Vande bharath train : ಇನ್ಮುಂದೆ ವಂದೇ ಭಾರತ್ ಟ್ರೇನ್‌ನಲ್ಲಿ ಕೊನೆಯ 15 ನಿಮಿಷದಲ್ಲಿ ಟಿಕೆಟ್ ಬುಕ್ಗೆ ಅವಕಾಶ
ದಕ್ಷಿಣ ರೈಲ್ವೆಯ ವ್ಯಾಪ್ತಿಗೆ ಬರುವ 8 ವಂದೇ ಭಾರತ್ ರೈಲುಗಳಲ್ಲಿ ಟಿಕೆಟ್ ಬುಕಿಂಗ್ ನಿಯಮಗಳನ್ನು ಸರಳೀಕರಿಸಲಾಗಿದೆ. ಈಗ ಪ್ರಯಾಣಿಕರು ರೈಲು ತಮ್ಮ ನಿಲ್ದಾಣಕ್ಕೆ ಬರುವ 15 ನಿಮಿಷಗಳ ಮೊದಲು ಟಿಕೆಟ್ ಕಾಯ್ದಿರಿಸಬಹುದು. ಈ ಮೊದಲು, ಮೊದಲ ನಿಲ್ದಾಣದಿಂದ ಹೊರಟ ಬಳಿಕ ಟಿಕೆಟ್ ಬುಕ್ ಮಾಡಲು ಅವಕಾಶವಿರಲಿಲ್ಲ. ಆದರೆ, ರೈಲ್ವೇ ಇಲಾಖೆಯು ‘ಪ್ಯಾಸೆಂಜರ್ ರಿಸರ್ವೇಶನ್ ಸಿಸ್ಟಮ್’ ಅನ್ನು ನವೀಕರಿಸಿದ ನಂತರ ಖಾಲಿ ಸೀಟುಗಳನ್ನು ಕೊನೆಯ 15 ನಿಮಿಷಗಳವರೆಗೂ ಬುಕ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
Vande bharath train ಇದರಿಂದ, ಪ್ರಯಾಣಿಕರು ತಮ್ಮ ರೈಲ್ವೇ ನಿಲ್ದಾಣಕ್ಕೆ ರೈಲು ಬರುವ ಕೆಲವೇ ನಿಮಿಷಗಳ ಮೊದಲು ಟಿಕೆಟ್ ಬುಕ್ ಮಾಡಿ ಪ್ರಯಾಣಿಸಲು ಸಾಧ್ಯವಾಗುತ್ತದೆ. ಈ ಹೊಸ ನಿಯಮದಿಂದ ವಂದೇ ಭಾರತ್ ರೈಲುಗಳಲ್ಲಿನ ಖಾಲಿ ಸೀಟುಗಳನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ. ಸದ್ಯಕ್ಕೆ ಈ ಸೌಲಭ್ಯವನ್ನು ದಕ್ಷಿಣ ರೈಲ್ವೆಯ ಆಯ್ದ ಎಂಟು ವಂದೇ ಭಾರತ್ ರೈಲುಗಳಿಗೆ ಮಾತ್ರ ವಿಸ್ತರಿಸಲಾಗಿದೆ.