tell this to Modi | ಶಿವಮೊಗ್ಗದ ಮಂಜುನಾಥ್ ರವರು ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೂ ಮುನ್ನ ಅಲ್ಲಿ ಏನು ನಡೆಯಿತು ಎನ್ನುವುದನ್ನು ಅವರ ಪತ್ನಿ ಪಲ್ಲವಿ ರಾಷ್ಟ್ರೀಯ ಮಾಧ್ಯಮಗಳ ಜೊತೆಗೆ ಹಂಚಿಕೊಂಡಿದ್ದಾರೆ. ಅದರ ವಿವರ ಗಮನಿಸುವುದಾದರೆ, ನಿನ್ನೆ ನಡೆದ ಘಟನೆಯ ಬಗ್ಗೆ ಮಾತನಾಡಿರುವ ಪಲ್ಲವಿಯವರು
ನಾವು ಮೂವರು, ನಾನು, ನನ್ನ ಗಂಡ ಮತ್ತು ನಮ್ಮ ಮಗ , ಕಾಶ್ಮೀರಕ್ಕೆ ಹೋಗಿದ್ದೆವು. ಮಧ್ಯಾಹ್ನ 1.30 ರ ಸುಮಾರಿಗೆ ಟೆರರ್ ಅಟ್ಯಾಕ್ ಆಯಿತು. ಆಗ ನಾವು ಪಹಲ್ಗಾಮ್‌ನಲ್ಲಿದ್ದೆವು. ನನ್ನ ಕಣ್ಣ ಮುಂದೆಯೇ ನನ್ನ ಪತಿ ಉಸಿರುಬಿಟ್ಟರು. ನನಗಿನ್ನೂ ಆ ಘಟನೆ ಕೆಟ್ಟ ಕನಸಿನಂತೆ ಬಾಸವಾಗುತ್ತಿದೆ. ಆ ಕ್ಷಣವನ್ನು ನಿಜವೆಂದು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದಿದ್ದಾರೆ. ದಾಳಿಯಾದ ಬಳಿ ಸ್ಥಳೀಯರು ನಮ್ಮ ರಕ್ಷಣೆಗೆ ಬಂದಿದ್ದಾರೆ. ಸ್ಥಳೀಯ ಮೂವರು ವ್ಯಕ್ತಿಗಳು ನನ್ನನ್ನು ರಕ್ಷಿಸಿದರು.
tell this to Modi | ಹಿಂದೂಗಳೇ ಟಾರ್ಗೆಟ್
ತಮ್ಮ ಮಾತನ್ನು ಮುಂದುವರಿಸುತ್ತಾ ಪಲ್ಲವಿ ಉಗ್ರರು ಹಿಂದೂಗಳನ್ನು ಟಾರ್ಗಟ್ ಮಾಡಿದ್ದಂತಿತ್ತು. ಅವರು ನಮ್ಮ ಮೇಲೆ ದಾಳಿ ಮಾಡಿದಾಗ ನನ್ನನ್ನೂ ಸಹ ಕೊಲ್ಲು ಎಂದೆ. ನನ್ನ ಗಂಡನನ್ನು ಕೊಂದಿದ್ದೀರಿ. ನನ್ನನ್ನೂ ಕೊಂದು ಎಂದಾಗ, ಉಗ್ರರ ಪೈಕಿ ಒಬ್ಬಾತ, ಹೋಗಿ ಮೋದಿಗೆ ಹೋಗು ಹೇಳು, ನಾನು ನಿನ್ನನ್ನು ಕೊಲ್ಲುವುದಿಲ್ಲ ಎಂದಿದ್ದ.