Vijayendra Slams Congress ಶಿವಮೊಗ್ಗ: ದೆಹಲಿ ಬ್ಲಾಸ್ಟ್ ವಿಚಾರದಲ್ಲಿ ಎಲ್ಲಾ ಪಕ್ಷಗಳು ಒಗ್ಗಟ್ಟು ತೋರಿಸಿ ದೇಶದ ಪರವಾಗಿ ನಿಲ್ಲಬೇಕಿತ್ತು ಆದರೆ ಕಾಂಗ್ರೆಸ್ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದರು.
ಶಿವಮೊಗ್ಗ ನಗರದಲ್ಲಿ ಇಂದಿನಿಂದಲೇ ಭಾರೀ ವಾಹನ ಸಂಚಾರ ನಿಷೇಧ: ಜಿಲ್ಲಾಧಿಕಾರಿಗಳ ಆದೇಶ : ಕಾರಣವೇನು
ಇಂದು ನಗರದಲ್ಲಿ ನಡೆದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೆಹಲಿಯಲ್ಲಿ ನಡೆದ ಸ್ಫೋಟ ಪ್ರಕರಣವನ್ನು ಭಯೋತ್ಪಾದಕ ದಾಳಿ ಎಂದೇ ಹೇಳಬೇಕು. ಘಟನೆ ನಡೆದ ತಕ್ಷಣ ಗೃಹ ಸಚಿವರು ತಕ್ಷಣವೇ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಭಯೋತ್ಪಾದಕರು ಸಂಸತ್ ಭವನ, ರಾಷ್ಟ್ರಪತಿ ಭವನ, ಸೇನಾ ಕಚೇರಿ ಸೇರಿದಂತೆ ಅನೇಕ ಸ್ಥಳಗಳು ಟಾರ್ಗೆಟ್ ಮಾಡಿದ್ದರು ಎಂದು ತಿಳಿದುಬಂದಿದೆ. ಇಂತಹ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ದೇಶದ ಪರವಾಗಿ ನಿಲ್ಲಬೇಕಿತ್ತು, ಆದರೆ ಕಾಂಗ್ರೆಸ್ ನಾಯಕರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ್ ಗಾಂಧಿ ಅವರು ಈ ತನಕ ಘಟನೆ ಕುರಿತು ಹೇಳಿಕೆಯಾಗಲಿ, ಖಂಡನೆಯಾಗಲಿ ನೀಡಿಲ್ಲ. ಸಂಕಷ್ಟದ ಸಂದರ್ಭದಲ್ಲಿ ದೇಶದ ಪರವಾಗಿ ಉಗ್ರ ಕೃತ್ಯವನ್ನು ಖಂಡಿಸಿಲ್ಲ ಎಂದು ವಿಜಯೇಂದ್ರ ಟೀಕಿಸಿದರು. ಹಾಗೆಯೇ ಕಾಂಗ್ರೆಸ್ಸಿಗರು ಗೃಹ ಸಚಿವರಿಗೆ ಬಳೆ ಕಳಿಸಿದ ವಿಚಾರದ ಬಗ್ಗೆ ಮಾತನಾಡಿದ ಅವರು ಇದೇ ರೀತಿಯ ಕೆಲಸ ನಾವು ಮಾಡುವುದಾಗಿದ್ದರೆ, ಸ್ವಾತಂತ್ರ್ಯ ಬಂದಾಗಿನಿಂದ ಕಾಂಗ್ರೆಸ್ ನಾಯಕರಿಗೆ ಎಷ್ಟು ಸಲ ಬಳೆ ಕಳಿಸಬೇಕಾಗುತ್ತಿತ್ತು, ಅದಕ್ಕಾಗಿ ಬಳೆಯ ಫ್ಯಾಕ್ಟರಿಯನ್ನೇ ತೆರೆಯಬೇಕಾಗುತ್ತಿತ್ತು” ಎಂದು ಅವರು ವ್ಯಂಗ್ಯವಾಡಿದರು.
Vijayendra Slams Congress ಕಬ್ಬು ಬೆಳೆಗಾರರು ಮತ್ತು ರೈತರ ಸಮಸ್ಯೆಗಳ ಕುರಿತು ಟೀಕೆ
ಕಬ್ಬು ಬೆಳೆಗಾರರ ಹೋರಾಟ ಮುಂದುವರಿದಿದ್ದರೂ ರಾಜ್ಯ ಸರ್ಕಾರ ಈ ತನಕ ಗಮನ ಹರಿಸಿಲ್ಲ . ಮುಖ್ಯಮಂತ್ರಿ ಆದಿಯಾಗಿ ಸಚಿವರು ಬೆಂಗಳೂರು ಬಿಟ್ಟು ಹೊರಗೆ ಹೋಗುತ್ತಿಲ್ಲ. ತಕ್ಷಣವೇ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು. ಅದೇ ರೀತಿ, ಮೆಕ್ಕೆಜೋಳ ಖರೀದಿಯ ಬಗ್ಗೆಯೂ ಗಮನ ಹರಿಸಬೇಕು” ಎಂದು ಒತ್ತಾಯಿಸಿದರು.ಇದಲ್ಲದೆ, ಸರ್ಕಾರ ಬರ ಪರಿಹಾರದ ವಿಷಯದಲ್ಲಿಯೂ ನಿರ್ಲಕ್ಷ್ಯ ವಹಿಸಿದೆ. “ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಯಾವ ಪುಣ್ಯಾತ ಈ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದಾರೋ ಗೊತ್ತಿಲ್ಲ” ಎಂದು ಆಕ್ರೋಶ ಹೊರಹಾಕಿದರು.
Vijayendra Slams Congress ಬಿಹಾರ ಚುನಾವಣೆ ಎಕ್ಸಿಟ್ ಪೋಲ್ ನಿಜವಾಗಲಿದೆ.
ಅಂತಿಮವಾಗಿ ಬಿಹಾರ ಚುನಾವಣಾ ಎಕ್ಸಿಟ್ ಪೋಲ್ (Exit Poll) ವರದಿ ನಿಜವಾಗಲಿದೆ. ಬಿಹಾರದಲ್ಲಿ ಎನ್‌ಡಿಎ ಮೈತ್ರಿ ಕೂಟ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.


