Tip Top Basheer Interrogation / ಇಡಿ ವಿಚಾರಣೆಗೆ ಹಾಜರಾದ ಸಾಗರದ ಟಿಪ್ ಟಾಪ್ ಬಷೀರ್
Shivamogga news / ಸಾಗರದ ಉದ್ಯಮಿ ಹಾಗೂ ನಗರಸಭಾ ಸದಸ್ಯ ಟಿಪ್ ಟಾಪ್ ಬಷೀರ್ ಇವತ್ತು ಮಂಗಳೂರಿನಲ್ಲಿ ಜಾರಿ ನಿರ್ದೇಶನಾಲಯ (ED) ಕಚೇರಿಯಲ್ಲಿ ವಿಚಾರಣೆಗೆ ಹಾಜರಾದರು. ವಿಚಾರಣೆ ಬಳಿಕ ಮಾತನಾಡಿದ ಅವರು, ಇಕ್ಬಾಲ್ರವರ ವಿಚಾರಕ್ಕೆ ವಿಚಾರಣೆಗೆ ಕರೆದಿದ್ದರು, ಇದೀಗ ವಿಚಾರಣೆ ಮುಗಿದಿದೆ. ಮತ್ತೆ ಕರೆದಾಗ ಬರಬೇಕು ಎಂದು ಹೇಳಿದ್ದಾರೆ. ಅದಕ್ಕೆ ನಾನು ಸಹ ಸಮ್ಮತಿಸಿದ್ದೇನೆ ಎಂದರು.

ಮಂಗಳೂರಿನ ಮೇರಿಹಿಲ್ ಬಳಿಯ ಇಡಿ ಕಚೇರಿಯಲ್ಲಿ ಬಷೀರ್ ಅವರನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ಕಳೆದ ಶುಕ್ರವಾರ, ಬಷೀರ್ ಅವರ ಕೆಳದಿ ರಸ್ತೆಯಲ್ಲಿರುವ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. 7 ಅಧಿಕಾರಿಗಳ ತಂಡ ದಾಳಿ ನಡೆಸಿ, ಸತತ 18 ಗಂಟೆಗಳ ಕಾಲ ದಾಖಲೆಗಳ ಪರಿಶೀಲನೆ ನಡೆಸಿತ್ತು. ಆನಂತರ ವಿಚಾರಣೆಗೆ ಬರುವಂತೆ ಬಷೀರ್ ಅವರಿಗೆ ಸೂಚಿಸಿದ್ದರು. ಇದೀಗ ಸೂಚನೆಯಂತೆ ವಿಚಾರಣೆಗೆ ಹಾಜರಾಗಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ : malendutoday.com /

Mangaluru ED Raid, , Shivamogga Businessman , Sagar City Councillor