Visvesvaraya Iron and Steel Limited reopen / ವಿಐಎಸ್​ಎಲ್​ ಪುನರಾರಂಭಕ್ಕೆ ₹10 ಸಾವಿರ ಕೋಟಿ ಪ್ಲಾನ್!

Malenadu Today

Visvesvaraya Iron and Steel Limited reopen ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಕಾರ್ಖಾನೆ ಪುನರುಜ್ಜೀವನಕ್ಕೆ ಹೊಸ ಯೋಜನೆ

ಭದ್ರಾವತಿಯ ಸರ್ ಎಂ. ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (ವಿಐಎಸ್ಎಲ್) ಪುನಶ್ಚೇತನಕ್ಕಾಗಿ ಕೇಂದ್ರ ಸರ್ಕಾರ ಹೊಸ ಯೋಜನೆ ಹಮ್ಮಿಕೊಂಡಿದೆ. ಕೇಂದ್ರದ ಬೃಹತ್ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತ ಕಾರ್ಖಾನೆಯ ಪುನರ್ ನಿರ್ಮಾಣಕ್ಕಾಗಿ ₹8,000 ರಿಂದ ₹10,000 ಕೋಟಿ ಹೂಡಿಕೆ ಮಾಡಲು ಯೋಜನೆ ರೂಪುಗೊಳ್ಳುತ್ತಿದೆ  ಎಂದಿದ್ದಾರೆ. ಈ ಸಂಬಂಧ  ವಿಸ್ತೃತ ಯೋಜನಾ ವರದಿಯು (ಡಿಪಿಆರ್‌) ಎರಡು ತಿಂಗಳಲ್ಲಿ ಸಿದ್ಧವಾಗಲಿದೆ ಎಂದಿದ್ದಾರೆ. 

Visvesvaraya Iron and Steel Limited reopen ಪ್ರಧಾನಿ ಮೋದಿ ಅಡಿಗಲ್ಲು ಹಾಕಲಿದ್ದಾರೆ

2030 ರೊಳಗಾಗಿ ದೇಶದಲ್ಲಿ  ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿ ನಿಗದಿ ಮಾಡಿದ್ದು, ಈ ಗುರಿ ಸಾಧನೆಗೆ ಪೂರಕವಾಗಿ ಒಂದು ಲಕ್ಷ ಕೋಟಿ ರೂಪಾಯಿ ಹೂಡಿಕೆಗೆ ನಿರ್ಧರಿಸಲಾಗಿದೆ. ಅದರ ಭಾಗವಾಗಿ ವಿಐಎಸ್​ಎಲ್​ ನ್ನು ಹೊಸದಾಗಿ ರೂಪಿಸುವ ಪ್ರಯತ್ನ ನಡೆಯಲಿದೆ ಎಂದರು.  ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್​ನಲ್ಲಿ ಈ ಯೋಜನೆಗೆ ಅಧಿಕೃತವಾಗಿ ಅಡಿಗಲ್ಲು ಹಾಕಲಿದ್ದಾರೆ. ಕಾರ್ಖಾನೆಯ ವಿವರಿತ ಯೋಜನಾ ವರದಿ (ಡಿಪಿಆರ್) ಎರಡು ತಿಂಗಳೊಳಗೆ ಸಿದ್ಧವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. ಇದು ಭಾರತದ ಉಕ್ಕು ಕ್ಷೇತ್ರದಲ್ಲಿ ದೊಡ್ಡ ಮೈಲುಗಲ್ಲಾಗಲಿದೆ.

Share This Article