ಇಂಟರ್​ ನ್ಯಾಷನಲ್ ಕಂಪನಿಯಲ್ಲಿ ಕೆಲಸದ ಆಫರ್​ ನಂಬಿದ್ದಕ್ಕೆ ಎದುರಾಯ್ತು ಶಾಕ್​!

A case has been registered at Tunganagar police station for cheating people by offering them a job in an international company

ಇಂಟರ್​ ನ್ಯಾಷನಲ್ ಕಂಪನಿಯಲ್ಲಿ ಕೆಲಸದ ಆಫರ್​ ನಂಬಿದ್ದಕ್ಕೆ  ಎದುರಾಯ್ತು ಶಾಕ್​!
A case has been registered at Tunganagar police station for cheating people by offering them a job in an international company

 Shivamogga Feb 11, 2024 |  Tunganagar police station ಉದ್ಯೋಗ ಕೊಡಿಸುವುದಾಗಿ ನಂಬಿಸಿ 89 ಲಕ ರೂ. ವಂಚನೆ  ಮಾಡಿರುವ ಪ್ರಕರಣವೊಂದು ಶಿವಮೊಗ್ಗದಲ್ಲಿ ದಾಖಲಾಗಿದೆ. 

ಪ್ರತಿಷ್ಟಿತ ಟೆಕ್​  ಕಂಪೆನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗದ ಕೆಲ ಯುವಕರಿಗೆ ಕರೆ ಮಾಡಿದ ಆರೋಪಿಗಳು, ಯುವಕರಿಂದ  89 ಲಕ್ಷ ರೂಪಾಯಿ  ಹಣ ಪಡೆದು ವಂಚಿಸಿದ್ದಾರೆ. 

ಶಿವಮೊಗ್ಗದ ಹರಿಗೆಯ ಯುವಕನಿಗೆ ಬೆಂಗಳೂರಿನ ಸ್ನೇಹಿತರೊಬ್ಬರ ಮೂಲಕ ಒರಿಸ್ಸಾ ಮೂಲದ ಸೂರ್ಯಂಗ್ ಅಲಿಯಾಸ್ ಕಾಲಿರಾತ್ ಎಂಬಾತನ ಪರಿಚಯವಾಗಿತ್ತು. ಆತ ಐಬಿಎಂ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದ್ದನಂತೆ 

ಅಲ್ಲದೆ ಕೆಲಸ ಕೊಡಿಸಲು ತಲಾ 1.60 ಲಕ್ಷ ರೂ. ಹಣ ನೀಡಬೇಕು. ಇದಕ್ಕೆ ಪ್ರತಿಯಾಗಿ ಐಬಿಎಂ ಕಂಪನಿಯಿಂದ ಲ್ಯಾಪ್ ಟಾಪ್ ಒದಗಿಸಲಾಗುತ್ತದೆ ಎಂದು ನಂಬಿಸಿದ್ದ ಎಂದು ಆರೋಪಿಸಲಾಗಿದೆ. 

ಇದನ್ನು ನಂಬಿದ ಯುವಕರು ರೆಸ್ಕೂಂ ಜತೆಗೆ ವಿವಿಧ ಆಕೌಂಟ್‌ ಗಳಿಂದ 89 ಲಕ್ಷ ರೂಪಾಯಿ ಹಣವನ್ನ ಸಹ ಕಳುಹಿಸಿದ್ದರು. ಆ ಬಳಿಕ ಮೋಸ ಹೋಗಿರುವುದು ಗೊತ್ತಾಗಿ. ಈ ಸಂಬಂಧ ತುಂಗಾ ನಗರ ಠಾಣೆಗೆ ದೂರು ನೀಡಿದ್ದಾರೆ. 

+