ವಿಐಎಸ್​ಎಲ್ ಮುಚ್ಚುವ ನಿರ್ಧಾರದ ಹಿಂದೆ ಖಾಸಗಿಯವರಿಗೆ ಮಾರಾಟದ ಹುನ್ನಾರ! ಹೆಚ್​.ವಿಶ್ವನಾಥ್​ ಹೇಳಿದ್ದೇನು?

Malenadu Today

 MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ : ವಿಐಎಸ್ ಎಲ್ ಕಾರ್ಖಾನೆ ನಡೆಸಲು ಖಾಸಗಿಯವರು ಮುಂದೆ ಬಂದಿಲ್ಲವೆಂದರೆ ಸರ್ಕಾರವೇ ನಡೆಸಲಿ, ಅದನ್ನು ಬಿಟ್ಟು ಮುಚ್ಚಲು ಹೊರಟಿರುವುದು ಖಂಡನೀಯ ಎಂದು ವಿಧಾನ ಪರಿಷತ್ ಸದಸ್ಯ ಎಚ್ .ವಿಶ್ವನಾಥ ಹೇಳಿದರು. ಇಂದು ಪ್ರೆಸ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಮಾತನಾಡಿದ ಅವರು, ಕಾರ್ಖಾನೆ ಕನ್ನಡ ನಾಡಿನ ಅಸ್ಥಿತೆಯ ಪ್ರಶ್ನೆಯಾಗಿದೆ. ಇಲ್ಲಿ ಎಲ್ಲಾ ಮೂಲ ಸೌಕರ್ಯಗಳಿರುವುದರಿಂದ ಸರ್ಕಾರವೇ ಒಂದಿಷ್ಟು ಹಣ ಹಾಕಿ ನಡೆಸಲಿ ಎಂದು ಆಗ್ರಹಿಸಿದರು. 

READ :  ಪ್ರಯಾಣಿಕರಲ್ಲಿ ವಿನಂತಿ! ಫೆಬ್ರವರಿ 26 ಮತ್ತು 27 ಕೆಎಸ್​ಆರ್​ಟಿಸಿ ಬಸ್ ಸಂಚಾರಲ್ಲಿ ವ್ಯತ್ಯಯ! ಕಾರಣ ಇಲ್ಲಿದೆ

ಬೇರೆ ವಿಷಯಕ್ಕೆ ತಲೆ, ಕೈ ಕತ್ತರಿಸಿ ಎನ್ನುವ ಇಲ್ಲಿನ ಈಶ್ವರಪ್ಪನವರಿಗೆ ಕಾರ್ಖಾನೆ ಪರವಾಗಿ ಹಾಗೂ ಮೋದಿ ವಿರುದ್ಧ ಮಾತನಾಡುವ ಧೈರ್ಯವಿಲ್ಲ. ಯಡಿಯೂರಪ್ಪನವರು ಜಿಂದಾಲ್‌ಗೆ ವಿಐಎಸ್ ಎಲ್ ಕಾರ್ಖಾನೆ ಕೊಡಿಸಿ  ತಮ್ಮ ಪಾಲು ಪಡೆಯಲು ಹವಣಿಸುತ್ತಿದ್ದಾರೆ ಎಂದು ಆರೋಪಿಸಿದ್ರು. ಇಷ್ಟೆ ಅಲ್ಲದೆ,   ಖಾಸಗಿ ಕಂಪನಿಗಳಿಗೆ ಬೆಲೆ ಬಾಳುವ ಭೂಮಿಯನ್ನು ಮಾರುವ ಹುನ್ನಾರವೂ ಸಹ ವಿಐಎಸ್​ಎಲ್​ ಮುಚ್ಚುವ ನಿರ್ಧಾರದ ಹಿಂದೆ ಇರಬಹುದು ಎಂಬ ಅನುಮಾನ ಬರುತ್ತಿದೆ ಎಂದರು. 

ಕಾರ್ಖಾನೆಗಳನ್ನು ಮುಚ್ಚುವುದೇ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯೇ ಎಂದು ಟೀಕಿಸಿದ ವಿಶ್ವನಾಥ್​  ಬೆಂಗಳೂರಿನಲ್ಲಿ ನಡೆದ ಹೂಡಿಕೆದಾರರ ಸಮ್ಮೇಳನದಲ್ಲಿ ಒಂದು ಲಕ್ಷ ರೂಪಾಯಿಯನ್ನೂ ಶಿವಮೊಗ್ಗಕ್ಕೆ ತರಲು ಸಾಧ್ಯವಾಗಿಲ್ಲ ಎಂದರೆ ಇಲ್ಲಿನ ರಾಜಕಾರಣಿಗಳ ಸಾಮರ್ಥ್ಯದ ಅರಿವಾಗುತ್ತದೆ.

ಮಾಜಿ ಮುಖ್ಯಮಂತ್ರಿ ಮತ್ತು ಸಂಸದರು ಕೇಂದ್ರ ಮಟ್ಟದಲ್ಲಿ ಮಾತುಕತೆ ನಡೆಸಿ ವಿಐಎಸ್‌ಎಲ್‌ಗೆ 500 ಕೋಟಿ ರೂ. ಬಂಡವಾಳ ತರಲಾಗಿಲ್ಲ. ಸಾವಿರಾರು ಕುಟುಂಬಗಳ ಹೆಣ್ಣುಮಕ್ಕಳ ಕಣ್ಣೀರಿನ ಶಾಪ ಇವರಿಗೆ ತಟ್ಟುತ್ತದೆ. ಮೈಸೂರು ಅರಸರ ಕಾಲದಲ್ಲಿ ಆದ ಕಾರ್ಖಾನೆಯನ್ನು ಬಿಜೆಪಿ ಆಡಳಿತದಲ್ಲಿ ಮುಚ್ಚವ ಕೆಲಸ ಆಗುತ್ತದೆ. ಪ್ರಧಾನಿ ವಿಮಾನ ನಿಲ್ದಾಣ ಉದ್ಘಾಟನೆಗೆ ಬರುತ್ತಿದ್ದಾರೆ. ಅವರಿಗೆ ಕಾರ್ಖಾನೆ ಉಳಿಸುವ ಬಗ್ಗೆ ಇಲ್ಲಿನ ಜನಪ್ರತಿನಿಧಿಗಳು ಮನವರಿಕೆ ಮಾಡಿಕೊಡಬೇಕಿದೆ.

READ : ಆತಂಕ ಮೂಡಿಸಿದ ಕೆಂಜಿಗಾಪುರ ಭಟ್ಟರ ಮನೆಯ ರಾಬರಿ ಕೇಸ್!ಒಬ್ಬರೇ ಟಾರ್ಗೆಟ್! ಒಂದೇ ವಾರದಲ್ಲಿ 2 ಸಲ ರಾಬರಿ ₹5 ಲಕ್ಷಕ್ಕೂ ಹೆಚ್ಚು ರಾಬರಿ! ಸಾಗರ ಪೊಲೀಸರಿಗೆ ಸವಾಲಾಯ್ತಾ ಕೇಸ್​

ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಬಡತನ ನಿವಾರಣೆಯ ಕಾರ್ಯಕ್ರಮ ಜಾರಿಯಾಗುತ್ತಿಲ್ಲ. ಇಡೀ ರಾಜ್ಯ ಇಂದು ಲ್ಯಾಂಡ್ ಮಾಫಿಯಾದಲ್ಲಿ ಮುಳುಗಿ ಹೋಗಿದೆ. ಬಿಜೆಪಿಯವರು ಮಠಾಧೀಶರಿಗೆ ಟಿಕೆಟ್ ನೀಡಲು ಹೊರಟಿದ್ದಾರೆ. ಇಂದಿನ ರಾಜಕೀಯ ರಿಯಲ್ ಎಸ್ಟೇಟ್ ಆಗಿದೆ ಎಂದು ಹೆಚ್​. ವಿಶ್ವನಾಥ್​ ಸಂವಾಧದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ, ಕಾರ್ಯದರ್ಶಿ ಎಸ್., ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗೋಪಾಲ ಯಡಗೆರೆ, ಕಾವ್ಯದರ್ಶಿ ಸಂತೋಷ್ ಇದ್ದರು.

Share This Article