MALENADUTODAY.COM | SHIVAMOGGA NEWS
ಶಿವಮೊಗ್ಗದಲ್ಲಿ ಮತ್ತೊಂದು ಆನ್ಲೈನ್ ವಂಚನೆ ಬಗ್ಗೆ ಎಫ್ಐಆರ್ ದಾಖಲಾಗಿದೆ. ಪ್ರತಿಷ್ಠಿತ ಆನ್ ಲೈನ್ ಶಾಪಿಂಗ್ ಆ್ಯಪ್ ಹೆಸರಿನಲ್ಲಿ 5 ಲಕ್ಷ ರೂ. ವಂಚನೆ ಆಗಿದೆ ಎಂದು ದೂರೊಂದನ್ನ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಗೆ ನೀಡಲಾಗಿದೆ. ಟಿವಿಗಳಲ್ಲಿ ಜಾಹಿರಾತು ಬರುವ ಆನ್ಲೈನ್ ಸಂಸ್ಥೆಯ ಹೆಸರಿನಲ್ಲಿ 13.50 ಲಕ್ಷ ರೂ. ಬಹುಮಾನ ಬಂದಿದೆ ಎಂದು ಪೋಸ್ಟ್ವೊಂದನ್ನ ಕಳುಹಿಸಲಾಗಿತ್ತು. ಈ ಪೋಸ್ಟ್ನಲ್ಲಿದ್ದ ಬಹುಮಾನದ ಆಸೆಗೆ ದೂರುದಾರರು ಪೋಸ್ಟ್ ನಲ್ಲಿದ್ದ ಮೊಬೈಲ್ ನಂಬರ್ ಗೆ ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತನಾಡಿದವರು, ಬಹುಮಾನದ ಮೊತ್ತದ ಶೇ.1ರಷ್ಟು ಹಣವನ್ನು ನೀವು ಪಾವತಿಸಬೇಕು ಎಂದು ಸೂಚಿಸಿದ್ದಾರೆ.
ಆತ ಫೋನ್ ಕಾಲ್ನಲ್ಲಿ ಹೇಳಿದ ಮಾತನ್ನು ನಂಬಿದ ದೂರುದಾರರು ತನ್ನ ಬ್ಯಾಂಕ್ ಖಾತೆ ಮತ್ತು ಮಗಳ ಬ್ಯಾಂಕ್ ಖಾತೆಯಿಂದ ಹಣ ಪಾವತಿಸಿದ್ದಾರೆ. ಒಟ್ಟು 5,35,200 ರೂ. ಹಣ ಕಟ್ಟಿದ ಮೇಲೆ ತಾವು ಮೋಸಹೋಗುತ್ತಿರುವುದು ಗೊತ್ತಾಗಿದೆ. ಹೀಗಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಮಲೆನಾಡು ಟುಡೆಯ ತೀರ್ಥಹಳ್ಳಿ ವರದಿಗಾರರು ಜಿ.ಆರ್.ಮಂಜುನಾಥ್..8277414183 : ಸುದ್ದಿಗಾಗಿ ಸಂಪರ್ಕಿಸಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
