ಮನುಷ್ಯ ಅದೆಷ್ಟೆ ತನ್ನದೇ ಸಮ ಎಂದು ನಡೆದರೂ ದೈವಕ್ಕೆ ತಲೆಬಾಗಲೇ ಬೇಕಾಗುತ್ತದೆ. ಅದೇ ರೀತಿಯಾದ ಘಟನೆಯೊಂದು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ನಡೆದಿದೆ.
ಇಲ್ಲಿನ ಸಿಂಗನಬಿದರೆ ಗ್ರಾಮದ ಕುಳ್ಳುಂಡೆಯಲ್ಲಿ ಮದ್ಯ ಮಾರಾಟದ ಅಬ್ಬರ ಅತಿರೇಕವಾಗಿದ್ದರಿಂದ ಗ್ರಾಮಸ್ಥರು ಅದನ್ನು ತಡೆಯಲು ಮುಂದಾಗಿದ್ದರು.
ಅಕ್ರಮವಾಗಿ ಮದ್ಯ ಮಾರಾಟಗಾರರನ್ನು ಕರೆದು ಬುದ್ದಿಮಾತು ಹೇಳಿದ್ದರು, ತುಸು ಜೋರಾಗಿಯು ಬಿಸಿ ಮುಟ್ಟಿಸಿದ್ದರು. ಆದರೂ ಅಕ್ರಮ ಮಾರಾಟ ನಿಂತಿರಲಿಲ್ಲ
ಇದರಿಂದ ಬೇಸತ್ತ ಗ್ರಾಮಸ್ಥರು ಕೊನೆಯದಾಗಿ ನೆಲ್ಲಿಸರ ಕ್ಯಾಂಪ್ ಬಳಿ ಬರುವ ಚಾಮುಂಡೇಶ್ವರಿ ಅಮ್ಮನವರ ದರ್ಶನ ಪಡೆದು ದೇವರಿಗೆ ಹೇಳಿಕೆ ಕೊಟ್ಟು ವಾಪಸ್ ಹೋಗಿದ್ದರು.
ದೇವರ ಮಹಿಮೆ ಎಂಬಂತೆ ಈ ಘಟನೆ ಬಳಿಕ ಅಕ್ರಮ ಮದ್ಯಮಾರಾಟಗಾರರು ಮದ್ಯ ಮಾರಾಟ ಮಾಡುವುದಿಲ್ಲ ಎಂದು ತಾಯಿ ಮುಂದೆ ಪ್ರಮಾಣ ಮಾಡಿದ್ದಾರಂತೆ. ಸದ್ಯ ಗ್ರಾಮಸ್ಥರು ಅಂತು ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಬಿದ್ದು, ಗ್ರಾಮದಲ್ಲಿ ಎಣ್ಣೆ ಕಿರಿಕಿರಿ ತಪ್ಪಿತಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ.
