ತರೀಕೆರೆಯಿಂದ ಮದುವೆ ಕಾರ್ಯಕ್ರಮ ಶಿವಮೊಗ್ಗಕ್ಕೆ ಬಂದಿದ್ದ ಕುಟುಂಬಕ್ಕೆ ಕಾದಿತ್ತು ಶಾಕ್ | ತಲೆಬಿಸಿಯ ನಡುವೆ ಖಾಲಿಯಾಗಿತ್ತು ಅಕೌಂಟ್!?

Thieves have stolen the gold ornaments of a family who came to Shimoga from Chikmagalur district. ಚಿಕ್ಕಮಗಳೂರು ಜಿಲ್ಲೆಯಿಂದ ಶಿವಮೊಗ್ಗಕ್ಕೆ ಬಂದ ಕುಟುಂಬವೊಂದರ ಚಿನ್ನಾಭರಣಗಳನ್ನು ಕಳ್ಳರು ಕದ್ದೊಯ್ದಿದ್ಧಾರೆ

ತರೀಕೆರೆಯಿಂದ ಮದುವೆ ಕಾರ್ಯಕ್ರಮ ಶಿವಮೊಗ್ಗಕ್ಕೆ ಬಂದಿದ್ದ ಕುಟುಂಬಕ್ಕೆ ಕಾದಿತ್ತು ಶಾಕ್ |  ತಲೆಬಿಸಿಯ ನಡುವೆ ಖಾಲಿಯಾಗಿತ್ತು ಅಕೌಂಟ್!?

KARNATAKA NEWS/ ONLINE / Malenadu today/ Oct 18, 2023 SHIVAMOGGA NEWS’



ಶಿವಮೊಗ್ಗ ನಗರ ಶುಭಮಂಗಳ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಚಿಕ್ಕಮಗಳೂರು ಜಿಲ್ಲೆಯ ತರೀಕರೆ ತಾಲ್ಲೂಕಿನ ನಿವಾಸಿಗಳ ಚಿನ್ನಾಭರಣ ಹಾಗೂ ನಗದು ಕಳ್ಳತನವಾದ ಬಗ್ಗೆ ಶಿವಮೊಗ್ಗ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ಎಫ್ಐಆರ್ ದಾಖಲಾಗಿದೆ. 



16 ನೇ ತಾರೀಖು ಶುಭಮಂಗಳ ಕಲ್ಯಾಣ ಮಂಟಪದಲ್ಲಿ  ಮದುವೆಯಿದ್ದ ಹಿನ್ನೆಲೆಯಲ್ಲಿ ತರೀಕೆರೆಯ ನಿವಾಸಿಗಳು ಕುಟುಂಬ ಸಮೇತ ಒಮಿನಿಯಲ್ಲಿ ಬಂದಿದ್ದಾರೆ. ಮಂಟಪದ ಮುಂಭಾಗದಲ್ಲಿ ಒಮಿನಿ ಪಾರ್ಕ್ ಮಾಡಿ , ಮದುವೆಗೆ ತೆರಳಿದ್ದಾರೆ. ಈ ವೇಳೆ ಒಮಿನಿಯಲ್ಲಿಯೇ ಮಹಿಳೆಯರಿಬ್ಬರು ತಮ್ಮ ವ್ಯಾನಿಟಿ ಬ್ಯಾಗ್ ಇಟ್ಟಿದ್ದರು. ಮದುವೆ ಮಂಟಪಕ್ಕೆ ಹೋಗಿ ಎಲ್ಲರನ್ನ ಮಾತನಾಡಿಸಿಕೊಂಡು ವಾಪಸ್ ಬಂದು ನೋಡುವಷ್ಟರಲ್ಲಿ ಒಮಿನಿಯೊಳಗಿದ್ದ ವ್ಯಾನಿಟಿ ಬ್ಯಾಗ್ ಕಳ್ಳತನವಾಗಿತ್ತು. 

ಒಮಿನಿಯ ಹಿಂಬದಿ ಡೋರ್ ಓಪನ್ ಮಾಡಿ ಕಳ್ಳರು ಬ್ಯಾಗ್ ಕದ್ದಿದ್ದರು. ಅಲ್ಲದೆ, ಇದಾದ ಕೆಲ ಹೊತ್ತಿನಲ್ಲಿಯೇ ವ್ಯಾನಿಟಿ ಬ್ಯಾಗ್​ ನಲ್ಲಿದ್ದ ಎಟಿಎಂನಿಂದ 10 ಸಾವಿರ ರೂಪಾಯಿ ಅಮೌಂಟ್ ಕೂಡ ಬಿಡಿಸಿದ್ದಾರೆ. ಇದನ್ನ ಗಮನಿಸಿ ಆತಂಕಗೊಂಡ ಕುಟುಂಬ ವಿನೋಬನಗರ ಪೊಲೀಸರಿಗೆ ದೂರು ನೀಡಿದ್ದು ಮೂರು ಲಕ್ಷ ರೂಪಾಯಿಗಳ ಚಿನ್ನಾಭರಣ, ನಗದು ಕಳ್ಳತನವಾಗಿದೆ ಎಂದು ದೂರು ನೀಡಿದ್ದಾರೆ. 

 


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ