KARNATAKA NEWS/ ONLINE / Malenadu today/ May 25, 2023 SHIVAMOGGA NEWS
ತೀರ್ಥಹಳ್ಳಿ/ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಈಜಲು ಹೋಗಿದ್ದ ಬಾಲಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 16 ವರ್ಷದ ಅಶ್ವಥ್ ಮೃತ ಬಾಲಕ
ನಡೆದ ಘಟನೆ
ತೀರ್ಥಹಳ್ಳಿಯ ಛತ್ರಕೇರಿಯ ಬಳಿ ಇರುವ ಜಯಲಕ್ಷ್ಮೀ ಸಾಮಿಲ್ ಬಳಿಯಲ್ಲಿ ಅಶ್ವಥ್ ನಿನ್ನೆ ಸಂಜೆ ನೀರಿಗೆ ಇಳಿದಿದ್ದ. ತನ್ನ ಸ್ನೇಹಿತನ ಜೊತೆಗೆ ನೀರಿಗೆ ಇಳಿದಿದ್ದ ಅಶ್ವಥ್, ನಿಯಂತ್ರಿಸಲಾಗದೇ ನೀರಿನಲ್ಲಿ ಮುಳುಗಿದ್ದಾನೆ. ಘಟನೆ ಬೆನ್ನಲ್ಲೆ ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಸ್ಥಳೀಯ ಈಜುಗಾರ ಪ್ರಮೋದ್ ಪೂಜಾರಿ ಹಾಗೂ ಅಗ್ನಿಶಾಮಕ ಸಿಬ್ಬಂದಿ ಅಶ್ವಥ್ನ ಮೃತದೇಹವನ್ನು ನೀರಿನಿಂದ ಹೊರಕ್ಕೆ ತೆಗೆದಿದ್ದಾರೆ.