Shivamogga | Shimoga Vinobanagar Police Arrest Inter state Robbers | ವಿನೋಬನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಎಪಿಎಂಸಿ ಬಳಿ ಅಜ್ಜಿ ಸರ ಕಿತ್ತುಕೊಂಡು ಹೋಗಿದ್ದ ಘಟನೆ ಬಗ್ಗೆ ಮಲೆನಾಡು ಟುಡೆ ಮಾಡಿದ್ದ ವರದಿಯನ್ನು ಓದೇ ಇರುತ್ತೀರಿ.. ನಿಮ್ಮ ನೆನಪಿಗಾಗಿ ಮತ್ತೊಮ್ಮೆ ಇಲ್ಲಿದೆ ಲಿಂಕ್ (ಮಾದಕ ನಶೆಯ ನಡುವೆ ಸಿಟಿಯಲ್ಲಿ ಹೆಚ್ಚಾದ ಸರಗಳ್ಳತನ! ತಿಂಗಳಿನಲ್ಲಿ 3ನೇ ಕೇಸ್) ಸದ್ಯ ಈ ವಿಷಯದಲ್ಲಿ ಅಪ್ಡೇಟ್ ಏನಂದರೆ, ವಿನೋಬನಗರ ಪೊಲೀಸರು ಈ ಪ್ರಕರಣದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ತಮಿಳುನಾಡಿನವರೆಗೂ ಹೋಗಿ ಆರೋಪಿಗಳನ್ನ ಅರಸ್ಟ್ ಮಾಡಿದ್ದಾರೆ. ಈ ಮೂಲಕ ಒಂಟಿ ಮನೆಗಳನ್ನು ಗುರುತಿಸಿ ದರೋಡೆ ಮಾಡುತ್ತಿದ್ದ ನಾಲ್ವರು ಅಂತರರಾಜ್ಯ ದರೋಡೆಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ ಅಂದಾಜು ₹25 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಟೊಮೆಟೊ ಚೀಪ್, ನುಗ್ಗೆಕಾಯಿ ಕಾಸ್ಟ್ಲಿ: ಶಿವಮೊಗ್ಗದಲ್ಲಿನ ತರಕಾರಿ, ಸೊಪ್ಪಿನ ರೇಟ್ ಎಷ್ಟಿದೆ ನೋಡಿ
ಬಂಧಿತ ಆರೋಪಿಗಳು
ಅರಸು ಅಲಿಯಾಸ್ ವಲ್ಲರಸು ಆರ್ (25): ತಿರುವಣ್ಣಾಮಲೈ ಜಿಲ್ಲೆ, ತಮಿಳುನಾಡು.
ಕಾಲು ಅಲಿಯಾಸ್ ಇಬ್ರಾಹಿಂ ಪಾಶಾ (40): ಜೆ.ಜೆ.ಆರ್ ನಗರ, ಬೆಂಗಳೂರು.
ಕೇಶವನ್ (43): ಸೇಲಂ ಜಿಲ್ಲೆ, ತಮಿಳುನಾಡು.
ಸತೀಶ್ ಕುಮಾರ್ (40): ಹೊಸೂರು ಮೂಲದವರು, ಹಾಲಿ ವಾಸ ಅತ್ತಿಬೆಲೆ, ಬೆಂಗಳೂರು.

ಅಂದು ನಡೆದಿದ್ದು
ದಿನಾಂಕ 18/11/2025 ರಂದು ಮಧ್ಯಾಹ್ನ ವಿನೋಬನಗರದ 60 ಅಡಿ ರಸ್ತೆಯ 16ನೇ ಕ್ರಾಸ್ನಲ್ಲಿ ಶ್ರೀಮತಿ ಹೊನ್ನಮ್ಮ ಎಂಬುವವರು ನಡೆದುಕೊಂಡು ಹೋಗುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ಅವರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕ್ನಲ್ಲಿ ಪರಾರಿಯಾಗಿದ್ದರು. ಈ ಬಗ್ಗೆ ವಿನೋಬನಗರ ಠಾಣೆಯಲ್ಲಿ ಬಿಎನ್ಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ವಶಪಡಿಸಿಕೊಂಡ ಸ್ವತ್ತು
ವಿನೋಬನಗರದ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಗ್ರಾಂ ಚಿನ್ನದ ಗಟ್ಟಿ (ಮೌಲ್ಯ ₹4,80,000).
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೋಚಿದ್ದ 70 ಗ್ರಾಂ ತೂಕದ ಮಾಂಗಲ್ಯ ಸರ (ಮೌಲ್ಯ ₹8,50,000).
ವಿನೋಬನಗರದ ಹಳೆಯ ಪ್ರಕರಣಕ್ಕೆ ಸಂಬಂಧಿಸಿದ 60 ಗ್ರಾಂ ತೂಕದ ಆಭರಣಗಳು (ಮೌಲ್ಯ ₹10,20,000).
ಕೃತ್ಯಕ್ಕೆ ಬಳಸಿದ್ದ ₹1,50,000 ಮೌಲ್ಯದ ಬಜಾಜ್ ಪಲ್ಸರ್ ಎನ್ 250 ಬೈಕ್.

ಚುನಾವಣೆಗಾಗಿ ಹೊಸ ಟೆಕ್ನಿಕ್ ಬಳಸಿದ ಶಿವಮೊಗ್ಗ ಮಹಾನಗರ ಪಾಲಿಕೆ! ಏನದು ನೋಡಿ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.
Shimoga Vinobanagar Police Arrest Inter state Robbers from tamlinadu , bangloreಶಿವಮೊಗ್ಗ, ಮೈಸೂರು ಟಾರ್ಗೆಟ್! ಗೋರಿಪಾಳ್ಯ, ತಿರುವಣ್ಣಾಮಲೈ ಆರೋಪಿಗಳನ್ನ ಹಿಡಿದ ವಿನೋಬನಗರ ಪೊಲೀಸ್!ಕೇಸ್ ಬಗ್ಗೆ ತಿಳಿದುಕೊಳ್ಳಲೇಬೇಕು!

