thirthahallli news : ಬೆಜ್ಜವಳ್ಳಿಯಲ್ಲಿ ಬೈಕ್​ ಹಾಗೂ ಕಾರ್​ ನಡುವೆ ಭೀಕರ ಅಪಘಾತ | ಸವಾರನ ಸ್ಥಿತಿ ಗಂಭೀರ

prathapa thirthahalli
Prathapa thirthahalli - content producer

thirthahallli news : ಬೆಜ್ಜವಳ್ಳಿಯಲ್ಲಿ ಬೈಕ್​ ಹಾಗೂ ಕಾರ್​ ನಡುವೆ ಭೀಕರ ಅಪಘಾತ | ಸವಾರರನ ಸ್ಥಿತಿ ಗಂಭೀರ

 ತೀರ್ಥಹಳ್ಳಿ : ಬೈಕ್​ ಮತ್ತು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಬೈಕ್​ ಚಾಲಕನ ಸ್ಥತಿ ಗಂಭೀರವಾಗಿರುವ ಘಟನೆ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ತೀರ್ಥಹಳ್ಳಿಯಿಂದ ಶಿವಮೊಗ್ಗದ ಕಡೆಗೆ ಹೋಗುತ್ತಿದ್ದ ಕಾರು ಬೆಜ್ಜವಳ್ಳಿಯಿಂದ ಸಮಕಾನಿ ಕಡೆಗೆ ಹೋಗುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನ ಮುಂಬಾಗ ನುಜ್ಜುಗುಜ್ಜಾಗಿದ್ದು,​ ಸವಾರನ ತಲೆಗೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಆತನನ್ನು ತೀರ್ಥಹಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆ ಸಂಬಂಧ ಮಾಳೂರು ಪೊಲೀಸ್​ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article