KARNATAKA NEWS/ ONLINE / Malenadu today/ Nov 7, 2023 SHIVAMOGGA NEWS
Shivamogga | ಯಾಮಾರಿಸಲು ಇಂತಹುದ್ದೆ ವಿಷಯ, ವಿಚಾರ, ವಸ್ತು ಆಗಬೇಕು ಅಂತಿಲ್ಲ, ನಿಮ್ಮ ನಂಬಿಕೆಯನ್ನ ಗುರಿಮಾಡುವ ಮಂದಿ ನಿಮ್ಮ ಮೊಬೈಲ್ನಿಂದ ನಿಮ್ಮೆದುರೇ ಹಣವನ್ನು ದೋಚುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತಹ ಪ್ರಕರಣವೊಂದು CEN ಪೊಲೀಸ್ ಸ್ಟೇಷನ್ನಲ್ಲಿ ನಡೆದಿದೆ.
ಎಂತದ್ದು ಕೇಸ್?
ಈ ವಿಷಯದಲ್ಲಿ ರಿಟೈರ್ಡ್ ಪರ್ಸನ್ ಒಬ್ಬರಿಗೆ ಬಹಳ ಅನ್ಯಾಯವಾಗಿದೆ. ಮನೆಯಲ್ಲಿ ವಿಶ್ರಾಂತಿ ಜೀವನ ಕಳೆಯುತ್ತಿದ್ದ ಅವರಿಗೆ ಪಾಪಾತ್ಮನೊಬ್ಬ ಫೋನ್ ಮಾಡಿ ನೀವು ಅಕೌಂಟ್ ಹೊಂದಿರುವ ಬ್ಯಾಂಕ್ನ ಮ್ಯಾನೇಜರ್ ತಾನು ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ ನಿಮ್ಮ ಕ್ರೆಡಿಟ್ ಕಾರ್ಡ್ ಕ್ಯಾನ್ಸಲ್ ಮಾಡಬೇಕು ಎಂದು ತಿಳಿಸಿದ್ದಾನೆ. ಸುಮಾರು ಹೊತ್ತು ಮಾತನಾಡಿದ ಆರೋಪಿ, ಕೊನೆಗೆ ಸಂತ್ರಸ್ತರನ್ನ ನಂಬಿ, ಅವರ ಮೊಬೈಲ್ಗೆ Any Desk App Download ಮಾಡಿಸಿದ್ದಾನೆ.
READ : D. B. Chandregowda | ಹಿರಿಯ ಮುತ್ಸದ್ದಿ ಡಿ.ಬಿ.ಚಂದ್ರೇಗೌಡ ಇನ್ನಿಲ್ಲ | ಅಪರೂಪದ ರಾಜಕಾರಣಿಯ ಜೀವನ ಹೇಗಿತ್ತು ಓದಿ?
ಹೀಗೆ ಮೊಬೈಲ್ಗೆ ಎನಿ ಡೆಸ್ಕ್ ಆ್ಯಪ್ ಡೌನ್ ಮಾಡಿಕೊಂಡ ಬಳಿಕ, ಆರೋಪಿ, ಖುದ್ದಾಗಿ ಸಂತ್ರಸ್ತರ ಮೊಬೈಲ್ನಿಂದ 80 ಸಾವಿರಕ್ಕೂ ಹೆಚ್ಚು ಹಣವನ್ನು ವಿತ್ಡ್ರಾ ಮಾಡಿಕೊಂಡಿದ್ದಾನೆ. ಕಂಡವರ ಮೊಬೈಲ್ನ್ನ ಟೇಕ್ ಓವರ್ ತೆಗೆದುಕೊಂಡು ಎಲ್ಲಿಯೋ ಕುಳಿತು ತನ್ನದೇ ಅಕೌಂಟ್ಗೆ ಹಣವನ್ನು ಹಾಕಿಕೊಂಡ ಆರೋಪಿ ವಿರುದ್ಧ ಸಂತ್ರಸ್ತರು ದೂರು ನೀಡಿದ್ದಾರೆ.
ದೇಶದಲ್ಲಿಯೇ ಅತಿದೊಡ್ಡ ಸ್ಕ್ಯಾಮ್ ಆಗುತ್ತಿರುವ ಆನ್ಲೈನ್ ದೋಖಾದ ಬಗ್ಗೆ ದಿನನಿತ್ಯ ಸಾವಿರಾರು ಕಂಪ್ಲೆಂಟ್ಗಳು ದಾಖಲಾಗುತ್ತಿವೆ. ಅವುಗಳ ಬೆನ್ನತ್ತಿ ಹೋಗಿ ಆರೋಪಿಗಳನ್ನ ಹಿಡಿದು ತರುವುದು ಕಷ್ಟದ ಕೆಲಸ. ಆದಾಗ್ಯು ಪೊಲೀಸ್ ವ್ಯವಸ್ಥೆ ಮೇಲಿನ ನಂಬಿಕೆ ಮೇಲೆ ದೂರುಗಳು ದಾಖಲಾಗುತ್ತವೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು ಬಿಗ್ ಬ್ರೇಕ್ ಥ್ರೂ ಕೊಡುವ ನಿರೀಕ್ಷೆಯಿದೆ…