ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಸಿಂಹ ಸರ್ವೇಶ ಸಾವು!

Shivamogga | Feb 1, 2024 |  Thyavarekoppa Tiger and Lion Safari Lion Sarvesh dies  ಶಿವಮೊಗ್ಗದ ಲಯನ್​ ಸಫಾರಿ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮ ದಲ್ಲಿ ಸಿಂಹವೊಂದು ಸಾವನ್ನಪ್ಪಿದೆ. 13 ವರ್ಷದ ಸರ್ವೇಶ ಸಾವನ್ನಪ್ಪಿರುವ ಸಿಂಹ. ಇದು ಬನ್ನೇರುಘಟ್ಟದಿಂದ ಶಿವಮೊಗ್ಗಕ್ಕೆ ಶಿಫ್ಟ್ ಆಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಲಯನ್ ಸಫಾರಿಯಲ್ಲಿ ಪ್ರವಾಸಿಗರ ವೀಕ್ಷಣೆಗೆ ಕಾಣಿಸಿಕೊಂಡಿತ್ತು. ಈ ಸಿಂಹ ಸಾವನ್ನಪ್ಪಿರುವ ಬಗ್ಗೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. 

ಮಂಗಳವಾರವೂ ಸಹ ಆರಾಮಾಗಿದ್ದ ಸಿಂಹವೂ ನಿನ್ನೆ ವಾಂತಿ  ಮಾಡಿಕೊಂಡಿತ್ತು. ತಕ್ಷಣವೇ ಪಶುವೈದ್ಯಕೀಯ ಕಾಲೇಜಿನಲ್ಲಿ ಸಿಂಹಕ್ಕೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದೆ. 

ಸಿಂಹಗಳ ವಾಡಿಕೆ ವಯಸ್ಸಿನ ಗಡಿಯಲ್ಲಿದ್ದ ಸಿಂಹ ಹಿಮೋ ಫ್ರೋಟೋಜೋನ್ ಎಂಬ ಕಾಯಿಲೆಯಿಂದ ಬಳಲುತ್ತಿತ್ತು. ಈ ಸೋಂಕು ಕಾಣಿಸಿಕೊಳ್ಳುವ ಪ್ರಾಣಿಗಳನ್ನು ಉಳಿಸಿಕೊಳ್ಳುವುದು ಕಷ್ಟ ಎನ್ನುತ್ತಾರೆ ವನ್ಯಜೀವಿ ತಜ್ಞರು. ರಕ್ತಕಣಗಳನ್ನು ನಾಶಮಾಡುತ್ತಾ ಬರುವ ಸೋಂಕು ಅಂತಿಮವಾಗಿ ಪ್ರಾಣಿಯನ್ನು ಬಲಿತೆಗೆದುಕೊಳ್ಳುತ್ತದೆ. ಅನಾರೋಗ್ಯದ ಲಕ್ಷಣ ಕಾಣಿಸಿಕೊಳ್ಳುವುದಕ್ಕೂ ಮೊದಲೇ ಕಾಯಿಲೆ ಉಲ್ಬಣಗೊಂಡಿರುತ್ತದೆ. 

ಸರ್ವೇಶ ಸಿಂಹವೂ ಪ್ರವಾಸಿಗರ ಫೇವರಿಟ್ ಸಿಂಹವಾಗಿತ್ತು. ವಯಸ್ಸು ಹಾಗೂ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಸರ್ಕಾರಿ ನಿಯಮದಂತೆ ಪಂಚೆನಾಮೆ‌ ನಡೆಸಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ


Leave a Comment