thirthahalli news : ಸತ್ತಂತೆ ನಟಿಸಿ ಚಿರತೆಯಿಂದ ನಾಯಿ ಗ್ರೇಟ್​ ಎಸ್ಕೇಪ್​

prathapa thirthahalli
Prathapa thirthahalli - content producer

thirthahalli news:  ಸತ್ತಂತೆ ನಟಿಸಿ ಚಿರತೆಯಿಂದ ನಾಯಿ ಗ್ರೇಟ್​ ಎಸ್ಕೇಪ್​

thirthahalli news : ನಾಯಿಯೊಂದು ಸತ್ತಂತೆ ನಟೆಸಿ ಚಿರತೆ ದಾಳಿಯಿಂದ ತಪ್ಪಿಸಿಕೊಂಡಿರುವ ಘಟನೆ  ತೀರ್ಥಹಳ್ಳಿ ತಾಲೂಕಿನ ಅರಳಾಪುರ ಗ್ರಾಮದಲ್ಲಿ ನಡೆದಿದೆ.

ಅರಳಾಪುರ ಗ್ರಾಮದ ನಿವಾಸಿ ಅಂತೋಣಿ ಎಂಬುವವರ ಮನೆ ಮುಂದೆ ಮೇ 21 ರಂದು ರಾತ್ರಿ ನಾಯಿಯನ್ನು ಕಟ್ಟಿಹಾಕಲಾಗಿತ್ತು. ಈ ವೇಳೆ ಚಿರತೆಯೊಂದು ಬಂದು ನಾಯಿಯ ಮೇಲೆ ದಾಳಿ ಮಾಡಿ ಎಳೆದುಕೊಂಡು ಹೋಗಲು ಯತ್ನಿಸಿದೆ.. ಆಗ ನಾಯಿ ಸತ್ತಂತೆ ನಟಿಸಿದ್ದು, ನಾಯಿ ಸತ್ತಿದೆ ಎಂದು ತಿಳಿದ ಚಿರತೆ ಅದರ ಕುತ್ತಿಗೆಯಿಂದ ಬಾಯನ್ನು ತೆಗೆದಿದೆ. ಆಗ ನಾಯಿ ಜೋರಾಗಿ ಕೂಗಲು ಆರಂಭಿಸಿದ್ದು, ನಾಯಿ ಬೊಗಳುವ ಶಬ್ದ ಕೇಳಿ ಮನೆಯವರೆಲ್ಲಾ ಹೊರ ಬಂದಿದ್ದಾರೆ. ಆಗ ಚಿರತೆ ಅಲ್ಲಿಂದ ಓಡಿ ಹೋಗಿದೆ. ನಾಯಿ ಮೇಲೆ ಚಿರತೆ ದಾಳಿ ಮಾಡಿದ ಎಲ್ಲಾ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದೃಷ್ಟವೊಂದಿದ್ದರೆ ಎಂತಹ ಪರಿಸ್ಥಿತಿಯಲ್ಲೂ ಬದುಕುಳಿಯಬಹುದು ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ.

Share This Article