ಶಿವಮೊಗ್ಗ ಸಿಟಿಗೆ ಹೊಸ ಕಳೆ ನೀಡ್ತಿದೆ ಈ ರೈಲ್ವೇ ಮೇಲ್ಸೇತುವೆ! ಅಂತಿಮ ಹಂತ ತಲುಪಿದ ಕಾಮಗಾರಿ! ಹೇಗಿದೆ ನೋಡಿ!

KARNATAKA NEWS/ ONLINE / Malenadu today/ Jun 21, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕಡದಕಟ್ಟೆ ಬಳಿಯ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 34 ಹಾಗೂ ಶಿವಮೊಗ್ಗ ಸವಳಂಗ ರಸ್ತೆಯ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 49 ಹಾಗೂ ಕಾಶೀಪುರದ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 54 ಬಳಿ ಹಾಗೂ ಶಿವಮೊಗ್ಗ ವಿದ್ಯಾನಗರದ ಬಳಿ ಎಲ್.ಸಿ. 46ಕ್ಕೆ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳು ಇನ್ನೇನು ಅಂತಿಮ ಹಂತಕ್ಕೆ ಬಂದಿದೆ. ಇದೇ ಡಿಸೆಂಬರ್​ನೊಳಗೆ ಅಂತಿಮವಾಗಿ ಎಲ್ಲಾ ಕಾಮಗಾರಿಗಳು ಉದ್ಘಾಟನೆ ಕಾಣಲಿವೆ. 

ಈ ಮಧ್ಯೆ ಅಂದಾಜು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ  ಕಾಶಿಪುರ ರೈಲ್ವೆ ಕ್ರಾಸಿಂಗ್‌ ಬಳಿ ಕಾಮಗಾರಿ ಕೊನೆ ಹಂತಕ್ಕೆ ಬಂದಿದೆ. ಮುಖ್ಯವಾಗಿ ರೈಲ್ವೆ ಮೇಲ್ಸೇತುವೆ ಗೆ  680 ಟನ್​ ತೂಕದ ಸ್ಟೀಲ್​ ಬೌಸ್ಟ್ರಿಂಗ್ ಗ್ರೀಡ್​(​ steel bowstring girder) ನ್ನ ಅಳವಡಿಸಲಾಗಿದೆ. ಇದು ಆಕರ್ಷಕವಾಗಿ ಕಾಣುತ್ತಿದೆಯಷ್ಟೆ ಕಾಮಗಾರಿ ಪೂರ್ಣವಾಗಿದ್ದರ ಸುಳಿವು ನೀಡುತ್ತಿದೆ. 

Malenadu Today

ಶಿವಮೊಗ್ಗದ ಕಾಶಿಪುರ ರೈಲ್ವೆ ಗೇಟ್ ನ ಲೆವೆಲ್ ಕ್ರಾಸಿಂಗ್ ನಂ.52ರಲ್ಲಿ ಅಳವಡಿಸಲಾಗಿರುವ  ಸ್ಟೀಲ್​ ಬೌಸ್ಟ್ರಿಂಗ್ ಗ್ರೀಡ್​  680 ಟನ್ ತೂಕವಿದ್ದು 60 ಮೀಟರ್​ ಉದ್ದ ಹೊಂದಿದೆ. ತೀರ್ಥಹಳ್ಳಿಯಲ್ಲಿರುವ ತೂಗುಸೇತುವೆಯಂತೆ ಕಾಣುತ್ತಿರುವ ಮಾದರಿ ಎಲ್ಲೆಡೆ ಗಮನಸೆಳೆಯುತ್ತಿದೆ. ಇನ್ನೂ 60.76 ಕೋಟಿ  ವೆಚ್ಚದಲ್ಲಿ ಸವಳಂಗ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣ,  49ಕೋಟಿ  ವೆಚ್ಚದಲ್ಲಿ ಭದ್ರಾವತಿಯಲ್ಲಿಯು ರೈಲ್ವೇ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. 

Malenadu Today


ಮಕ್ಕಳ ಕೈಗೆ ಬೈಕ್ ಕೊಟ್ಟರೆ ತಂದೆ ತಾಯಿ ಕೋರ್ಟ್​ನಲ್ಲಿ ನಿಲ್ಲಬೇಕಾಗುತ್ತೆ! ಮಗನ ತಪ್ಪಿಗೆ ಅಪ್ಪನಿಗೆ ಬಿತ್ತು 20 ಸಾವಿರ ದಂಡ 

ಶಿವಮೊಗ್ಗ/ ಮಕ್ಕಳ ಕೈಲಿ ಬೈಕ್ ಕೊಡಬೇಡಿ ಅಂದರೂ ಕಾನೂನು ನಿರ್ಲಕ್ಷ್ಯ ಮಾಡಿದ್ರೆ ಏನಾಗುತ್ತದೆ ಎಂದರೇ ತಂದೆ ತಾಯಿಗಳು ದಂಡ ಕಟ್ಟಬೇಕಾದ ಪ್ರಸಂಗ ಎದುರಿಸಬೇಕಾಗುತ್ತದೆ. 

ಇದಕ್ಕೆ ಸಾಕ್ಷಿಎಂಬಂತೆ ತೀರ್ಥಹಳ್ಳಿಯಲ್ಲಿ ಪ್ರಕರಣವೊಂದು ನಡೆದಿದೆ.  ದಿನಾಂಕಃ-19-06-2023  ರಂದು ತೀರ್ಥಹಳ್ಳಿ ಉಪ ವಿಭಾಗದ ಡಿವೈಎಸ್​ಪಿ   ಗಜಾನನ ವಾಮನ ಸುತರ ವಾಹನ ತಪಾಸಣೆ ನಡೆಸ್ತಿದ್ದರು. ಈ ವೇಳೆ  ಕುಶಾವತಿಯ ಬಳಿ 17 ವರ್ಷದ ಅಪ್ರಾಪ್ತ ವಯ್ಯಸ್ಸಿನ ಬಾಲಕನೊಬ್ಬ ಬೈಕ್​ ಚಲಾಯಿಸ್ತಿರುವುದು ಕಂಡುಬಂದಿದೆ.   ಕೆಎ-14 ಇವೈ-5452 ನೋಂದಣಿ ಸಂಖ್ಯೆಯ ದ್ವಿ ಚಕ್ರ ವಾಹನವನ್ನು ಆತ ಚಲಾಯಿಸುತ್ತಿದದ್ದ. ಕೊನೆಪಕ್ಷ ಹೆಲ್ಮೆಟ್ ಸಹ ಹಾಕಿರಲಿಲ್ಲ. 

ಹೀಗಾಗಿ ಅಪ್ರಾಪ್ತ ವಯ್ಯಸ್ಸಿನ ಬಾಲಕನಿಗೆ ದ್ವಿ ಚಕ್ರ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ  ಪ್ರಮೋದ್ ಎಸ್. ಕೆ. 35 ವರ್ಷ, ಕಳ್ಳಿಗದ್ದೆ ಗ್ರಾಮ ತೀರ್ಥಹಳ್ಳಿ ಈತನ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿದ್ದರು. ಆನಂತರ ಈ ಸಂಬಂಧ  ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಲಾಗಿತ್ತು. ಇದೀಗ , ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ದ್ವಿಚಕ್ರ ವಾಹನದ ಮಾಲೀಕರಾದ ಪ್ರಮೋದ್​ರಿಗೆ   ರೂ 20,000/- ದಂಡ ವಿಧಿಸಿದೆ. 


Leave a Comment