ಈ ದೀಪಾವಳಿಗೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹದಾಮ ಓಪನ್ ಇರುತ್ತೆ! ಇಲ್ಲಿದೆ ಮಾಹಿತಿ

ajjimane ganesh

ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 16 2025:  ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗಾಗಿ ಮುಂದಿನ  ಅಕ್ಟೋಬರ್ 21, 2025 ರ ಮಂಗಳವಾರವೂ ತ್ಯಾವರೆಕೊಪ್ಪದಲ್ಲಿರುವ ಹುಲಿ ಮತ್ತು ಸಿಂಹದಾಮ ತೆರದಿರಲಿದೆ.  ಹೆಚ್ಚಿನ ಸಂಖ್ಯೆಯಲ್ಲಿ ವನ್ಯಜೀವಿ ಧಾಮದ ವೀಕ್ಷಣೆಗೆ ಮತ್ತು ಪ್ರವಾಸಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಹುಲಿ-ಸಿಂಹಧಾಮದ ಮೃಗಾಲಯ (Zoo) ಹಾಗೂ ಸಫಾರಿ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. 

tyavarekoppa tiger and lion safari / ತ್ಯಾವರೆಕೊಪ್ಪ ಹುಲಿ ಸಿಂಹಧಾಮಕ್ಕೆ ಬರಲಿದೆ 2 ಸಿಂಹದ ಮರಿಗಳು!

- Advertisement -

ಸಾಮಾನ್ಯವಾಗಿ ಮಂಗಳವಾರದಂದು ಸಿಂಹಧಾಮಕ್ಕೆ ರಜೆ ಇರುತ್ತದೆ. ಆದರೆ ದೀಪಾವಳಿ ರಜೆಯ ಸಮಯದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು ಪ್ರಕಟಣೆಯನ್ನು ನೀಡಲಾಗಿದೆ.  ಈ ಅವಕಾಶವನ್ನು ಸಾರ್ವಜನಿಕರು ಹಾಗೂ ಶಾಲಾ-ಕಾಲೇಜುಗಳ ಪ್ರವಾಸಿ ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು ಎಂದು ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ. 

Tavarekoppa Tiger Lion Safari Open on Tuesday, October 21st, 2025 Due to Diwali
Tavarekoppa Tiger Lion Safari Open on Tuesday, October 21st, 2025 Due to Diwali

ಸಿಗಂದೂರು, ಸಾಗರಕ್ಕೆ 2 ಪೊಲೀಸ್ ಸ್ಟೇಷನ್​ ಕೇಳಿದ ಶಾಸಕ ಬೇಳೂರು ಗೋಪಾಲಕೃಷ್ಣ

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel  instagram youtube telegram  google business   malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Tavarekoppa Tiger Lion Safari Open on Tuesday, October 21st, 2025 Due to Diwali
Tavarekoppa Tiger Lion Safari Open on Tuesday, October 21st, 2025 Due to Diwali

Tavarekoppa Tiger Lion Safari

Share This Article
Leave a Comment

Leave a Reply

Your email address will not be published. Required fields are marked *