SHIVAMOGGA | MALENADUTODAY NEWS | ಮಲೆನಾಡು ಟುಡೆ Jan 18, 2025
ಸಚಿವ ಮಧು ಬಂಗಾರಪ್ಪ ಶಿವಮೊಗ್ಗ ಪ್ರವಾಸದಲ್ಲಿದ್ದು ವಿವಿಧ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ VISL ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡ್ತಾ ಈ ಬಗ್ಗೆ ಹಾಲಿ ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Current Union Minister and former CM H.D. Kumaraswamy) ಮಾಡಿರುವ ಗಂಭೀರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. VISL ನ್ನು ಹೆಚ್ಡಿಕೆ ಮುಚ್ಚಲು ಹೊರಟಿದ್ದಾರೆ. ಅವರು ಸುಮ್ಮನೆ ಆರೋಪ ಮಾಡುವುದನ್ನು ಬಿಡಬೇಕು. ಅವರು ಹಿಂದೆ ಕಾರ್ಖಾನೆಗೆ ಬಂದು ಹೋಗಿದ್ದು ಬಿಟ್ಟರೆ, ರಾಜ್ಯ ಸರ್ಕಾರದ ಜೊತೆ ಯಾವುದೇ ಮಾತುಕಥೆ ನಡೆಸದೆ, ಸುಮ್ಮನೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಇನ್ನೂ ಇದೇ ವಿಚಾರದ ಬಗ್ಗೆ ಹೆಚ್ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು. ಅವರ ಆರೋಪವೇನು ಎನ್ನುವುದನ್ನು ಗಮನಿಸುವುದಾದರೆ, ನಿನ್ನೆದಿನ ದೆಹಲಿಯಲ್ಲಿ ಮಾತನಾಡಿದ್ದ ಅವರು, ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ (Visvesvaraya Iron and Steel Factory, Bhadravati) ಪುನಶ್ವೇತನ ವಿಚಾರಕ್ಕೆ ರಾಜ್ಯ ಸರ್ಕಾರ ತಮ್ಮ ಜತೆ ಚರ್ಚೆ ಮಾಡುತ್ತಿಲ್ಲ. ತಮ್ಮ ತವರು ರಾಜ್ಯ ಎನ್ನುವ ಕಾರಣಕ್ಕೆ ನಾನು ಕೆಲಸ ಮಾಡುತ್ತಿದ್ದೇನೆ ಎಂದಿದ್ದರು.
ಇತ್ತ ಮಧು ಬಂಗಾರಪ್ಪರವರು ಹೆಚ್ಡಿಕೆ ವಿಚಾರವನ್ನು ಹೊರತುಪಡಿಸಿ ಉಳಿದ ಬೆಳವಣಿಗೆಗಳ ಬಗ್ಗೆಯು ಮಾತನಾಡಿದ್ದಾರೆ. ಆ ಪೈಕಿ ಮುಖ್ಯ ಅಂಶಗಳು ಹೀಗಿವೆ.
ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಅಂತ ನಮ್ಮ ಹೈಕಮಾಂಡ್ ಹೇಳಿದೆ. ಅಭಿವೃದ್ಧಿ ಕೆಲಸ ನಿರಂತರ ನಡೆಯುತ್ತಿದೆ. ರಾಜ್ಯದಲ್ಲಿ ಭ್ರಷ್ಟಚಾರ ನಿಲ್ಲಿಸಬೇಕಿದೆ. ಅದನ್ನು ಮಾಡುತ್ತೇವೆ.
ಬಿಜೆಪಿಯವರು ಹಸುವಿನ ವಿಚಾರದಲ್ಲಿ ರಾಜಕೀಯ ಮಾಡುವುದು ಬಿಟ್ಟರೆ ಬೇರೆ ಅವರಿಗೆ ಗೊತ್ತಿಲ್ಲ. ಸಂಸದರು ಇಷ್ಟುದಿನ ಸುಮ್ಮನಿದ್ದು ಈಗ ಈಶ್ವರ್ ಖಂಡ್ರೆ ಅವರನ್ನು ಭೇಟಿ ಮಾಡಿದ್ದು ಯಾಕೆ ಎಂದು ಪ್ರಶ್ನೆ ಮಾಡಿದರು.
SUMMARY | Minister Madhu Bangarappa, former CM HD Kumaraswamy, Bhadravathi VISL
KEY WORDS | Minister Madhu Bangarappa, former CM HD Kumaraswamy, Bhadravathi VISL