ಗೋಡೆ ಸಂದಿಯಲ್ಲಿ ಸಿಕ್ಕಿದ್ದವು 10 ನಾಗರ ಹಾವಿನ ಮರಿಗಳು!

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನಲ್ಲಿ ಮನೆಯೊಂದರ ಗೋಡೆ ಬಿರುಕಿನ ಸಂದಿಯಲ್ಲಿ 10 ಹಾವಿನ ಮರಿಗಳು ಪತ್ತೆಯಾಗಿವೆ.  ಇಲ್ಲಿನ ಸುಂಕಸಾಲೆ ಪಂಚಾಯ್ತಿಯ ಕಾಟಿಖಾನ್​ನಲ್ಲಿರುವ ಮನೆಯೊಂದರಲ್ಲಿ ಈ ಘಟನೆ ಸಂಭವಿಸಿದೆ. ಇಲ್ಲಿಯ ನಿವಾಸಿಯೊಬ್ಬರ ಮನೆಯ ಗೋಡೆಯು ಬಿರುಕುಬಿಟ್ಟಿತ್ತು. ಆ ಬಿರುಕಿನಲ್ಲಿ ಏನೋ ಸದ್ದು ಬರುವುದನ್ನ ಗಮನಿಸಿದಾಗ ಅದರಲ್ಲಿ ಹಾವಿನ ಮರಿಗಳು ಓಡಾಡುವುದು ಕಾಣಿಸಿದೆ.  ಇದನ್ನ ನೋಡಿ ಗಾಬರಿಯಾದ ಮನೆಯವರು  ಸ್ಥಳಿಯವಾಗಿ ಹಾವುಗಳನ್ನು ಸಂರಕ್ಷಿಸುವ ಆರೀಫ್​ರನ್ನ ಕರೆಸಿಕೊಂಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅವರು, ಹಾವಿನ ಮರಿಗಳನ್ನು ಹಿಡಿದು, ಅವುಗಳು ನಾಗರ … Read more