ತೀರ್ಥಹಳ್ಳಿ: ಮನೆ ಹಿಂಬದಿ ಬಾಗಿಲು ಒಡೆದು ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಹಾಗೂ ನಗದು ಕಳ್ಳತನ

Thirthahalli Burglary :ಕೋಣಂದೂರಿನ ಸೋಣಗನಕೇರಿಯ ಮನೆಯೊಂದರಲ್ಲಿ ಮಧ್ಯರಾತ್ರಿ ಕಳ್ಳರು ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ ಹಾಗೂ ಹಣವನ್ನು ದೋಚಿದ್ದಾರೆ. ಈ ಹಿನ್ನೆಲೆ  ತೀರ್ಥಹಳ್ಳಿ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ.

ಶಿವಮೊಗ್ಗ: ಕಾಂಗ್ರೆಸ್‌ ಪ್ರತಿಭಟನೆ ವೇಳೆ ಕಳ್ಳರ ಕೈಚಳಕ; ಮಹಿಳಾ ಎಎಸ್‌ಐ  ಚಿನ್ನದ ಸರ ಕಳವು

ಡಿಸೆಂಬರ್ 16ರ ಮಧ್ಯರಾತ್ರಿ ಈ ಘಟನೆ ಸಂಭವಿಸಿದ್ದು, ಕಳ್ಳರು ಮನೆಯ ಹಿಂಬದಿಯ ಬಾಗಿಲನ್ನು ಮುರಿದು ಒಳನುಗ್ಗಿದ್ದಾರೆ. ಮನೆ ಪ್ರವೇಶಿಸಿದ ಕಳ್ಳರು ರೂಮ್‌ನಲ್ಲಿದ್ದ ಗಾಡ್ರೇಜ್ ಬೀರುವನ್ನು ಸುಲಭವಾಗಿ ತೆರೆದಿದ್ದಾರೆ. ಬೀರುವಿಗೆ ಬೀಗ ಹಾಕಿರದ ಕಾರಣ ಅಲ್ಲಿಟ್ಟಿದ್ದ ಸುಮಾರು 40,000 ರೂಪಾಯಿ ನಗದು ಹಣವನ್ನು ಮೊದಲು ದೋಚಿದ್ದಾರೆ. ತದನಂತರ ಇನ್ನೊಂದು ಬೀರುವಿನಲ್ಲಿದ್ದ ಸುಮಾರು 4.50 ಲಕ್ಷ ರೂಪಾಯಿ ಮೌಲ್ಯದ 45 ಗ್ರಾಂ ತೂಕದ ಮಾಂಗಲ್ಯ ಸರ, ಒಂದು ಲಕ್ಷ ಮೌಲ್ಯದ 10 ಗ್ರಾಂ ಚಿನ್ನದ ಚೈನ್, 50 ಸಾವಿರ ಮೌಲ್ಯದ ಉಂಗುರ ಹಾಗೂ 50 ಸಾವಿರ ರೂಪಾಯಿ ಬೆಲೆಯ ಒಂದು ಜೊತೆ ಕಿವಿ ಮಾಟಲ್‌ಗಳನ್ನು ಒಳಗೊಂಡಂತೆ ಒಟ್ಟು 6,90,000 ರೂಪಾಯಿ ಮೌಲ್ಯದ ಸೊತ್ತನ್ನು ಹೊತ್ತೊಯ್ದಿದ್ದಾರೆ.ಬೆಳಿಗ್ಗೆ ಎದ್ದಾಗ ಮನೆಯ ಹಿಂಬದಿ ಬಾಗಿಲು ತೆರೆದಿರುವುದು ಮತ್ತು ಬೀರುಗಳು ಖಾಲಿಯಾಗಿರುವುದನ್ನು ಕಂಡು ಮನೆಯವರು ಶಾಕ್​ ಆಗಿದ್ದಾರೆ. ಕೂಡಲೇ ಈ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. 

Thirthahalli Burglary Gold Worth 6.9 Lakh Stolen