ಸೆಪ್ಟೆಂಬರ್ 1, 2025 | ಶಿವಮೊಗ್ಗ | ಮಲೆನಾಡು ಟುಡೇ ನ್ಯೂಸ್ | ಶಿವಮೊಗ್ಗ ಜಿಲ್ಲೆಯಲ್ಲಿ ಆತಂಕಕಾರಿ ಘಟನೆಯೊಂದು ನಡೆದಿದ್ದು, ಘಟನೆಯಲ್ಲಿ ಸ್ವಂತ ಅಣ್ಣನೇ ಆರೋಪಿಯಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ತಾಲ್ಲೂಕು ಒಂದರ ಸರ್ಕಾರಿ ಶಾಲೆಯ ಬಾಲಕಿಯೊಬ್ಬಳು ತನ್ನ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ್ದ ಬಗ್ಗೆ ವರದಿಯಾಗಿತ್ತು. ಇದೀಗ ಪ್ರಕರಣದಲ್ಲಿ ಆಕೆಯ ಸ್ವಂತ ಅಣ್ಣನೇ ಆರೋಪಿಯಾಗಿದ್ದಾನೆ. ಆತನು ಸಹ ಅಪ್ರಾಪ್ತನಾಗಿದ್ದು ಘಟನೆಯು ಆತಂಕಕ್ಕೆ ಕಾರಣವಾಗಿದೆ.

ಈ ವಿಚಾರದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೂಡ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ ಎಂದು ಆಯೋಗದ ಸದಸ್ಯ ಶಶಿಧರ ಕೋಸಂಬೆ ತಿಳಿಸಿದ್ದಾರೆ. ನಡೆದಿರುವ ಘಟನೆಯಲ್ಲಿ 9 ತರಗತಿಯಲ್ಲಿ ಓದುತ್ತಿದ್ದ ಬಾಲಕಿಯು ಏಳೂವರೆ ತಿಂಗಳಿಗೆ ಮಗುವಿಗೆ ಜನ್ಮ ನೀಡಿದ್ದಾಳೆ. ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಹಾಗೂ ಮಗುವನ್ನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಯೊಂದರಲ್ಲಿ ಅಡ್ಮಿಟ್ ಮಾಡಲಾಗಿದೆ. ಇತ್ತ ಅಪ್ರಾಪ್ತ ಬಾಲಕಿಯ ಮೇಲೆ ಆಕೆಯ ಅಣ್ಣ ಫೋಷಕರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಯಾರಿಗೂ ಹೇಳದಂತೆ ಆತ ಬೆದರಿಸಿದ್ದರಿಂದ ಅಪ್ರಾಪ್ತೆ ಸುಮ್ಮನಿದ್ದಳು ಎನ್ನಲಾಗಿದೆ. ಸದ್ಯ ಪ್ರಕರಣ ತೀವ್ರ ಗಂಭೀರ ಸ್ವರೂಪ ಪಡೆದುಕೊಂಡಿದೆ.
Teen Gives Birth in Shivamogga Karnataka
MalenaduToday News, Shimoga crime news, ಶಿವಮೊಗ್ಗ, ಅತ್ಯಾಚಾರ, ಪೋಕ್ಸೋ ಕಾಯ್ದೆ, ಬಾಲಕಿ, ಹೆರಿಗೆ, ಪೊಲೀಸ್, ದೂರು, ಬಾಲಕ, ಮಕ್ಕಳ ಹಕ್ಕುಗಳ ಆಯೋಗ, Shivamogga, assault, POCSO Act, teenager, childbirth, police complaint, brother, child rights commission.

