throwing eggs at a vehicle : ಸಾಗರ ರಸ್ತೆಯಲ್ಲಿ ತಡರಾತ್ರಿ ವಾಹನಕ್ಕೆ ಮೊಟ್ಟೆ ಹೊಡೆದರಾ!? ವೈರಲ್​ ವಿಡಿಯೋದ Fact check

Malenadu Today

: ಪುನೀತ್​ ರಾಜಕುಮಾರ್​ ರವರ ಜಾಕಿ ಸಿನಿಮಾದಲ್ಲಿ ಒಂದು ದೃಶ್ಯವಿದೆ. ಹೋಗುತ್ತಿರುವ ವಾಹನಕ್ಕೆ ಮೊಟ್ಟೆ ಹೊಡೆದು, ಅದರಲ್ಲಿದ್ದವರನ್ನು ದರೋಡೆ ಮಾಡುವ ಮಾಡುವ ವ್ಯಕ್ತಿಯೊಬ್ಬ , ಆ ಕೃತ್ಯವನ್ನು ಕಲಿಸಿದ್ದ ವ್ಯಕ್ತಿಯ ಬಗ್ಗೆ ಹೇಳುವ ದೃಶ್ಯವದು. ಈ ದೃಶ್ಯವನ್ನು ನೋಡಿದಾಗ ಜನರು ರಿಯಲ್ ಕ್ರೈಂ ಘಟನೆಗಳಲ್ಲಿ ಹೀಗೂ ನಡೆಯುತ್ತಾ ಎಂದು ಯೋಚಿಸಿದ್ದರು. ನಿರ್ದೇಶಕ ದುನಿಯಾ ಸೂರಿ, ರಿಯಲ್​ ಘಟನೆಯನ್ನ ಆಧರಿಸಿ, ಸಿನಿಮಾ ಕಲ್ಪನೆ ರೂಪಕೊಟ್ಟು ಜಾಕಿ ಸಿನಿಮಾದಲ್ಲಿ ತೋರಿಸಿದ್ದರು. 

throwing eggs at a vehicle
throwing eggs at a vehicle : ವಿಡಿಯೋದಲ್ಲಿ ಕಾಣುತ್ತಿರುವಂತೆ, ಮೊಟ್ಟೆ ಎಸೆಯುವ ಬೈಕ್ ಸವಾರ

throwing eggs at a vehicle  /ಶಿವಮೊಗ್ಗದಲ್ಲಿ ಮೊಟ್ಟೆ ವಿಡಿಯೋ ವೈರಲ್​ 

 

- Advertisement -

ಈಗ್ಯಾಕೆ ಈ  ಮಾತು ಎಂದರೆ, ಶಿವಮೊಗ್ಗದಲ್ಲಿ ಇದೇ ರೀತಿಯಲ್ಲಿ ರಸ್ತೆಯಲ್ಲಿ ಸಾಗುತ್ತಿರುವ ವಾಹನಕ್ಕೆ ಮೊಟ್ಟೆ ಹೊಡೆಯಲಾಗಿದೆ ಎಂಬಂತಹ ವಿಡಿಯೋವೊಂದು ಹರಿದಾಡುತ್ತಿದೆ. ಅಷ್ಟೆ ಅಲ್ಲದೆ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಆ ವಿಡಿಯೋದಲ್ಲಿ ಏನಿದೆ? ಅದರ ಹಿನ್ನೆಲೆಯೇನು? ಎಲ್ಲಿಯದ್ದು? ಎಂಬಿತ್ಯಾದಿ ಮಾಹಿತಿಯನ್ನು ಕಲೆಹಾಕುವ ಪ್ರಯತ್ನ ಮಲೆನಾಡು ಟುಡೆ ನಡೆಸಿದೆ.. 

throwing eggs at a vehicle
throwing eggs at a vehicle : ವಿಡಿಯೋದಲ್ಲಿ ಬೈಕ್ ಸವಾರ ವಾಹನವನ್ನು ಗುರಿಯಾಗಿಸಿ ಎಸೆದೆ ಮೊಟ್ಟೆ

48 ಸೆಕೆಂಡ್​ಗಳ ವಿಡಿಯೋದಲ್ಲಿ ಏನಿದೆ

 

ಸದ್ಯ ಶಿವಮೊಗ್ಗದಲ್ಲಿ ನಲವತ್ತೆಂಟು ಸೆಕೆಂಡ್​ಗಳ ವಿಡಿಯೋವೊಂದು ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ವಾಹನವೊಂದು ತಡರಾತ್ರಿ ಹೋಗುತ್ತಿದ್ದಾಗ, ಆ ವಾಹನದ ಎದುರಿಗೆ ಹೋಗುತ್ತಿದ್ದ ಬೈಕ್​ನಲ್ಲಿದ್ದ ಸವಾರ, ಇವರ ವಾಹನ ಗ್ಲಾಸ್​ನ್ನು ಗುರಿಮಾಡಿ ಮೊಟ್ಟೆ ಹೊಡೆಯುತ್ತಾನೆ. ಮೊಟ್ಟೆ ಬಿದ್ದ ತಕ್ಷಣ, ಮುಂದಿನ ದಾರಿ ಕಾಣದೇ ವಾಹನ ಚಾಲಕ ಗಲಿಬಿಲಿಯಾಗುತ್ತಾನಾದರೂ, ವಾಹನ ನಿಲ್ಲಿಸದೇ ಮುಂದಕ್ಕೆ ಹೋಗುತ್ತಾನೆ, ಅದೇ ವೇಳೆ ಅಲ್ಲೊಂದು ಒಮಿನಿ ನಿಂತಿರುವುದು ಕಾಣುತ್ತದೆ, ವಾಹನದಲ್ಲಿದ್ದವರು ಬನ್ನಿ ಬನ್ನಿ ಎಂದು ಕರೆಯುತ್ತಾರೆ. ಅಲ್ಲಿಗೆ ವಿಡಿಯೋ ಮುಕ್ತಾಯವಾಗುತ್ತದೆ. 

ಸಾಗರ ತಾಲ್ಲೂಕುನಲ್ಲಿ ನಡೆದಿದ್ದಾ?

 

ಹಬ್ಬುತ್ತಿರುವ ಸುದ್ದಿಗಳ ಪ್ರಕಾರ, ಈ ವಿಡಿಯೋ ಸಾಗರ ರಸ್ತೆಯಲ್ಲಿ ನಡೆದ ಘಟನೆಯದ್ದು ಎಂದು ಹೇಳಲಾಗುತ್ತಿದೆ. ಆದರೆ ಈ ಮಾಹಿತಿಗೆ ಅಧಿಕೃತ ಸ್ಪಷ್ಟತೆಗಳಿಲ್ಲ. ಈ ಬಗ್ಗೆ ಮಲೆನಾಡು ಟುಡೆ ಎನ್​ಕ್ವೈರಿ ಮಾಡಿದಾಗ ಕೆಲವು ವಿಚಾರಗಳು ತಿಳಿದುಬಂದಿದೆ. ಮಲೆನಾಡು ಟುಡೆಯು ವಿಡಿಯೋವನ್ನು  ಆದರಿಸಿ ಸಾಗರ ವಿಭಾಗದ ಡಿವೈಎಸ್​ಪಿ ಗೋಪಾಲಕೃಷ್ಣ ನಾಯಕ್​ರವರನ್ನ ಸಂಪರ್ಕಿಸಿತ್ತು. 

throwing eggs at a vehicle
throwing eggs at a vehicle ವಿಡಿಯೊದಲ್ಲಿ ಬೈಕ್ ಸವಾರ ಮೊಟ್ಟೆ ಎಸೆಯುವ ಕ್ಷಣ

ಸಾಗರ ಪೊಲೀಸ್ ಹೇಳುವುದೇನು?

 

ನಮ್ಮೊಂದಿಗೆ ವಿಡಿಯೋ ವಿಚಾರದ ಕುರಿತಾಗಿ ಮಾತನಾಡಿದ ಅವರು, ರಸ್ತೆಯಲ್ಲಿ ಹೋಗುತ್ತಿದ್ದ ವಾಹನದ ಮೇಲೆ ಮೊಟ್ಟೆ ಹೊಡೆದ ವಿಚಾರವಾಗಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಮಾಹಿತಿ ಇದೆ. ಆದರೆ ಸದ್ಯ ವೈರಲ್ ಆಗುತ್ತಿರುವ ವಿಡಿಯೋ ಬಗ್ಗೆ ಇನ್ನೂ ವೆರಿಫೈ ಆಗಿಲ್ಲ. ವಿಡಿಯೋದ ಬಗ್ಗೆಯು ಕೆಲವೊಂದು ಅನುಮಾನಗಳಿವೆ ಎಂದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಈ ರೀತಿಯಾದ ದೂರು ಬಂದ ಹಿನ್ನೆಲೆಯಲ್ಲಿ ಆನಂದಪುರ ಪೊಲೀಸ್ ಠಾಣೆಯ ಪೊಲೀಸರು ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದರು. ಆ ವೇಳೆ ಅಲ್ಲಿ ಯಾವುದೇ ವಿಚಾರಗಳು ಪತ್ತೆಯಾಗಿರಲಿಲ್ಲ. ಇದೀಗ ವಿಡಿಯೋ ಹರಿದಾಡುತ್ತಿರುವ ವಿಚಾರದಲ್ಲಿ ಇನ್ನಷ್ಟು ಸ್ಪಷ್ಟತೆ ಪಡೆದುಕೊಳ್ಳಲಾಗುತ್ತಿದೆ ಎಂದರು. 

throwing eggs at a vehicle
throwing eggs at a vehicle : ವಿಡಿಯೋದಲ್ಲಿ ಕಾಣುತ್ತಿರುವ ರಸ್ತೆಯ ದೃಶ್ಯ

ಇನ್​ಸ್ಟಾಗ್ರಾಮ್​ನಲ್ಲಿ ವೈರಲ್​ ಆಗ್ತಿದೆ ಇನ್ನೊಂದು ವಿಡಿಯೋ

 

ಇನ್ನೊಂದೆಡೆ ಇದೇ ರೀತಿಯಲ್ಲಿ ವಾಹನಗಳಿಗೆ ಮೊಟ್ಟೆ ಹೊಡೆಯುವ ವಿಡಿಯೋವೊಂದು ಇನ್​ಸ್ಟಾಗ್ರಾಂನಲ್ಲಿಯು ವೈರಲ್ ಆಗುತ್ತಿದೆ. ಆದರೆ ಈ ವಿಡಿಯೋ ಎಲ್ಲಿಯದು ಎಂಬ ಸ್ಪಷ್ಟನೆ ಇಲ್ಲ. ವಿಡಿಯೋ ಅಪ್​ಲೋಡ್ ಆದ ಖಾತೆಯಲ್ಲಿಯು ಈ ಬಗ್ಗೆ ಮಾಹಿತಿ ನೀಡಿಲ್ಲ. ಇತ್ತ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ರಸ್ತೆಯಲ್ಲಿ ನಡೆದಿದ್ದು ಎನ್ನಲಾದ ವಿಡಿಯೋ, ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಡಿಯೋ ನೈಜವಾಗಿದ್ದೋ ಅಥವಾ ಯಾವುದೋ ಒಂದು ಉದ್ದೇಶಕ್ಕಾಗಿ ರೆಕಾರ್ಡ್ ಮಾಡಲಾಗಿದ್ದೋ ಎಂಬುದು ಗೊತ್ತಾಗಬೇಕಿದೆ. 

 

ಮೊಟ್ಟೆ ಎಸೆಯುವುದು ಅಪರಾಧ!

throwing eggs at a vehicle
throwing eggs at a vehicle : ವಾಹನದ ಗ್ಲಾಸ್ ಮೇಲೆ ಬಿದ್ದಿರುವ ಮೊಟ್ಟೆ

ಈ ಬಗ್ಗೆ ಪೊಲೀಸ್ ಇಲಾಖೆಯು ಗಮನ ಹರಿಸಿದ್ದು, ವಿಡಿಯೋದ ಮೂಲ ಮತ್ತದರ ನೈಜತೆಯ ಬಗ್ಗೆಯು ಪರಿಶೀಲನೆ ನಡೆಸ್ತಿದ್ದಾರೆ. ಈ ನಿಟ್ಟಿನಲ್ಲಿ ಯಾವುದೇ ಆತಂಕದ ಅಗತ್ಯವಿಲ್ಲ ಎಂದಿರುವ ಪೊಲೀಸರು ಯಾವುದೇ ತುರ್ತು ಸನ್ನಿವೇಶ ಎದುರಾದರೆ 112ಗೆ ಕರೆ ಮಾಡಿ, ತಕ್ಷಣವೆ ನಿಮ್ಮ ನೆರವಿಗೆ ಪೊಲೀಸರು ಬರುತ್ತಾರೆ ಎಂದು ಭರವಸೆ ನೀಡಿದ್ದಾರೆ.

 

ಅಂದಹಾಗೆ, ವಾಹನದ ಮೇಲೆ ಮೊಟ್ಟೆಗಳನ್ನು ಎಸೆಯುವುದನ್ನು (throwing eggs at a vehicle ) ಕ್ರಿಮಿನಲ್ ಕೃತ್ಯವೆಂದೇ ಪರಿಗಣಿಸಲಾಗುತ್ತದೆ. ಈ ರೀತಿಯಲ್ಲಿ ಮಾಡುವುದು ಯಾವುದೋ ಅಪರಾಧ ಕೃತ್ಯದ ಅಥವಾ ಆಸ್ತಿನಾಶದ ಉದ್ದೇಶವಾಗಿ ಎಂದು ಪರಿಣಗಮಿಸುವ ಸಾಧ್ಯತೆ ಇದೆ. ಇದರಿಂದಾಗಿ ಆಗುವ ಹಾನಿಯ ತೀವ್ರತೆ ಅವಲಂಬಿಸಿ ಅಪರಾಧಕ್ಕೆ ತಕ್ಕ ಶಿಕ್ಷೆಯಾಗುತ್ತದೆ. 

throwing eggs at a vehicle
throwing eggs at a vehicle : ವಿಡಿಯೋದಲ್ಲಿ ಕಾಣುತ್ತಿರುವ ಇನ್ನೊಂದು ವಾಹನ

 

Share This Article