MALENADUTODAY.COM | SHIVAMOGGA | #KANNADANEWSWEB
ದಿನಾಂಕಃ- 27-02-2023 ರಂದು ಸೋಮವಾರ ಶಿವಮೊಗ್ಗ ಜಿಲ್ಲೆಯ ನೂತನ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭಕ್ಕೆ ಮಾನ್ಯ ಪ್ರಧಾನ ಮಂತ್ರಿಗಳು ಭಾರತ ಸರ್ಕಾರ ರವರು ಆಗಮಿಸುತ್ತಿದ್ಧಾರೆ.
ಈ ಕಾರ್ಯಕ್ರದಲ್ಲಿ ಭಾಗವಹಿಸುವ ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಮತ್ತು ಪರ್ಸ್ ಗಳನ್ನು ತರಲು ಮಾತ್ರ ಅವಕಾಶವಿದೆ. ಇವುಗಳನ್ನು ಹೊರತು ಪಡಿಸಿ ನೀರಿನ ಬಾಟಲಿ, ಬ್ಯಾಗ್, ಪೇಪರ್(ಚೀಟಿ), ಪೆನ್, ಕಪ್ಪು ಬಣ್ಣದ ಬಟ್ಟೆ/ಶರ್ಟ್/ಕರವಸ್ತ್ರ ಗಳನ್ನು ಹಾಗೂ ಇತರೆ ವಸ್ತುಗಳನ್ನು ತರುವಂತಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಮತ್ತು ಕಾರ್ಯಕ್ರಮದ ದಿನದಂದು ಸುಗಮ ಸಂಚಾರ ಹಾಗೂ ಸಂಚಾರ ನಿಯಂತ್ರಣದ ಹಿನ್ನೆಲೆಯಲ್ಲಿ ಬದಲೀ ಮಾರ್ಗದ ವ್ಯವಸ್ಥೆ ಮಾಡಲಿದ್ದು, ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಮತ್ತು ವಾಹನಗಳನ್ನು ಹೊರತು ಪಡಿಸಿ, ಕೆಎಸ್ಆರ್.ಟಿಸಿ /ಖಾಸಗಿ ಬಸ್ ಗಳು ಮತ್ತು ಇತರೆ ಯಾವುದೇ ವಾಹನಗಳಲ್ಲಿ ಪ್ರಯಾಣ ಬೆಳಸುವ ಇತರೆ ಪ್ರಯಾಣಿಕರುಗಳು ಕಾರ್ಯಕ್ರಮ ಸ್ಥಳವಾದ ಶಿವಮೊಗ್ಗ ವಿಮಾನ ನಿಲ್ದಾಣ ರಸ್ತೆಯನ್ನು ಹೊರತು ಪಡಿಸಿ, ಬದಲಿ ಮಾರ್ಗದಲ್ಲಿಯೇ ಪ್ರಯಾಣಿಸುವುದು.