KARNATAKA NEWS/ ONLINE / Malenadu today/ Jul 6, 2023 SHIVAMOGGA NEWS
ರೈಲ್ವೆ ಪ್ರಯಾಣಿಕರಿಗೆ ಸಂಬಂಧಿಸಿದಂತೆ ನೈರುತ್ಯ ರೈಲ್ವೆ ವಿಭಾಗ ಪ್ರಕಟಣೆಯೊಂದನ್ನ ಹೊರಡಿಸಿದೆ. ಮುಖ್ಯವಾಗಿ ಶಿವಮೊಗ್ಗ- ತಾಳಗುಪ್ಪ- ಶಿವಮೊಗ್ಗ ಮಾರ್ಗದಲ್ಲಿ ನಿರ್ದಿಷ್ಟ ದಿನ ರೈಲು ಸಂಚಾರ ಬಂದ್ (Train No. 07349/07350 Shivamogga Town – Talguppa – Shivamogga Town Passenger )ಆಗುವ ಬಗ್ಗೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನೈರುತ್ಯ ರೈಲ್ವೆ ವಿಭಾಗ ಹೊರಡಿಸಿರುವ ಪ್ರಕಟಣೆಯ ವಿವರ ಇಲ್ಲಿದೆ ಓದಿ
ರೈಲು ಸಂಚಾರ ರದ್ದು
ರೈಲು ಸಂಖ್ಯೆ 07349/07350 ಶಿವಮೊಗ್ಗ ಟೌನ್ – ತಾಳಗುಪ್ಪ – ಶಿವಮೊಗ್ಗ ಟೌನ್ ಪ್ಯಾಸೆಂಜರ್ ಸ್ಪೆಷಲ್ ರೈಲಿನ ಸಂಚಾರವೂ ದಿನಾಂಕ 07.07.2023 ರಂದು ಬೆಳಿಗ್ಗೆ 11:30 ರಿಂದ ಮಧ್ಯಾಹ್ನ 03:30 ರವರೆಗೆ ರದ್ದಾಗಲಿದೆ. ಶಿವಮೊಗ್ಗ ಮತ್ತು ಕುಂಸಿ ನಿಲ್ದಾಣಗಳ ನಡುವೆ ಲೈನ್ ಬ್ಲಾಕ್ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರಣಕ್ಕೆ ರೈಲು ಸಂಚಾರ ರದ್ದು ಮಾಡಲಾಗಿದೆ.
ಭಾಗಶಃ ಸಂಚಾರ ರದ್ದು
ಮಿಲಾವಿಟ್ಟನ್-ಟುಟಿಕಾರನ್ ನಡುವಿನ ಜೋಡಿ ಮಾರ್ಗದ ಕಾಮಗಾರಿ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದುಗೊಳಿಸಲು ರೈಲ್ವೆಇಲಾಖೆ ಸೂಚನೆ ನೀಡಿದೆ.
ರೈಲು ಸಂಖ್ಯೆ 16236 ಮೈಸೂರು-ಟುಟಿಕೋರಿನ್ ಎಕ್ಸ್ಪ್ರೆಸ್ ರೈಲು 10.07.2023 ರಂದು ಮೈಸೂರಿನಿಂದ ವಾಂಚಿ ಮಣಿಯಾಚ್ಚಿ – ಟುಟಿಕಾರಿನ್ ನಡುವೆ ಭಾಗಶಃ ರದ್ದಾಗಿದೆ.
ರೈಲು ಸಂಖ್ಯೆ 16235 ಟುಟಿಕೋರಿನ್-ಮೈಸೂರು ಎಕ್ಸ್ಪ್ರೆಸ್ 11.07.2023 ರಂದು ಟುಟಿಕಾರಿನ್ ವಾಂಚಿ ಮಣಿಯಾಚ್ಚಿ ನಡುವೆ ಭಾಗಶಃ ರದ್ದಾಗಲಿದೆ
ಪ್ರಾಯೋಗಿಕವಾಗಿ ನಿಲುಗಡೆ
ರೈಲು ಸಂಖ್ಯೆ 12295 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ – ದಾನಾಪುರ ಸಂಘಮಿತ್ರ ಎಕ್ಸ್ಪ್ರೆಸ್ ರೈಲು 05.07.2023 ರಿಂದ ಪ್ರಾಯೋಗಿಕ ಆಧಾರದ ಮೇಲೆ ರಾಮಗುಂಡಂನಲ್ಲಿ (ಆಗಮನ ನಿರ್ಗಮನ – 02:09/02:10) ಒಂದು ನಿಮಿಷ ಕಾಲ ನಿಲ್ಲಲಿದೆ
ರೈಲು ಸಂಖ್ಯೆ 12578 ಮೈಸೂರು-ದರ್ಬಾಂಗ್ ಬಾಗ್ಮತಿ ಎಕ್ಸ್ಪ್ರೆಸ್ ರೈಲು 07.07.2023 ರಿಂದ ಪ್ರಾಯೋಗಿಕ ಆಧಾರದ ಮೇಲೆ ರಾಮಗುಂಡಂನಲ್ಲಿ (ಆಗಮನ ನಿರ್ಗಮನ 06:44/06:45) ಒಂದು ನಿಮಿಷ ನಿಲುಗಡೆಯನ್ನು ಒದಗಿಸಲಾಗುವುದು.
ರೈಲು ಸಂಖ್ಯೆ 17212 ಯಶವಂತಪುರ- ಮಚಲಿಪಟ್ಟಣಂ ಕೊಂಡವೀಡು ಎಕ್ಸ್ಪ್ರೆಸ್ ರೈಲು 06.07.2023 ರಿಂದ ಪ್ರಾಯೋಗಿಕ ಆಧಾರದ ಮೇಲೆ ಕುಂಬಮ್ನಲ್ಲಿ (ಆಗಮನ / ನಿರ್ಗಮನ 00:04 / 00:05) ಒಂದು ನಿಮಿಷ ನಿಲುಗಡೆಯನ್ನು ಒದಗಿಸುತ್ತದೆ.
ರೈಲು ಸಂಖ್ಯೆ 16569 ಯಶವಂತಪುರ-ಕಾಚಿಗುಡ ಎಕ್ಸ್ಪ್ರೆಸ್ ರೈಲು ಶ್ರೀರಾಮನಗರದಲ್ಲಿ ಎರಡು ನಿಮಿಷ ನಿಲುಗಡೆ ಮತ್ತು ಜಡ್ಚೆರ್ಲಾ ಮತ್ತು ಶಾದ್ನಗರದಲ್ಲಿ ಒಂದು ನಿಮಿಷ ನಿಲ್ಲಲಿದೆ.. (ಆಗಮನ / ನಿರ್ಗಮನ – ಮಧ್ಯಾಹ್ನ 11:44/ 11:46, 01:17/01:18 ಮತ್ತು 01:43/01:44) ಪ್ರಾಯೋಗಿಕ ಆಧಾರದ ಮೇಲೆ )
ರೈಲು ಸಂಖ್ಯೆ 17604 ಯಶವಂತಪುರ- ಕಾಚಿಗುಡ ಎಕ್ಸ್ಪ್ರೆಸ್ ರೈಲು 05.07.2023 ರಿಂದ ಪ್ರಾಯೋಗಿಕ ಆಧಾರದ ಮೇಲೆ ಶಾದ್ನಗರ್ದಲ್ಲಿ (ಆಗಮನ / ನಿರ್ಗಮನ – 03:25 / 03:26 ಬೆಳಿಗ್ಗೆ) ಒಂದು ನಿಮಿಷ ನಿಲುಗಡೆಯನ್ನು ಒದಗಿಸುತ್ತದೆ.