ನವೆಂಬರ್, 09, 2025 ರ ಮಲೆನಾಡು ಟುಡೆ ಸುದ್ದಿ : ಮನೆ ಬಾಡಿಗೆದಾರರು ಎಂದಿಗೂ ಮಾಲೀಕರಾಗುವುದಿಲ್ಲ, ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ , ಮಾಲೀಕರ ಕಾನೂನು ಹಕ್ಕುಗಳನ್ನು ಮತ್ತಷ್ಟು ಬಲಪಡಿಸಿದ ಸರ್ವೋಚ್ಚ ನ್ಯಾಯಾಲಯ, ಬಾಡಿಗೆದಾರರು ದೀರ್ಘಕಾಲ ನೆಲೆಸಿದ್ದರೂ ಮಾಲೀಕತ್ವ ಪಡೆಯಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ.
Supreme Court Rules Tenants Never Become Owners

ಶಿವಮೊಗ್ಗದಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ಗಳು ಎಲ್ಲೆಲ್ಲಿ ಇವೆ!?
ಮನೆ ಬಾಡಿಗೆದಾರರು (Tenant) ಮತ್ತು ಮಾಲೀಕರ (Owner) ನಡುವಿನ ಸುದೀರ್ಘ ಕಾಲದ ಕಾನೂನು ಸಂಘರ್ಷಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ಬಾಡಿಗೆದಾರರು ಯಾವುದೇ ಕಾರಣಕ್ಕೂ ಮನೆಯ ಮಾಲೀಕರಾಗಲು ಸಾಧ್ಯವಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ ತೀರ್ಪು/Tenants Never Become Owners
ಯಾರೇ ಬಾಡಿಗೆದಾರ ಐದು ಅಥವಾ ಐವತ್ತು ವರ್ಷಗಳ ಕಾಲ ಬಾಡಿಗೆ ಮನೆಯಲ್ಲಿದ್ದರೂ ಅದರ ಮಾಲೀಕತ್ವ ಹೊಂದುವುದು ಅಸಾಧ್ಯ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಜ್ಯೋತಿ ಶರ್ಮಾ ಮತ್ತು ವಿಷ್ಣು ಗೋಯಲ್ ನಡುವಿನ ಪ್ರಕರಣದಲ್ಲಿ ಈ ತೀರ್ಪು ನೀಡಿದೆ. ಬಾಡಿಗೆದಾರನೊಬ್ಬ ಮಾಲೀಕರ ಅನುಮತಿ ಪಡೆದು ಮನೆ ಪ್ರವೇಶಿಸುತ್ತಾನೆ. ಹೀಗೆ ಸ್ವಾಧೀನ ಪಡೆದುಕೊಂಡ ಮನೆ ಬಾಡಿಗೆದಾರನ ಪಾಲಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ವಿವರಿಸಿದೆ.

ದೆಹಲಿಯ ವಿಷ್ಣು ಗೊಯೆಲ್ ಎನ್ನುವವರು 30 ವರ್ಷ ಬಾಡಿಗೆಮನೆಯಲ್ಲಿ ವಾಸವಿದ್ದರಿಂದ ಅವರಿಗೆ ಮನೆ ತೆರವು ಮಾಡುವಂತೆ ಸೂಚನೆ ನೀಡುವಂತೆ ಮಾಲೀಕರಾದ ಜ್ಯೋತಿ ಶರ್ಮಾ ಮೊಕದ್ದಮೆ ಹೂಡಿದ್ದರು. 1980ರಿಂದ ಬಳಿಕ ಗೋಯೆಲ್ ಬಾಡಿಗೆ ಪಾವತಿಸುವುದನ್ನು ನಿಲ್ಲಿಸಿದ್ದರು. ಇದರ ಬೆನ್ನಲ್ಲೆ ಮನೆ ಮಾಲೀಕರು ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಈ ಮನೆ ತಮ್ಮದಾಗಿದೆ ಎಂದು ಗೋಯೆಲ್ ವಾದಿಸಿದ್ದರು. 1963ರ ಭೂಪರಿಮಿತಿ ಕಾಯ್ದೆಯನುಸಾರ ಯಾರೇ ಮನೆ ಬಾಡಿಗೆದಾರರು ಮಾಲೀಕರ ಅನುಮತಿ ಇಲ್ಲದೇ 12 ವರ್ಷ ವಾಸವಾಗಿದ್ದಲ್ಲಿ ಆ ಮನೆಯ ಮೇಲೆ ಹಕ್ಕು ಸ್ಥಾಪಿಸಬಹುದೆಂಬ ಕಾನೂನಿನ ಆಧಾರದಲ್ಲಿ ಗೋಯೆಲ್ ಮನೆ ಮೇಲೆ ಹಕ್ಕು ಮಂಡಿಸಿದ್ದರು.
ಶಿವಮೊಗ್ಗ : 3 ತಿಂಗಳ ಗರ್ಭಿಣಿಯನ್ನ ಹೊರಹಾಕಿದ್ದಕ್ಕೆ, ಒಂದು ವರ್ಷ ಅಂದರ್! ಕೋರ್ಟ್ ತೀರ್ಪು!
ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದ ಸುಪ್ರೀಂಕೋರ್ಟ್, ಬಾಡಿಗೆ ಎಂಬುದು ಅನುಮತಿ ಮೇರೆಗೆ ಕೈಗೊಳ್ಳುವ ಕಾನೂನು ಸಂಬಂಧ. ಇದರಲ್ಲಿ ಹಗೆತನದಿಂದ ಹಕ್ಕು ಚಲಾಯಿಸುವುದಕ್ಕೆ ಅವಕಾಶವಿಲ್ಲ ಎಂದಿದೆಯಷ್ಟೆ ಅಲ್ಲದೆ ಬಾಡಿಗೆದಾರ ಮಾಲೀಕನಾಗಲು ಸಾಧ್ಯವಿಲ್ಲ ಎಂದಿದೆ.
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ! Supreme Court Rules Tenants Never Become Owners
ಆನವಟ್ಟಿ ನಿವಾಸಿ, ಆಲ್ಕೊಳ ಇಡ್ಲಿ ಗಾಡಿ, ₹1 ಲಕ್ಷ ಮತ್ತು ಪೊಲೀಸ್ ಪ್ರಕಟಣೆಯ ಕಥೆ! ಶಿವಮೊಗ್ಗಲ್ಲಿ ಹೀಗೆಲ್ಲಾ ಆಗುತ್ತೆ