today gold rate : ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷದ ಕಾರಣದಿಂದ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ಇಳಿಕೆ ಕಂಡಿದೆ. ಯುದ್ಧದಂತಹ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆ ಹೆಚ್ಚಾಗುವುದು ಸಾಮಾನ್ಯ. ಆದರೆ ಇದೀಗ ಮೇ 7 ಹಾಗೂ ಮೇ 8 ರವರೆಗೆ ಬೆಲೆ ಹೆಚ್ಚಳವಾಗಿ ನಂತರ ಭಾರೀ ಇಳಿಕೆಯಾಗಿದೆ.
ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ದರದಲ್ಲಿ ಇಂದು ಬರೋಬ್ಬರಿ 195 ರೂಪಾಯಿ ಇಳಿಕೆ ಆಗಿದೆ. ಇಂದಿನ ಚಿನ್ನದ ದರ 22 ಕ್ಯಾರೆಟ್ 1 ಗ್ರಾಂ ಗೆ 8,610 ರೂ ಆಗಿದೆ, 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂ ಬೆಲೆ ಕೂಡಾ 213 ರೂ ಕಡಿಮೆ ಆಗಿ, 9,393 ರೂ ಗೆ ಕಡಿಮೆ ಆಗಿದೆ.
today gold rate : 10 ಗ್ರಾಂ ಬಂಗಾರದ ಬೆಲೆ ಎಷ್ಟು
22 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯಲ್ಲಿ ಇಂದು 1950 ರೂ ಕಡಿಮೆ ಆಗಿದೆ. ಇಂದಿನ ಬೆಲೆ 86,100 ರೂ ಆಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಬೆಲೆ 2130 ರೂ ಕಡಿಮೆ ಆಗಿ, ಇಂದಿನ ಬೆಲೆ 93,930 ರೂ ಆಗಿದೆ.