TODAY ELECTION NEWS / ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಸಮುದಾಯದ ಸಾಮಾಜಿಕ ನ್ಯಾಯದ ಪ್ರಶ್ನೆ?ಭೋವಿ ಸಮಾಜಕ್ಕೆ ಸಿಗುತ್ತಾ ಟಿಕೆಟ್?

ಭೋವಿ ಸಮಾಜ ಹೆಚ್ಚಿರುವ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಆ ಸಮುದಾಯದ ನಾಯಕರಿಗೆ ಚುನಾವಣೆ ಸ್ಪರ್ಧಿಸುವುದಕ್ಕೆಅವಕಾಶ ನೀಡದಿರುವುದು ಸಾಮಾಜಿಕ ನ್ಯಾಯಕ್ಕೆ ಎಸಗಿದ ಅಪಮಾನವಲ್ಲವೇ ಎಂಬ ಪ್ರಶ್ನೆಯೊಂದು ಭೋವಿ ಸಮಾಜದಲ್ಲಿಯೇ ಕೇಳಿಬರುತ್ತಿದೆ.

TODAY ELECTION NEWS / ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಸಮುದಾಯದ ಸಾಮಾಜಿಕ ನ್ಯಾಯದ ಪ್ರಶ್ನೆ?ಭೋವಿ ಸಮಾಜಕ್ಕೆ ಸಿಗುತ್ತಾ ಟಿಕೆಟ್?

ಶಿವಮೊಗ್ಗ ಗ್ರಾಮಾಂತರ ಮೀಸಲು ಕ್ಷೇತ್ರದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಬೋವಿ ಸಮಾಜವನ್ನು ಕಡೆಗಣಿಸುತ್ತಿವೆ ಎಂಬ ಗಂಭೀರ ಆರೋಪ ಸಮುದಾಯದಲ್ಲಿ ಕೇಳಿಬಂದಿದೆ. ಹೊಳೆಹೊನ್ನೂರು ಮೀಸಲು ಕ್ಷೇತ್ರದಿಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವಾದ (shimoga rural constituency) ನಂತರ ಕ್ಷೇತ್ರ ರಾಜಕೀಯ ಪಲ್ಲಟಗಳಿಗೆ ಒಳಗಾಗಿದೆ. ಅಲ್ಲದೆ ಪ್ರತಿಸಲವೂ ಚುನಾವಣಾ ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿರುವ ಕ್ಷೇತ್ರದಲ್ಲಿ ಕೈ ಪಾಳಯದ ಟಿಕೆಟ್​ ಕುರಿತಾಗಿ ಗಂಭೀರ ಚರ್ಚೆ ನಡೆದಿದೆ. ಈ ನಿಟ್ಟಿನಲ್ಲಿ ಒಂದಿಷ್ಟು ಹಿನ್ನೆಲೆಯನ್ನು ನೋಡುವುದಾದರೆ, ಕ್ಷೇತ್ರದ ಪ್ರಬಲ ಸಮುದಾಯ ಎಂದೇ ಬಿಂಬಿತವಾಗಿರುವ ಭೋವಿ ಸಮುದಾಯ ಈ ಸಲ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.

ಇದನ್ನು ಓದಿ :  ಶಿವಮೊಗ್ಗದಲ್ಲಿ ಗಿಲ್ಲಕ್ಕೋ ಶಿವ...ಗಿಲ್ಲಕ್ಕೋ/ ಶಿವಣ್ಣನ ಟಗರು ಡ್ಯಾನ್ಸ್​ಗೆ , ಬಿಂದಾಸ್​ ಆಗಿ ಕುಣಿದ ಲೇಡಿಸ್ ಫ್ಯಾನ್ಸ್​

ಶಿವಮೊಗ್ಗದಲ್ಲಿ 1.60 ಲಕ್ಷ ಮತಗಳಿವೆ

ಶಿವಮೊಗ್ಗ ಜಿಲ್ಲೆಯಲ್ಲಿ ಬೋವಿ ಸಮಾಜದ ಮತಗಳು ಸುಮಾರು 1.60 ಲಕ್ಷದಷ್ಟಿದೆ. ಸೊರಬ 28 ಸಾವಿರ, ಶಿಕಾರಿಪುರ 31 ಸಾವಿರ, ಭದ್ರಾವತಿ  20 ಸಾವಿರ, ತೀರ್ಥಹಳ್ಳಿ 8 ಸಾವಿರ, ಸಾಗರ 4 ಸಾವಿರ  ಹೀಗೆ ಒಟ್ಟು ಜಿಲ್ಲೆಯಲ್ಲಿ 1.60 ಲಕ್ಷದಷ್ಟು ಭೋವಿ ಮತಗಳು ಇವೆ. ಭೋವಿ ಜನಾಂಗದವರು ಹೆಚ್ಚು ವಿದ್ಯಾವಂತರಾಗುತ್ತಿದ್ದಂತೆ ಶಿವಮೊಗ್ಗದಲ್ಲಿ ನೆಲೆಸಿದ್ದು ಜಿಲ್ಲೆಯಲ್ಲಿ ತಮ್ಮ‌ ಜನಾಂಗದ  ಓರ್ವನನ್ನು ಶಾಸಕನಾಗಿ ನೋಡಬೇಕೆಂಬ ಕನಸು ಜಿಲ್ಲೆಯ ಸಮಾಜದ ಮುಖಂಡರದ್ದಾಗಿದೆ. 1972ರವರೆಗೆ ಮೀಸಲು ಕ್ಷೇತ್ರವಾಗಿದ್ದ ಶಿಕಾರಿಪುರ ನಂತರ 1977 ರಲ್ಲಿ ಹೊಳೆಹೊನ್ನೂರು ಮೀಸಲು ಕ್ಷೇತ್ರವಾಗಿ ಬದಲಾಯಿತು. ಹೊಳೆಹೊನ್ನೂರು ಕ್ಷೇತ್ರದಲ್ಲಿ  ಲಿಂಗಾಯಿತ ಮತಗಳೇ ನಿರ್ಣಾಯಕವಾಗಿದೆ. ಮೀಸಲು ಅಭ್ಯರ್ಥಿ ಗೆಲ್ಲಬೇಕಾದರೆ, ಲಿಂಗಾಯಿತ ಸಮುದಾಯವೇ ಇಲ್ಲಿ ನಿರ್ಣಾಯಕವಾಗಿದೆ.

BREAKING NEWS / ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಕೆಲ ಮಕ್ಕಳ ಆರೋಗ್ಯ ದಲ್ಲಿ ಏರುಪೇರು/ ಸಾಗರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ/ BEO ಹೇಳಿದ್ದೇನು?

ಶಿವಮೊಗ್ಗ ಗ್ರಾಮಾಂತರ ಭಾಗದ ಜಾತಿವಾರು ಅಂದಾಜು ಲೆಕ್ಕಾಚಾರ

ಲಿಂಗಾಯತರು 55 ಸಾವಿರ

ಬೋವಿ 35-37 ಸಾವಿರ

ಎಕೆ 28 ಸಾವಿರ

ಕೊರಚ -ಕೊರಮ ಸಮುದಾಯ 800

ಉಪ್ಪಾರ 10-12 ಸಾವಿರ

ಕುರುಬ 7-8 ಸಾವಿರ

ಲಂಬಾಣಿ 18-20 ಸಾವಿರ

ಮುಸ್ಲಿಂ 16-18 ಸಾವಿರ

ಕುಂಚಿಟಿಗರು 6 ಸಾವಿರ

ಕ್ರಿಶ್ಚಿಯನ್ 1500

ಒಕ್ಕಲಿಗರು 5 ಸಾವಿರ

ವಾಲ್ಮಿಕಿ 15- 16 ಸಾವಿರ

ಒಟ್ಟು 2.29.000 ಮತದಾರರು ಇದ್ದಾರೆ 

ಇದನ್ನು ಸಹ ಓದಿ ಶಿವಮೊಗ್ಗ ಕೋಮುಗಲಭೆಯ ಹಿಂದಿರೋ ತಂಡದ ಹೆಡೆಮುರಿ ಕಟ್ಟಿದ ಎಸ್​ಪಿಮಿಥುನ್​ ಕುಮಾರ್! ಏನಿದು ಕೇಸ್​? JP ಸ್ಟೋರಿ

ಶಿಕಾರಿಪುರ ಮೀಸಲು ಕ್ಷೇತ್ರ ತೆರವು/ ಹೊಳೆಹೊನ್ನೂರು ಆಯ್ತು ಮೀಸಲು ಕ್ಷೇತ್ರ

2004 ರಲ್ಲಿ ಹೊಳೆಹೊನ್ನೂರು ಕ್ಷೇತ್ರವನ್ನ ತಗೆದು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಮಾಡಲಾಯಿತು. 1977 ರಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ  ಬಸವಣ್ಯಪ್ಪನವರಿಗೆ ಟಿಕೆಟ್ ಕೊಡಲಾಯಿತು. ಶಿಕಾರಿಪುರ 1972ರವರಗೆ ಮೀಸಲು ಕ್ಷೇತ್ರವಾಗಿತ್ತು. ಆಗ ಬಸವಣ್ಯಪ್ಪನವರು ಅಲ್ಲಿ ಗೆಲುವನ್ನ ಸಾಧಿಸಿದ್ದರು, 

1977 ರಲ್ಲಿ ಹೊಳೆಹೊನ್ನೂರು ಮೀಸಲು ಕ್ಷೇತ್ರವಾದ ಬಳಿಕ ಹೊಳೆಹೊನ್ನೂರು ಕ್ಷೇತ್ರದಿಂದ ಸ್ಪರ್ಧೆಗೆ ಅಣಿಯಾಗುತ್ತಾರೆ. ಆಗ  ಕಾಂಗ್ರೇಸ್ ಪಕ್ಷದಿಂದ ಜಿ.ಬಸವಣ್ಯಪ್ಪನವರು ಗೆಲವು ಸಾಧಿಸುತ್ತಾರೆ. ಬಳಿಕ ಬಸವಣ್ಯಪ್ಪನವರು ಜನತಾರಂಗ ಪಕ್ಷಕ್ಕೆ ಹೋಗುತ್ತಾರೆ. ಮುಂದಿನ ಚುನಾವಣೆಯಲ್ಲಿ ಅಂದರೆ 1983 ರಲ್ಲಿ ಜನತಾ ಪಾರ್ಟಿಯಿಂದ ಬಸವಣ್ಯಪ್ಪನವರು ಸ್ಪರ್ಧಿಸುತ್ತಾರೆ. ಆಗ ಎದುರಾಳಿಯಾಗಿ ಕಾಂಗ್ರೇಸ್ ಪಕ್ಷದಿಂದ ಚನ್ನನಾಯ್ಕ್ ಕಣಕ್ಕಿಳಿಯುತ್ತಾರೆ, ಆಗಲು ಕೂಡ ಬಸವಣ್ಯನಪ್ಪನವರು ಜನತಾ ಪಾರ್ಟಿಯಿಂದ ಗೆಲುವು ಸಾಧಿಸುತ್ತಾರೆ. 

ಈಶ್ವರಪ್ಪರಿಗೆ ಸಂಕಷ್ಟ? : ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪರಿಗೆ ಮತ್ತೆ ಸಂಕಷ್ಟ ಎದುರಾಗುತ್ತಾ? ಸಾಕ್ಷ್ಯ ಮಂಡಿಸಲು ಹೇಳಿದ ಕೋರ್ಟ್​?

ಎಸ್ ಆರ್ ಬೊಮ್ಮಾಯಿ ಸರ್ಕಾರವನ್ನು ಉರುಳಿಸಿದ ಬಸವಣ್ಯಪ್ಪ

ಬಳಿಕ 1985 ರಲ್ಲಿ ನಡೆದ  ಬೈ ಎಲೆಕ್ಷನಲ್ಲೂ ಕೂಡ ಕರಿಯಣ್ಣ ನವರ ವಿರುದ್ದ  ಬಸವಣ್ಯನಪ್ಪನವರು ಜನತಾ ರಂಗದಿಂದ ಸ್ಪರ್ದಿಸಿ ಗೆಲವು ಸಾಧಿಸುತ್ತಾರೆ. ಇದಾದ ನಂತರ 1988 ರಲ್ಲಿ ಎಸ್.ಆರ್ ಬೊಮ್ಮಾಯಿ ಸರ್ಕಾರವನ್ನ ಬಸವಣ್ಯಪ್ಪನವರು ತಮ್ಮ ಒಂದು ಮತದಿಂದ ಬೀಳಿಸುತ್ತಾರೆ..

ಇದಾದ ಬಳಿಕ ಕ್ಷೇತ್ರದಲ್ಲಿ ಲಿಂಗಾಯುತರು ಬಸವಣ್ಯಪ್ಪನವರ ವಿರುದ್ದ ಸಿಟ್ಟಾಗುತ್ತಾರೆ. 1989ರ ಮುಂದಿನ ಚುನಾವಣೆಯಲ್ಲಿ ವಿರೇಂದ್ರ ಪಾಟೀಲ್ ಮುಖ್ಯಮಂತ್ರಿಯೆಂದು ರಾಜ್ಯದಲ್ಲಿ ಘೋಷಣೆಯಾದ ಬಳಿಕ ಕಾಂಗ್ರೆಸ್ ನಿಂದ ಕರಿಯಣ್ಣನವರು ಗೆಲುವು ಸಾಧಿಸುತ್ತಾರೆ ಆಗ ಬಸವಣ್ಯಪ್ಪನವರು ಶಿಕಾರಿಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುತ್ತಾರೆ. ಇನ್ನು 1994 ರಲ್ಲಿ ಕರಿಯಣ್ಣ ಹಾಗೂ ಬಸವಣ್ಯಪ್ಪನವರು ಎದುರಾಳಿಯಾದಾಗ ಲಿಂಗಾಯತರು ಕರಿಯಣ್ಣನವರನ್ನು ಕೈ ಹಿಡಿಯದೆ ಬಸವಣ್ಯಪ್ಪನವರಿಗೆ ಮತ ಹಾಕಿ ಗೆಲುವು ಸಾಧಿಸುತ್ತಾರೆ.  

  • 1999 ರಲ್ಲಿ ಬಂಗಾರಪ್ಪನವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸುತ್ತೆ.. ಆಗ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ಒಟ್ಟಿಗೆ ನಡೆಯುತ್ತದೆ,ಬಸವಣ್ಯಪ್ಪನವರ ವಿರುದ್ದ  ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕರಿಯಣ್ಣನವರು  ಗೆಲುವು ಸಾಧಿಸುತ್ತಾರೆ. ಎಸ್ ಬಂಗಾರಪ್ಪ ಬಿಜೆಪಿ ತೊರೆದ ನಂತರ 2004 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ನ ಕರಿಯಣ್ಣನವರ ವಿರುದ್ದ  ಬಿಜೆಪಿಯಿಂದ ಸ್ಪರ್ಧಿಸಿ ಬಸವಣ್ಯಪ್ಪನವರು ಗೆಲುವು ಸಾಧಿಸುತ್ತಾರೆ.ಇ
  • ನ್ನು 2008 ಬಿಜೆಪಿ ಪಕ್ಷದ ಕೆ.ಜಿ. ಕುಮಾರಸ್ವಾಮಿ ಗೆಲುವು ಸಾಧಿಸುತ್ತಾರೆ. 2008 ರಲ್ಲಿ ಕೊನೆ ಚುನಾವಣೆಯೆಂದು ಘೋಷಣೆ ಮಾಡಿದ್ದ ಕರಿಯಣ್ಣ ಮತ್ತೆ 2013 ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಆಗ ಕೆಜೆಪಿ ಪಕ್ಷದಿಂದ ಬಸವಣ್ಯಪ್ಪ ಸ್ಪರ್ಧೆ ಮಾಡುತ್ತಾರೆ, ಆಗ ಜೆಡಿಎಸ್ ನ ಶಾರದಾಪೂರ್ಯ ನಾಯಕ್ ಗೆಲವು ಸಾಧಿಸುತ್ತಾರೆ. 
  • 2018 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕರಿಯಣ್ಣನವರ ಮಗ ಶ್ರೀನಿವಾಸ ಕರಿಯಣ್ಣ, ಜೆಡಿಎಸ್ ಪಕ್ಷದಿಂದ ಶಾರದ ಪೂರ್ಯಾನಾಯ್ಕ್ ಹಾಗೂ ಬಿಜೆಪಿಯಿಂದ ಕೆ.ಬಿ. ಅಶೋಕ ನಾಯ್ಕ್ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ, ಆಗ ಚುನಾವಣೆಯಲ್ಲಿ ಕೆ.ಬಿ. ಆಶೋಕ ನಾಯ್ಕ್ ಚುನಾವಣೆಯಲ್ಲಿ ಗೆಲ್ಲುತ್ತಾರೆ.

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

2013 ರಿಂದ ಕಾಂಗ್ರೇಸ್ ಆಕಾಂಕ್ಷಿ ಅಭ್ಯರ್ಥಿ ಎಸ್ ರವಿ ಕುಮಾರ್ ಹೆಸರು ಚಾಲ್ತಿ

2013 ರಲ್ಲಿ  ರಲ್ಲಿ ಕಾಂಗ್ರೇಸ್​ ಪಕ್ಷದಿಂದ ಗ್ರಾಮಾಂತರ ಕ್ಷೇತ್ರಕ್ಕೆ ಟಿಕೇಟ್ ನೀಡುವ ಸಂದರ್ಭದಲ್ಲಿ ಭೋವಿ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂಬ ಕೂಗು ಎದ್ದಿತ್ತು. ಭೋವಿ ಜನಾಂಗದಿಂದ ಎಸ್.ರವಿಕುಮಾರ್ ಗೆ ಟಿಕೇಟ್ ಎಂದು ಬಿಂಬಿಸಲಾಗಿತ್ತು., ಆದ್ರೆ ಆ ಸಮಯದಲ್ಲಿ ಕರಿಯಣ್ಣನವರಿಗೆ ಕಾಂಗ್ರೇಸ್ ಪಕ್ಷ ಟಿಕೆಟ್ ಘೋಷಣೆ ಮಾಡಿತ್ತು. ಇದರಿಂದ ಕೆರಳಿದ ಬೋವಿ ಜನಾಂಗ 2013 ಚುನಾವಣೆಯಲ್ಲಿ ಶಾರದಾ ಪೂರ್ಯಾನಾಯ್ಕ್  ಗೆ ಬೆಂಬಲ ನೀಡುತ್ತೆ.  ಇನ್ನು 2018 ರಲ್ಲೂ ಕೂಡ ಕಾಂಗ್ರೆಸ್ ಪಕ್ಷದಿಂದ ಎಸ್ ರವಿಕುಮಾರ್ ಗೆ ಟಿಕೆಟ್ ನೀಡಬೇಕೆಂದು ಭೋವಿ ಜನಾಂಗದವರು ಒತ್ತಾಯ ಮಾಡುತ್ತಾರೆ, ಆದ್ರೆ ಕರಿಯಣ್ಣನವರ ಮಗ ಶ್ರೀನಿವಾಸ್ ಕರಿಯಣ್ಣನವರಿಗೆ ಪಕ್ಷ ಟಿಕೆಟ್ ಘೋಷಣೆ ಮಾಡುತ್ತೆ. ರವಿ ಕುಮಾರ್ ರವರ ದೆಹಲಿಯ ಕಸರತ್ತುಗಳೆಲ್ಲಾ ಕಮರಿ ಹೋಗುತ್ತೆ. 2018 ರಲ್ಲೂ ಇದೇ ಸಮುದಾಯ ಬಿಜೆಪಿಯ ಅಶೋಕನಾಯ್ಕ್ ರವರಿಗೆ ಕೈ ಹಿಡಿಯುತ್ತೆ. 

Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com

ಇದೀಗ  ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಚಿತ್ರಣವೇ ಬೇರೆಯಾಗಲಿದೆ. ಭೋಮಿ ಸಮುದಾಯದವರು ನಮ್ಮದು ಕ್ಷೇತ್ರದಲ್ಲಿ 35 ಸಾವಿರ ಮತಗಳಿವೆ. ನಮ್ಮ ಸಮುದಾಯದ ಒಬ್ಬ ನಾಯಕನನ್ನ ಶಾಸಕನಾಗಿ ಮಾಡಬೇಕು ಎಂಬ ಒತ್ತಾಸೆ ಗಟ್ಟಿಗೊಳ್ಳುತ್ತಿದೆ. ಆ ಕಾರಣಕ್ಕಾಗಿ ಎಸ್. ರವಿಕುಮಾರ್  ಈ ಬಾರಿ ಟಿಕೆಟ್ ಗೆ ತೀವ್ರ ಪೈಪೋಟಿ ನಡೆಸಿದರೂ ಅಚ್ಚರಿಯಿಲ್ಲ. 1991 ರಿಂದಲೂ ಕಾಂಗ್ರೇಸ್ ಪಕ್ಷದ ವಿವಿಧ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿರುವ ಎನ್. ರವಿ ಕುಮಾರ್ ಕೂಡ ಕಾಂಗ್ರೇಸ್ ನಿಂದ ಟಿಕೇಟ್ ನೀಡಿದರೆ  ಗೆಲುವು ನಿಶ್ಚಳ ಎಂಬಂತಹ ವರದಿಗಳು ಕೈನಾಯಕರ ಟೀಂಗೆ ಈಗಾಗಲೇ ತಲುಪಿದೆ ಎನ್ನಲಾಗುತ್ತಿದೆ. ಒಟ್ಟಾರೇ ಶಿವಮೊಗ್ಗ ಗ್ರಾಮಾಂತರದ ಕ್ಷೇತ್ರದಲ್ಲಿನ ಮತದಾರರ ಮನದಾಳದ ಮೊದಲ ಸಪ್ಪಳ ಇದಾಗಿದ್ದು, ಈ ನಿಟ್ಟಿನಲ್ಲಿ ಮುಂದಿನ ಕಾಲದಲ್ಲಿ ಮತ್ತಷ್ಟು ಬದಲಾವಣೆಗಳು ಸಹ ಕಾಣಿಸಿಕೊಳ್ಳಬಹುದು. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com