ಮೆಗ್ಗಾನ್​ ಆಸ್ಪತ್ರೆಯಲ್ಲಿ ಅಪರಿಚಿತ ಮಹಿಳೆ ಸಾವು : ಬಲಗೈಲಿದೆ ಹೂವಿನ ಹಚ್ಚೆ

prathapa thirthahalli
Prathapa thirthahalli - content producer

Unidentified woman death ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಪರಿಚಿತ  ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ವಾರಸುದಾರರ ಪತ್ತೆಗೆ ದೊಡ್ಡಪೇಟೆ ಪೊಲೀಸರು ಪ್ರಕಟಣೆ ನೀಡಿದ್ದಾರೆ.

ಅಕ್ಟೋಬರ್​ 26 ರಂದು ಮೆಗ್ಗಾನ್ ಆಸ್ಪತ್ರೆ ಹಳೆ ಕಟ್ಟಡದ ಹತ್ತಿರ ಲಕ್ಷ್ಮೀ ಕೋಂ ಪ್ರಭಾಕರ ಎಂಬ 42 ವರ್ಷದ ಮಹಿಳೆ ಸುಸ್ತಾಗಿ ಬಿದ್ದಿದ್ದರು. ಅದನ್ನು ಕಂಡ ಸಾರ್ವಜನಿಕರು ಮಹಿಳೆಯನ್ನು ಮೆಗ್ಗಾನ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ನ. 03 ರಂದು ಮೃತಪಟ್ಟಿದ್ದಾರೆ.   

ಶಿವಮೊಗ್ಗದಲ್ಲಿ ಕಟ್ಟೆಚ್ಚರ: ರೈಲ್ವೆ ನಿಲ್ದಾಣ, ಮಾರುಕಟ್ಟೆಗಳಲ್ಲಿ ಶ್ವಾನದಳದಿಂದ ಬಿಗಿ ತಪಾಸಣೆ : ಕಾರಣವೇನು

ಹಳೆ ಕಟ್ಟಡದ ಹತ್ತಿರ ಅ. 26 ರಂದು ಲಕ್ಷ್ಮೀ ಕೋಂ ಪ್ರಭಾಕರ ಎಂಬ 42 ವರ್ಷದ ಮಹಿಳೆ ಸುಸ್ತಾಗಿ ಬಿದ್ದಿದ್ದು, ಸಾರ್ವಜನಿಕರ ಸಹಾಯದಿಂದ ಮೆಗ್ಗಾನ್ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ನ. 03 ರಂದು ಮೃತಪಟ್ಟಿರುತ್ತಾರೆ. ಈಕೆಯ ವಿಳಾಸ ತಿಳಿದಿರುವುದಿಲ್ಲ. ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ ಈಕೆಯ ವಿಳಾಸ ತಿಳಿದಿರುವುದಿಲ್ಲ. ಶವವನ್ನು ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

ಮೃತ ಮಹಿಳೆಯು 5.00 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದು, ಬಲಗೈನ ಒಳಭಾಗದಲ್ಲಿ ಹೂವಿನ ಹಚ್ಚೆ ಗುರುತ ಇರುತ್ತದೆ. ಈ ಮೃತ ಮಹಿಳೆಯ ವಾರಸುದಾರರು ಪತ್ತೆಯಾದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.:08182-261414 /9916882544 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Unidentified woman death

 

Share This Article