಳಲ್ಲಿ ಕೆಲ ಸಮಯ ಟ್ರಾಫಿಕ್ ಜಾಮ್ ಉಂಟಾಗಿ, ಸಾರ್ವಜನಿಕರು ಪರದಾಡಬೇಕಾಯಿತು.