todays love horoscope for singles and couples ರಾಶಿಫಲ 2025: ವಿವರವಾದ ರಾಶಿಭವಿಷ್ಯ
ಮೇಷ (Aries)
ಈ ದಿನ ಮೇಷ ರಾಶಿಯವರಿಗೆ ಆರ್ಥಿಕ ಸ್ಥಿರತೆ ಮತ್ತು ಹೊಸ ಅವಕಾಶಗಳು ದೊರೆಯಲಿವೆ. ವ್ಯವಹಾರ ಅಥವಾ ಉದ್ಯೋಗದಲ್ಲಿ ಲಾಭದಾಯಕ ಒಪ್ಪಂದ ಸಾಧ್ಯತೆ .ಗೌರವ ಹೆಚ್ಚುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸಮಾಧಾನ ಇರಲಿ.
ವೃಷಭ (Taurus)
ವೃಷಭ ರಾಶಿಯವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ. ಆಸ್ತಿ ಸಂಬಂಧಿತ ವಿವಾದ ಪರಿಹಾರಕ್ಕಾಗಿ ಓಡಾಟ, ವಾಹನ ಖರೀದಿ ಅಥವಾ ರಿಪೇರಿಗೆ ಸಂಬಂಧಿಸಿದ ಖರ್ಚು. ಉದ್ಯೋಗ ಹಾಗೂ ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿ ನಿರೀಕ್ಷಿಸಬಹುದು.
ಮಿಥುನ (Gemini)
ಮಿಥುನ ರಾಶಿಯವರಿಗೆ ಹಣಕಾಸಿನ ಒತ್ತಡ ಇರಲಿದೆ.. ಸಾಲ ಪಡೆಯುವ ಪ್ರಯತ್ನಕ್ಕೆ ಅಡಚಣೆ. ದೂರದ ಪ್ರಯಾಣ, ಕೆಲಸಕ್ಕೆ ತೊಂದರೆ ಉಂಟುಮಾಡಬಹುದು. ಅನ್ಯರಿಂದ ಕಿರುಕುಳ ಅಥವಾ ತಪ್ಪುಗ್ರಹಿಕೆ. ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ವ್ಯವಹಾರ ಮತ್ತು ಉದ್ಯೋಗದಲ್ಲಿ ನಿಧಾನ ಪ್ರಗತಿ.

todays love horoscope for singles and couples ಕರ್ಕಾಟಕ (Cancer)
ಕರ್ಕಾಟಕ ರಾಶಿಯವರಿಗೆ ಜವಾಬ್ದಾರಿಗಳು ಹೆಚ್ಚಾಗಿರಲಿದೆ.. ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಚಂಚಲತೆ ಕಾಣಬಹುದು. ಎಷ್ಟೇ ಪ್ರಯತ್ನಿಸಿದರೂ ಫಲಿತಾಂಶ ಸಿಗದ ಪರಿಸ್ಥಿತಿ ಬೇಗ ಬೇಸರ ಬೇಡ. ವಿದ್ಯಾರ್ಥಿಗಳಿಗೆ ಅನುಕೂಲಕರವಲ್ಲದ ಸಮಯ. ಉದ್ಯೋಗ ಮತ್ತು ವ್ಯವಹಾರದಲ್ಲಿಂದು ಮಂದಗತಿ ಕಂಡುಬರಬಹುದು.
ಸಿಂಹ (Leo)
ಸಿಂಹ ರಾಶಿಯವರಿಗೆ ಹಿಂದಿನ ಕಹಿ ಅನುಭವಗಳನ್ನು ಮರೆಯುವ ದಿನ. ಆಸ್ತಿ, ಜಮೀನು ಅಥವಾ ಸ್ವತ್ತು ಸಂಬಂಧಿತ ಲಾಭದಾಯಕ ಒಪ್ಪಂದ ಕೈಗೊಳ್ಳಬಹುದು.. ಪ್ರೀತಿಪಾತ್ರರಿಂದ ಶುಭ ಸುದ್ದಿ ಬರಲಿದೆ. ವಾಹನ ಸಂಬಂಧಿತ ಯೋಜನೆಗಳು ಫಲಿಸಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಕಾರಾತ್ಮಕ ಬದಲಾವಣೆಗಳು ನಡೆಯಲಿವೆ.
ಕನ್ಯಾ (Virgo)
ಕನ್ಯಾ ರಾಶಿಯವರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.. ಆಸ್ತಿ ಸಂಬಂಧಿತ ಸಮಸ್ಯೆಗಳು ಶಾಂತಿಯುತವಾಗಿ ಬಗೆಹರಿಯಲಿವೆ. ಸಹೋದರರು ಅಥವಾ ಸ್ನೇಹಿತರೊಂದಿಗಿನ ಸಂಬಂಧ ಮತ್ತಷ್ಟು ಬಲಪಡೆಯುತ್ತವೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಭರವಸೆಕಾರಿ ಸುದ್ದಿ ಬರಲಿದೆ.
ತುಲಾ (Libra)
ತುಲಾ ರಾಶಿಯವರಿಗೆ ನಿರೀಕ್ಷೆಗಳು ಈಡೇರುವ ಸಾಧ್ಯತೆ ಇದೆ. ಕೆಲಸಗಳು ನಿಧಾನಗತಿಯಲ್ಲಿ ಸಾಗಬಹುದು. ಆಸ್ತಿ ವಿವಾದಗಳು ಅಥವಾ ಕಾನೂನು ಸಮಸ್ಯೆಗಳು ತಲೆದೋರಬಹುದು. ಆರ್ಥಿಕ ಪರಿಸ್ಥಿತಿ ಸ್ವಲ್ಪ ಹದಗೆಡಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಅಡಚಣೆ ಕಾಣಬಹುದು.
ವೃಶ್ಚಿಕ (Scorpio)
ವೃಶ್ಚಿಕ ರಾಶಿಯವರಿಗೆ ಸಾಲದ ಸಮಸ್ಯೆ ಎದುರಾಗಬಹುದು. ಹಠಾತ್ ಪ್ರಯಾಣ ಅನಿವಾರ್ಯವಾಗಬಹುದು. ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಸಂಬಂಧಿಕರೊಂದಿಗೆ ಕಾರಣವಿಲ್ಲದೆ ವಾಗ್ವಾದ ಸಂಭವಿಸಬಹುದು. ಕಠಿಣ ಪರಿಶ್ರಮದ ಅಗತ್ಯವಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಈ ದಿನ ಸಾಮಾನ್ಯವಾಗಿರಲಿದೆ.
ಧನು (Sagittarius)
ಧನು ರಾಶಿಯವರಿಗೆ ಶುಭ ಸುದ್ದಿ ಬರಲಿದೆ. ಸಾಲ ತೀರಿಸಲ್ಪಟ್ಟು ಆರ್ಥಿಕ ಒತ್ತಡ ಕಡಿಮೆಯಾಗುತ್ತದೆ. ಹೊಸ ಕೆಲಸ ಅಥವಾ ಯೋಜನೆಗಳು ಕೈಗೆತ್ತಿಕೊಳ್ಳಲು ಅನುಕೂಲಕರ ಸಮಯ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ನಿರೀಕ್ಷಿಸಬಹುದು.
todays love horoscope for singles and couples ಮಕರ (Capricorn)
ಮಕರ ರಾಶಿಯವರಿಗೆ ಕೆಲಸಗಳು ನಿಧಾನವಾಗಿ ಸಾಗಬಹುದು. ಕೆಲಸದ ಒತ್ತಡ ಹೆಚ್ಚಾಗಬಹುದು.. ಒಪ್ಪಂದಗಳು ಅಥವಾ ಯೋಜನೆಗಳು ಮುಂದೂಡಲ್ಪಡಬಹುದು. ಕುಟುಂಬದಲ್ಲಿ ಸಣ್ಣಪುಟ್ಟ ಸಮಸ್ಯೆ ಉಂಟಾಗಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಸಾಮಾನ್ಯ ಪ್ರಗತಿ ಇರುತ್ತದೆ.
ಕುಂಭ (Aquarius)
ಕುಂಭ ರಾಶಿಯವರಿಗೆ ಕೆಲಸದಲ್ಲಿ ವಿಳಂಬ ಕಂಡುಬರಬಹುದು. ಹಣಕಾಸಿನ ವ್ಯವಹಾರಗಳು ಸ್ಪಷ್ಟವಾಗಿಲ್ಲದ ಪರಿಸ್ಥಿತಿ ಇರುತ್ತದೆ. ಆರೋಗ್ಯ ಸ್ವಲ್ಪ ಸಹಕರಿಸದಿರಬಹುದು. ವ್ಯಾಪಾರ ಮತ್ತು ಉದ್ಯೋಗದಲ್ಲಿ ಗೊಂದಲಮಯ ಪರಿಸ್ಥಿತಿ ಎದುರಾಗಬಹುದು.
ಮೀನ (Pisces)
ಮೀನ ರಾಶಿಯವರು ಹೊಸ ಸಾಲ ಅಥವಾ ಹೂಡಿಕೆಗೆ ಸಂಬಂಧಿಸಿದ ಯೋಜನೆಗಳು ಹಾಕಿಕೊಳ್ಳಬಹುದು. ಮಾನಸಿಕ ಒತ್ತಡ ಅಥವಾ ಅಸ್ಥಿರತೆ ಅನುಭವಿಸಬಹುದು. ಕುಟುಂಬದಲ್ಲಿ ಒತ್ತಡದ ವಾತಾವರಣ ಇರಬಹುದು. ಉದ್ಯೋಗ ಮತ್ತು ವ್ಯವಹಾರದಲ್ಲಿ ಉತ್ಸಾಹಹೀನತೆ ಕಾಣಬಹುದು.