terrorists attack : ಉಗ್ರರರನ್ನು ಹುಡುಕಿ ಕೊಟ್ಟವರಿಗೆ 20 ಲಕ್ಷ ಬಹುಮಾನ

prathapa thirthahalli
Prathapa thirthahalli - content producer

terrorists attack : ಪಹಲ್ಗಾಮ್​ನಲ್ಲಿ​ ಉಗ್ರರು ಪ್ರವಾಸಿಗರನ್ನು ಗುಂಡಿಕ್ಕಿ ಹತ್ಯೆ ನಡೆಸಿದರು.ಇದಕ್ಕೆ ಪ್ರತಿಯಾಗಿ ಭಾರತ ಆಪರೇಷನ್​ ಸಿಂಧೂರ್​ ಹೆಸರಿನಲ್ಲಿ ದಾಳಿ ನಡೆಸಿದ್ದು ಅನೇಕ ಉಗ್ರ ನೆಲೆಗಳನ್ನು ದ್ವಂಸ ಮಾಡಿದೆ. ಇದೀಗ ಅಮೇರಿಕ ಮಧ್ಯಸ್ಥಿಕೆ ವಹಿಸಿ ಎರಡು ದೇಶಗಳಿಗೆ ಕದನ ವಿರಾಮ ಘೋಷಿಸಿದೆ. ಇದರ ಬೆನ್ನಲ್ಲೆ ಪುಲ್ವಾಮ ಜಿಲ್ಲೆ ಪಹಲ್ಗಾಮ್​ ದಾಳಿಯಲ್ಲಿ ಭಾಗಿಯಾದ ಭಯೋದ್ಪಾದಕರನ್ನು ಹುಡುಕಿ ಕೊಟ್ಟವರಿಗೆ ಬೃಹತ್ ಮೊತ್ತದ ನಗದು ಬಹುಮಾನವನ್ನು ಘೋಷಿಸಿದೆ.

terrorists attack : ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಿದವರಿಗೆ  ಪುಲ್ವಾಮ ಜಿಲ್ಲೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದೆ.  ಉಗ್ರರ ಫೋಟೋಗಳನ್ನು ಹಾಕಿ ಬಹುಮಾನ ಘೋಷಿಸಿರುವ ಪೋಸ್ಟರ್‌ಗಳು ಶೋಪಿಯಾನ್ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ ಉಗ್ರರ ಬಗ್ಗೆ ಮಾಹಿತಿ ನೀಡಿದ ಮಾಹಿತಿದಾರರ ಗುರುತನ್ನು ಗೌಪ್ಯವಾಗಿಡಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

 

Share This Article