ಆಟೋ ಡ್ರೈವರ್​ಗೆ ವಾರ್ನಿಂಗ್, ಆಂಬುಲೆನ್ಸ್​ ಚಾಲಕನ ₹10 ಸಾವಿರ ಫೈನ್!

ಆಗಸ್ಟ್ 31 2025 : ಮಲೆನಾಡು ಟುಡೆ ಸುದ್ದಿ : 50 ಪರ್ಸೆಂಟ್ ರಿಯಾಯತಿಯ ಜೊತೆಜೊತೆಗೆ ಕಾನೂನು ಉಲ್ಲಂಘಿಸುವವರಿಗೆ ಶಿವಮೊಗ್ಗ ಟ್ರಾಫಿಕ್ ಪೊಲೀಸರು ದಂಡ ಹಾಕುವುದನ್ನ ಇನ್ನಷ್ಟು ಚುರುಕುಗೊಳಿಸಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಇತ್ತೀಚೆಗೆ ಮೀಟರ್​ ಹಾಕದ ವಿಚಾರಕ್ಕೆ ಪ್ಯಾಸೆಂಜರ್​ ಜೊತೆಗೆ ಜಗಳವಾಡಿದ್ದ ಆಟೋ ಡ್ರೈವರ್ ದಂಡ ಹಾಕಿದ್ದ ಟ್ರಾಫಿಕ್ ಪೊಲೀಸರು, ಇದೀಗ ಬಾಡಿಗೆ ವಿಚಾರದಲ್ಲಿ ಹೆಚ್ಚು ಬಾಡಿಗೆ ಕೆಳಿದ್ದಕ್ಕೆ ಆಟೋ ಚಾಲಕರೊಬ್ಬರಿಗೆ ದಂಡ ಹಾಕಿದ್ದಾರೆ.  

Shivamogga Malenadu Today

ಆಗಸ್ಟ್ 29, 2025ರಂದು ಈ ಘಟನೆ ನಡೆದಿದ್ದು,  ಚಾಲಕ ನಿಗದಿತ ದರಕ್ಕಿಂತ ಹೆಚ್ಚು ಬಾಡಿಗೆ ಕೇಳಿದ್ದಕ್ಕೆ, ಪ್ರಯಾಣಿಕರು ತಕ್ಷಣವೇ ಸಂಚಾರಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ದೂರು (Complaint) ನೀಡಿದ್ದಾರೆ. ಹೀಗಾಗಿ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ತಿರುಮಲೇಶ್, ಎ.ಎಸ್.ಐ. ರಾಜು ಮತ್ತು ಹೆಚ್.ಸಿ. ರಮೇಶ್ ಅವರು ಆಟೋ ಮತ್ತು ಅದರ ಚಾಲಕನನ್ನು ಠಾಣೆಗೆ ಕರೆಸಿ ವಿಚಾರಣೆ (Investigation) ನಡೆಸಿದ್ದಾರೆ. 

ಇನ್ನೊಂದು ಪ್ರಕರಣದಲ್ಲಿ  ಕುಡಿದು ಆಂಬುಲೆನ್ಸ್‌ ಚಲಾಯಿಸುತ್ತಿದ್ದ ಡ್ರೈವರ್​ಗೆ  ₹10,000 ದಂಡ ವಿಧಿಸಲಾಗಿದೆ. ಆಗಸ್ಟ್ 25 ರಂದು ವಾಹನಗಳ ತಪಾಸಣೆ (Inspection) ನಡೆಸುತ್ತಿದ್ದ ವೇಳೆ ಆಂಬುಲೆನ್ಸ್ ಚಾಲಕನೊಬ್ಬನನ್ನು  ಸಂಚಾರ ಪೊಲೀಸರು, ಡ್ರಂಕ್ ಆ್ಯಂಡ್ ಡ್ರೈವ್ ಟೆಸ್ಟ್ಗೆ ಒಳಪಡಿಸಿದ್ದಾರೆ. ಈ ವೇಳೆ ಆತ ಮದ್ಯಪಾನ ಮಾಡಿರುವುದು ಗೊತ್ತಾಗಿದೆ.  ಹಾಗಾಗಿ ಪಶ್ಚಿಮ ಸಂಚಾರ ಠಾಣೆಯ ಪಿಎಸ್‌ಐ ತಿರುಮಲೇಶ್  ಚಾಲಕನಿಗೆ ದಂಡ ಹಾಕಿ ಕೋರ್ಟ್ಗೆ ಚಾರ್ಜ್​ಶೀಟ್ ಹಾಕಿದ್ದರು. 4ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಚಾಲಕನಿಗೆ ದಂಡ ವಿಧಿಸಿದೆ. 

shivamogga traffic fine auto ambulance driver
shivamogga traffic fine auto ambulance driver

shivamogga traffic fine auto ambulance driver

Leave a Comment