protest in shivamogga :  ಪೆಹಲ್ಗಾಮ್ ದಾಳಿಗೆ ಮುಸ್ಲಿಂ ಸಮುದಾಯದ ಖಂಡನೆ..ಘಟನೆಯಲ್ಲಿ ಸಾವನ್ನಪ್ಪಿದವರಿಗೆ ಮೌನ ಆಚರಣೆ..ಸಂವಿಧಾನ ಪೀಠಿಕೆ ಪಠಣೆ

ಹಂಚಿಕೊಳ್ಳಿ
WhatsApp Facebook X Telegram
protest in shivamogga
protest in shivamogga ಪೆಹಲ್ಗಾಮ್ ದಾಳಿಗೆ ಮುಸ್ಲಿಂ ಸಮುದಾಯದ ಖಂಡನೆ

protest in shivamogga : ವಕ್ಫ್ ಆಸ್ತಿ ತಿದ್ದುಪಡೆ ಕಾಯ್ದೆ ವಿರೋಧಿಸಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಬೋರ್ಡ್ ವತಿಯಿಂದ ಸಾವಿರಾರು ಮುಸ್ಲಿಂ ಭಾಂದವರಿಂದ ಶಾಂತಿ ಯುತ ಪಾದಯಾತ್ರೆ ನಡೆಯಿತು. ವಕ್ಫ್ ಕಛೇರಿಯಿಂದ ಆರಂಭವಾದ ಪ್ರತಿಭಟನೆ ಜಯನಗರ ಠಾಣೆ ಸನಿಹದ ಬೃಹತ್ ವೇದಿಕೆಯಲ್ಲಿ ಸಮಾಗಮಗೊಂಡಿತು. ಪ್ರತಿಭಟನಾ ಸಭೆಯಲ್ಲಿ ಪೆಹಲ್ಗಾಮ್ ದಾಳಿಯನ್ನು ಖಂಡಿಸಲಾಯಿತು. ದಾಳಿಯಲ್ಲಿ ಸಾವನ್ನಪ್ಪಿದವರಿಗಾಗಿ ಒಂದು ನಿಮಿಷ ಮೌನಾಚಾರಣೆ ನಡೆಸಲಾಯಿತು. ತದನಂತರದಲ್ಲಿ ಸಂವಿಧಾನ ಪೀಠಿಕೆಯನ್ನು ಪಠಿಸಿ,ಪ್ರಮಾಣ ಮಾಡಲಾಯಿತು.

ವೇದಿಕೆಯಲ್ಲಿ ಮಾತನಾಡಿದ ಮುಸ್ಲಿಂ ಮುಖಂಡರು ವಕ್ಪ್ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿದರು. ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ಸಂಯೋಜಕ ಕಾಂಗ್ರೆಸ್ ಸುಧೀರ್ ಮುರಳಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ದೇಶದ ಜನರಿಗೆ 15 ಲಕ್ಷ ಸಿಗುತ್ತೇ ಅಂದು ಕೊಂಡಿದ್ದೇವು. 2 ಕೋಟಿ ಉದ್ಯೋಗ ಸಿಗುತ್ತೆ ಅಂದುಕೊಂಡಿದ್ದೆವು. ಈ ದೇಶ ಆರ್.ಎಸ್.ಎಸ್ ನವರದ್ದಲ್ಲ..ಬಿಜೆಪಿಯವರದ್ದು ಅಲ್ಲ..ಉಗ್ರಗಾಮಿಗಳದ್ದೂ ಅಲ್ಲ. ಈ ದೇಶ ನಮ್ಮೆಲ್ಲರ ದೇಶವಾಗಿದೆ. ಸರ್ವ ಜನಾಂಗದ ಶಾಂತಿಯ ತೋಟ ಎಂದವರು ನಮ್ಮ ಕುವೆಂಪು ಅವರು ಈ ಜಿಲ್ಲೆಯವರು. ವಕ್ಫ್ ಆಸ್ತಿಗೂ ಅಮಿತ್ ಷಾ ಗೂ ಮೋದಿಗೂ ಏನ್ ಸಂಬಂಧ ಎಂದು ಸುಧೀರ್ ಪ್ರಶ್ನಿಸಿದರು. ವಕ್ಫ್ ಆಸ್ತಿಯ ಯಾರ ವಯಕ್ತಿಕ ಆಸ್ತಿ ಅಲ್ಲ ಅದು ಪರಮಾತ್ಮನ ಆಸ್ತಿ. ನರೇಂದ್ರ ಮೋದಿಯವರು ದೇಶವನ್ನು ಕಟ್ಟುವ ಕೆಲಸ ಮಾಡುತ್ತಿಲ್ಲ ಹೊಡೆದಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.

ಹಾಗೆಯೇ ಈ ಕಾಯ್ದೆಯನ್ನು ಜಾರಿಗೆ ತಂದಿದ್ದು ಮುಸ್ಲಿಮರಿಗಲ್ಲ.ಅಮಿತ್ ಷಾ ಅವರ ಮಗ ಕ್ರಿಕೆಟ್ ಬೋರ್ಡ್ ಗೆ ಹೋದ ಹಾಗೇ ವಕ್ಫ್ ಬೋರ್ಡ್ ಬರಲು ಸಾಧ್ಯವೇ. ಆರ್ ಎಸ್ ಎಸ್, ಬಿಜೆಪಿ ಎಂದರೆ ಹಿಂದೂ ಧರ್ಮ ಅಲ್ಲ.ವಿವೇಕಾನಂದ, ಕನಕದಾಸ, ಅಕ್ಕಮಹಾದೇವಿ ಎಂದರೆ ಹಿಂದೂ ಧರ್ಮ.ವಕ್ಫ್ ಕಾಯ್ದೆ ಜಾರಿಗೆ ತರುವ ಹಿಂದೆ ರಾಜಕೀಯ ಷ್ಯಂಡ್ಯತರ ಇದೆ ಎಂದು ಸುಧೀರ್ ಆರೋಪಿಸಿದರು.ವಕ್ಪ್ ಕಾಯ್ದೆ ತಿದ್ದುಪಡಿ ಯಾವ ಹಿಂದುಗಳಿಗೂ ಬೇಕಿಲ್ಲ. ಒಂದು ಧರ್ಮದ ವಿಚಾರದಲ್ಲಿ ಮತ್ತೊಂದು ಧರ್ಮದವರು ಮೂಗು ತೂರಿಸಲು ಭಾರತದಲ್ಲಿ ಯಾರು ಒಪ್ಪುವುದಿಲ್ಲ. ವಕ್ಪ್ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವನ್ನು ಬದಲಿಸಬೇಕು ಎಂದು ಸುದೀರ್ ಆಗ್ರಹಿಸಿದರು.

protest in shivamogga : ಕೇಂದ್ರ ಸರ್ಕಾರ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದೆ,  ಶಾಹಿಲ್ ಅಮಿದ್ ಮುಸ್ಲಿಯಾರ್

ಎಸ್.ವೈ.ಎಸ್ ಸ್ಟೇಟ್ ಸೆಕ್ರೇಟರಿ ಶಾಹಿಲ್ ಅಮಿದ್ ಮುಸ್ಲಿಯಾರ್ ಮಾತನಾಡಿ, ವಕ್ಫ್ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಕೇಂದ್ರ ಸರ್ಕಾರ ದೇಶದಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡುತ್ತಿದೆ. ಕೇರಳದ ವೈಯನಾಡ್ ನಲ್ಲಿ ಭೂ ಕುಸಿತವಾದಾಗ, ಅಲ್ಲಿನ ಸಂತ್ರಸ್ಥರಿಗೆ ಮಸೀದಿಗಳಲ್ಲಿ ಜಾತಿ ಧರ್ಮ ನೋಡದೆ ನೆಲೆ ಕಲ್ಪಿಸಲಾಯಿತು.ವಕ್ಫ್ ಆಸ್ತಿಗಳು ದೇಶದ ಜನತೆಯ ಹಿತಕಾಯುವ ಆಸ್ತಿಗಳೇ ಆಗಿದೆ. ಕಾಯ್ದೆ ತಿದ್ದುಪಡಿಯ ಮೂಲಕ ಅನ್ಯ ಧರ್ಮಿಯರಿಗೆ ಕಮಿಟಿಯಲ್ಲಿ ಸೇರಿಸಿದರೆ ಇದು ಧಾರ್ಮಿಕ ಭಾವನೆಗೆ ಧಕ್ಕೆಯುಂಟುಮಾಡುತ್ತದೆ. ಜಿಲ್ಲಾಧಿಕಾರಿಗೆ ಪರಮಾಧಿಕಾರ ನೀಡಲಾಗಿದೆ ಇಂದು ಖಂಡನೀಯ ಎಂದು ಹೇಳಿದರು. ಇನ್ನು ವೇದಿಕೆಯಲ್ಲಿ ಮಾತನಾಡಿದ ಮುಖಂಡರುಗಳೆಲ್ಲಾ ವಕ್ಪ್ ಕಾಯ್ದೆ ತಿದ್ದುಪಡಿಯನ್ನು ಒಕ್ಕೊರಲಾಗಿ ಖಂಡಿಸಿದರು.

protest in shivamogga : ಪ್ರತಿಭಟನಾ ಸಭೆಯಲ್ಲಿ ಹಾಜಿ ಇಬ್ಲಾಲ್ ಶೇಖ್, ಶಾಸಕಿ ಬಲ್ಕೀಷ್ ಭಾನು ಮಾರ್ಖಜಿ ಸುನ್ನಿ ಜಮಿಯತ್ ಮಸೀದಿ ಉಪಾಧ್ಯಕ್ಷ ಮೊಹಮ್ಮದ್ ಇರ್ಪಾನ್ ಖಾನ್, ಸೇರಿದಂತೆ ಪ್ರಮುಖರು ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು.

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor