ಕಾಲವೇ ಹೈಟೆಕ್ ಜೆಂಜಿ ಯುಗದಲ್ಲಿದ್ದರೂ ಸರ್ಕಾರಿ ನೆಟ್ವರ್ಕ್ಗಳು ಮಾತ್ರ ಉದ್ದೇಶಪೂರ್ವಕವಾಗಿಯೇ ಹಿಂದೆ ಉಳಿದುಕೊಂಡಿದೆ. ಈ ಸಿಟ್ಟಿಗೆ ಜನ, ಸರ್ಕಾರಿ ನೆಟ್ವರ್ಕ್ಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನೇ ಸಲ್ಲಿಸ್ತಿದ್ದು, ಸತ್ತಮೇಲೆ ಇನ್ನೇನು ಮಾಡೋಣ ಅಂತಿದ್ದಾರೆ.
ರಿಪ್ಪನ್ ಪೇಟೆ ಹುಂಚಾ ವ್ಯಾಪ್ತಿಯಲ್ಲಿ 45 ದಿನಗಳಿಂದ ಬಿಎಸ್ಎನ್ಎಲ್ ಸಂಪರ್ಕ ಸಿಕ್ತಿಲ್ಲ.. ಮೊಬೈಲ್ಗಳಲ್ಲಿ ಬಿಎಸ್ಎನ್ಎಲ್ ಕಡ್ಡಿ ಕಾಣದೆ ಒಂದುವರೆ ತಿಂಗಳಾಯ್ತು ಎನ್ನುವ ಸ್ಥಳೀಯರು, ಇದರಿಂದ ರೋಸಿಹೋಗಿ ಬಿಎಸ್ಎನ್ಎಲ್ಗೆ ಭಾವಪೂರ್ಣ ಶ್ರದ್ಧಾಂಜಲಿ ಎಂಬ ಬ್ಯಾನರ್ ಅಳವಡಿಸಿ, ಮೌನಾಚರಣೆ ಮಾಡಿದ್ದಾರೆ.

ಹುಂಚಾ ಹೋಬಳಿಯಲ್ಲಿ ಬರೋ ಊರುಗಳಲ್ಲಿ ಬಿಎಸ್ಎನ್ಎಲ್ ನೆಟ್ವರ್ಕ್ ಪೂರ್ತಿ ಬಿದ್ದೋಗಿದೆ. ಅಧಿಕಾರಿಗಳಿಗೆ ಹೇಳಿ ಹಳಿ ಸಾಕಾಯ್ತು ಎನ್ನುತ್ತಿರುವ ಸ್ಥಳೀಯರು, ಹೇಗಿದ್ರೂ ಬಿಎಸ್ಎನ್ಎಲ್ ಹುಂಚಾದಲ್ಲಿ ಸತ್ತು ಹೋಗಿದೆ, ಅದಕ್ಕೆ ಶ್ರದ್ಧಾಂಜಲಿ ಸಲ್ಲಿಸಣ ಅಂತಾ ಬ್ಯಾನರ್ ಕಟ್ಟೀವಿ ಅಂತಿದ್ದಾರೆ.
ಮಕ್ಕಳಿಗೆ ಎಸ್ಎಸ್ಎಲ್ಸಿ ಪಿಯುಸಿ ಪ್ರಿಪ್ರೆಟ್ರಿ ಎಕ್ಸಾಮ್ ನಡೆಯುತ್ತಿದೆ. ಇಂತ ಟೈಂನಲ್ಲಿಯೇ ನೆಟ್ವರ್ಕ್ ಇರದೆ ಇರುವುದು ಮಾಹಿತಿಯೇ ಸಿಗದಂತೆ ಆಗಿದೆ ಎಂಬುದು ಜನರ ಆರೋಪ. ಅಲ್ಲದೆ ನೆಟ್ವರ್ಕ್ ಇಲ್ಲದೇನೆ ಬ್ಯಾಂಕ್, ಅಂಚೆ ಕಚೇರಿ, ಕೃಷಿ ಹಾಗೂ ಆಸ್ಪತ್ರೆಗೆ ಸಂಬಂಧಿಸಿದ ಯಾವ ಕೆಲಸ ಕೂಡ ಆಗ್ತಿಲ್ಲವಂತೆ. ಮತ್ತೆ ಈ ವಿಚಾರದಲ್ಲಿ ಅಧಿಕಾರಿಗಳನ್ನ ಕರೆದು ಕೂಗಿ ಹೇಳಿದರೆ ಕೇಳಲ್ಲ. ಅದಕ್ಕಾಗಿ ಈ ಥರ ಪ್ರತಿಭಟನೆ ಮಾಡ್ತಿದ್ದೀವಿ ಅಂಥಾ ಸಮರ್ಥಿಸಿಕೊಳ್ತಿದ್ದಾರೆ ಈ ಭಾಗದ ಮಂದಿ

ರಿಪ್ಪನ್ಪೇಟೆ ಸಮೀಪ ಕಾರು ಸ್ಕೂಟಿ ಡಿಕ್ಕಿ, ಮಹಿಳೆಗೆ ಗಂಭೀರ ಗಾಯ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್ Facebook , whatsapp , whatsapp chanel instagram, youtube, telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್ಗಳನ್ನು ಕ್ಲಿಕ್ ಮಾಡಿ ಓದಬಹುದು.